Thursday, July 7, 2022
Home ಲೋಕಾಭಿರಾಮ ಉದ್ಯೋಗ ವಿಶ್ವ ದರ್ಜೆಯ ವಾಲ್ವ್ ಉತ್ಪಾದನೆ

ವಿಶ್ವ ದರ್ಜೆಯ ವಾಲ್ವ್ ಉತ್ಪಾದನೆ

ಉಡುಪಿ: ಇಲ್ಲಿಗೆ ಸಮೀಪದಕಲ್ಯಾಣಪುರದಲ್ಲಿ ಕಾರ್ಯಾಚರಿಸುತ್ತಿರುವ ಬೆಲ್ ಒ ಸೀಲ್ ವಾಲ್ವ್ಸ್ ಕಂಪೆನಿಯಲ್ಲಿ 26 ಇಂಚಿನ ಮೋಟಾರ್ ಚಾಲಿತ ಮತ್ತು ರಿಮೋಟ್ ಕಂಟ್ರೋಲ್ಡ್ ಬೆಲ್ಲೊ ಸೀಲ್ ಗೇಟ್ ವಾಲ್ವ್ ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಅಂಥ ವಾಲ್ವ್ಸ್ ಉತ್ಪಾದಿಸುವ ವಿಶ್ವದ ಮೊದಲನೆ ಕಂಪೆನಿ ತಮ್ಮದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ದೈತ್ಯ ಗಾತ್ರದ ವಾಲ್ವ್ ಗಳನ್ನು ಬೆಲ್ ಒ ಸೀಲ್ ವಾಲ್ವ್ಸ್ ಸವಾಲಾಗಿ ಸ್ವೀಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಆಶಯದ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳಿಸಿದೆ. ವಾಲ್ವ್ಗಳು ತಲಾ 2 ಟನ್ ಗಳಷ್ಟು ತೂಕ ಮತ್ತು ಸುಮಾರು 5 ಮೀ. ಎತ್ತ್ತರವಿದೆ. ಈ ವಾಲ್ವ್ ಗಳನ್ನು ಅಪಾಯಕಾರಿ ದ್ರವ ನಿರ್ವಹಿಸಲು ಬಳಸಲಾಗುತ್ತದೆ. ಬೆಂಜೀನ್ ಮತ್ತು ಬುಟಾಡಿನ್ (BENZENE&BUTADIENE)  ದ್ರವಗಳ ಅಪಾಯಕಾರಿ ಸ್ವಭಾವದಿಂದಾಗಿ ವಾಲ್ವ್ ಗಳು ಫ್ಯುಗಿಟಿವ್ ಎಮಿಷನ್ ಅರ್ಹತಾ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಈ ವಾಲ್ವ್ಸ್ ಉತ್ಪಾದನೆಯಲ್ಲಿ ವಿನ್ಯಾಸ ಮತ್ತು ಅಭಿವೃದ್ಧಿ ಕುರಿತು ಅನೇಕ ಸವಾಲು ಎದುರಿಸಿದ್ದರೂ ಬೆಲ್ ಒ ಸೀಲ್ ಎಂಜಿನಿಯರ್ ಗಳ ತಂಡ ಎಲ್ಲ ಸವಾಲು ಸ್ವೀಕರಿಸಿ, ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಲ್ ಒ ಸೀಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕುಮಾರ್ ಸಲೀನ್ಸ್ ನಿರಂತರ ಪ್ರೇರಣೆ, ಪ್ರೋತ್ಸಾಹ, ಬೆಂಬಲದಿಂದ ಇದು ಸಾಧ್ಯವಾಗಿದೆ.

ಪ್ರಾಜೆಕ್ಟ್ ಮ್ಯಾನೇಜ್ ಮೆಂಟ್ ಕನ್ಸಲ್ಟೆಂಟ್ ಅಂದರೆ, ಭಾರತ ಸರ್ಕಾರ ಘೋಷಿತ ನವರತ್ನ ಕಂಪೆನಿ ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (ಇಐಎಲ್), ವಿನ್ಯಾಸಗಳ ಅನುಮೋದನೆ ಮತ್ತು ಕೈಗೊಳ್ಳಬೇಕಾದ ವಿವಿಧ ಪರೀಕ್ಷೆಗಳಿಗೆ ಸಾಕ್ಷಿಯಾಯಿತು. ಬೆಲ್ ಒ ಸೀಲ್ ವಾಲ್ವ್ಸ್ ತಯಾರಿಸಿದ ಈ ವಾಲ್ವ್ ಗಳು ಜನರ ಸುರಕ್ಷತೆಯನ್ನು ಖಾತ್ರಿಪಡಿಸುವುದಲ್ಲದೆ, ಹೊರಸೂಸುವಿಕೆ ಕಡಿತಗೊಳಿಸುವ ಮೂಲಕ ಪರಿಸರ ಮತ್ತು ಪ್ರಕೃತಿ ಉಳಿಸುವಲ್ಲಿ ಬದ್ಧವಾಗಿದೆ.

ವಾಲ್ವ್ ಗಳನ್ನು ಎಚ್ಪಿಸಿಎಲ್- ಮಿತ್ತಲ್ ಎನರ್ಜಿ ಲಿಮಿಟೆಡ್ (ಎಚ್ಎಂಇಎಲ್) ಫಾರ್ಚೂನ್ 500 ಕಂಪೆನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಮಿತ್ತಲ್ ಎನರ್ಜಿ ಇನ್ವೆಸ್ಟ್ ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಸಿಂಗಾಪುರ ಅವರಿಗೆ ಸರಬರಾಜು ಮಾಡಲಾಗುತ್ತದೆ. ಅಲ್ಲದೆ, ಪಂಜಾಬಿನ ಎಚ್ಎಂಇಎಲ್.ನ ಗುರು ಗೋಬಿಂದ್ ಸಿಂಗ್ ಪಾಲಿಮರ್ ಯೋಜನೆಯಲ್ಲಿ ವಾಲ್ವ್ ಗಳನ್ನು ಅಳವಡಿಸಲಾಗುತ್ತದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!