ಫೆಬ್ರವರಿ 18 ರಂದು ಅಗರಖೇಡ ಪಿಕೆಪಿಎಸ್ ಚುನಾವಣೆ 

ಫೆಬ್ರವರಿ 18 ರಂದು ಅಗರಖೇಡ ಪಿಕೆಪಿಎಸ್ ಚುನಾವಣೆ 

ಫೆಬ್ರವರಿ 18 ರಂದು ಅಗರಖೇಡ ಪಿಕೆಪಿಎಸ್ ಚುನಾವಣೆ 

ಇಂಡಿ:ತಾಲೂಕಿನ ಚುನಾವಣೆಯಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿರುವ ಅಗರಖೇಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ಫೆಬ್ರವರಿ 18.2024 ರಂದು ನಡೆಯಲಿದೆ ಎಂದು ಅಧಿಕೃತ ಘೋಷಣೆ ಹೊರ ಬೀಳುತ್ತಲೇ ಗ್ರಾಮಸ್ಥರ ಚಿತ್ತ ಈಗ ಪಿಕೆಪಿಎಸ್ ದ  ಚುನಾವಣೆ ಕಡೆ ತಿರುಗಿದೆ. ಅಲ್ಲಲ್ಲಿ ಗುಂಪು ಗುಂಪಾಗಿ ಚುನಾವಣೆಗೆ ತಮ್ಮ ಉಮೇದವಾರರನ್ನು ತಯಾರಿ ಮಾಡಿಕೊಳ್ಳುವ ಕೆಲಸ ಬರದಿಂದ ಸಾಗಿದೆ ಯಾರು ಯಾರು ಚುನಾವಣೆ ಕಣದಲ್ಲಿ ಇರುತ್ತಾರೆ ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೆ ಎಂದು ಕಾಯ್ದು ನೋಡಬೇಕು. ಪಿಕೆಪಿಎಸ್ ದ ಚುನಾವಣೆಯ ಸಂಪೂರ್ಣ ಮಾಹಿತಿ ಇಂತಿದೆ. ದಿನಾಂಕ 18-02- 2024 ರಂದು ಬೆಳಗ್ಗೆ 9-00 ಗಂಟೆಯಿಂದ ಸಂಜೆ 4:00 ವರೆಗೆ ಚುನಾವಣೆ ನಡೆಯಲಿದೆ ರಿಟರ್ನಿಂಗ್ ಅಧಿಕಾರಿಯಾಗಿ ಕಾಂತು  ಎಸ್ ನಾಯಕ ಯು ಬಿ ಎಲ್ ಪಿ ಎಸ್ ಚವಡಿಹಾಳ ಶಿಕ್ಷಕರು ಆಗಮಿಸಲಿದ್ದಾರೆ. ಚುನಾವಣೆ ನಡೆಯುವ ಸ್ಥಳ ಸರಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ಅಗರಖೇಡ. ಚುನಾಯಿಸಬೇಕಾದ ಒಟ್ಟು ಸ್ಥಾನಗಳು12 ಇರುತ್ತವೆ. ಸಾಲಗಾರರ ಮತಕ್ಷೇತ್ರ ಈ ಪೈಕಿ 01) ಸಾಮಾನ್ಯ ಒಟ್ಟು 05 ಸ್ಥಾನಗಳು. 02) ಮಹಿಳಾ ಮೀಸಲು 2 ಸ್ಥಾನಗಳು..03) ಹಿಂದುಳಿದ ವರ್ಗ "ಅ " ಮೀಸಲು 01 ಸ್ಥಾನ. 04) ಹಿಂದುಳಿದ ವರ್ಗ 'ಬ" ಮೀಸಲು 01ಸ್ಥಾನ.05) ಪರಿಶಿಷ್ಟ ಜಾತಿ ಮೀಸಲು ಒಂದು ಸ್ಥಾನ.06) ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನ. ಈ ರೀತಿಯಾಗಿ ಮಾಹಿತಿ ಲಭ್ಯವಾಗಿದೆ.

ಉಮೇದುವಾರರಾಗಿ ನಿಲ್ಲಲು ಇಚ್ಚಿಸುವವರು ಕಡ್ಡಾಯವಾಗಿ ಈ ನಿಯಮಗಳು ಪಾಲಿಸಲೇಬೇಕು 01) ರಿಟರ್ನಿಂಗ್ ಆಫೀಸರವರೆಗೆ ದಿನಾಂಕ 03-02-2024 ರಿಂದ 10.02.2024 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರ ವರೆಗೆ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು 02) ಅಧಿಕಾರಿಗಳಿಂದ ನಾಮಪತ್ರ ಪರಿಶೀಲನೆ 11-02-2024 ರಂದು  ಬೆಳಿಗ್ಗೆ 11 ಗಂಟೆಯಿಂದ ಸಂಘದ ಕಚೇರಿಯಲ್ಲಿ ನೆರವೇರುತ್ತದೆ.03) ಅಧಿಕಾರಿಗಳಿಂದ ಚುನಾವಣೆ ಕಣದಲ್ಲಿ ಉಳಿದಿರುವ ಉಮೇದುವಾರರ ಪಟ್ಟಿ ಪ್ರಕಟಣೆ ದಿನಾಂಕ 11.2.2024 ರಂದು ನೋಟಿಸ್ ಬೋರ್ಡಿಗೆ  ಲಗತ್ತಿಸಲಾಗುವುದು.04) ಉಮೇದುವಾರರರು  ತನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದುಕೊಳ್ಳುವ ಕೊನೆಯ ದಿನಾಂಕ 12.02.2024 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3:00 ವರೆಗೆ 05) ಚುನಾವಣೆಗೆ ಸ್ಪರ್ಧಿಸಲು ಅರ್ಹರಾದ  ಉಮೇದವಾರರ ಹೆಸರು 12-02- 2024 ರಂದು ಮಧ್ಯಾಹ್ನ 3 ಗಂಟೆಯ ನಂತರ ಪ್ರಕಟಿಸಲಾಗುವುದು 06) ಉಮೇದುವಾರರಿಗೆ ಚುನಾವಣೆ ಚಿಹ್ನೆ  ಹಂಚಿಕೆ ಮಾಡುವುದು 12-02- 2024 ರಂದು ಸಾಯಂಕಾಲ.07) ಉಮೇದುವಾರರ ಹೆಸರು ಅವರ ಚಿಹ್ನೆಯನ್ನು ಒಳಗೊಂಡಪಟ್ಟಿ 14-02- 2024 ರಂದು ಬೆಳಿಗ್ಗೆ 10:30 ನಿಮಿಷಕ್ಕೆ ನೋಟಿಸ್ ಬೋರ್ಡ್ ಗೆ ಲಗತ್ತಿಸಲಾಗುವದು.08) ಚುನಾವಣೆ ಮತದಾನ 18-02- 2024 ರಂದು ಬೆಳಿಗ್ಗೆ 09-00 ಗಂಟೆಯಿಂದ ಸಾಯಂಕಾಲ 4:00 ಗಂಟೆಯವರೆಗೆ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆಯುತ್ತದೆ 09) ಮತಗಳ ಎಣಿಕೆ 18-02- 2024 ರಂದು ಸ್ಥಳ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನಡೆಯುವುದು.ಮತಗಳ ಎಣಿಕೆ ಮುಗಿದ ನಂತರ ಅಧಿಕಾರಿಗಳಿಂದ ಚುನಾವಣೆ ಫಲಿತಾಂಶ ಪ್ರಕಟಣೆ ಮಾಡುವುದು.
 ಸೂಚನೆಗಳು.01) ಸಂಘದ ಪ್ರತಿಯೊಬ್ಬ ಸದಸ್ಯರು ಕರ್ನಾಟಕ ಸಹಕಾರ ಸಂಘಗಳ ನಿಯಮ 13 ಎ ದ ಪ್ರಕಾರ ಕಡ್ಡಾಯವಾಗಿ ಸಂಘದಿಂದ ಭಾವಚಿತ್ರವಿರುವ ಗುರುತಿನ ಕಾರ್ಡ ಪಡೆದುಕೊಳ್ಳತಕ್ಕದ್ದು ಸಂಘದ ಗುರುತಿನ ಚೀಟಿ ಇಲ್ಲದೆ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶವಿಲ್ಲ.02) ಈಗಾಗಲೇ ಪಿಕೆಪಿಎಸ್ ದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಸಂಗರಾಜ ಎನ್  ಬಡಿಗೇರ ಇವರು ನೋಟಿಸ್ ಗಳನ್ನು  ತಮ್ಮ ಮನೆಗೆ ಕಳುಹಿಸಿದ್ದಾರೆ ಆಕಸ್ಮಿಕವಾಗಿ  ನೋಟಿಸ್ ಗಳು  ತಲುಪದೇ ಇದ್ದಲ್ಲಿ ಇದೆ ನೋಟಿಸ್ ಎಂದು ತಿಳಿದುಕೊಳ್ಳಲು ಸೂಚಿಸಿದ್ದಾರೆ.03) ಹೆಚ್ಚಿನ ಮಾಹಿತಿಗಾಗಿ ಸಂಘದ ಕಚೇರಿಯನ್ನು ಸಂಪರ್ಕಿಸಬಹುದು.