"ವಿದ್ಯಾರ್ಥಿಗಳು ಸತತ ಪರಿಶ್ರಮ ಅಧ್ಯಯನ ಯಶಸ್ವಿನ ಗುಟ್ಟು" 

"ವಿದ್ಯಾರ್ಥಿಗಳು ಸತತ ಪರಿಶ್ರಮ ಅಧ್ಯಯನ ಯಶಸ್ವಿನ ಗುಟ್ಟು" 

"ವಿದ್ಯಾರ್ಥಿಗಳು ಸತತ ಪರಿಶ್ರಮ ಅಧ್ಯಯನ ಯಶಸ್ವಿನ ಗುಟ್ಟು" 

ಸಿಂದಗಿ: ಸತತ ಅಧ್ಯಯನದ  ಮೂಲಕ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕು ಎಂದು ಬಾಗಲಕೋಟಿ ಕೆ.ಪಿ.ಟಿ.ಸಿ.ಎಲ್.ಚೀಫ್ ಇಂಜಿನಿಯರ್ ಕಾಶಿನಾಥ ಗು ಹಿರೇಮಠ ಹೇಳಿದರು. ತಾಲೂಕಿನ ಕನ್ನೊಳ್ಳಿ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ಜ್ಞಾನ ಜ್ಯೋತಿ ವಿದ್ಯಾ ಪ್ರಸಾರ (ರಿ) ಹಿರೇಮಠ ಶ್ರೀ ಸಿದ್ಧಲಿಂಗೇಶ್ವರ ಜ್ಞಾನ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ. ಶ್ರೀ ಸರಸ್ವತಿ ವಿದ್ಯಾನಿಕೇತನ ಪ್ರೌಢಶಾಲೆ. ಮಾತೃಶ್ರೀ ಬಸಲಿಂಗಮ್ಮ ಬಾಳಪ್ಪ ಭೂಸನೂರ ಕಲಾ, ವಾಣಿಜ್ಯ ಪದವಿ-ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳ ತಂದೆ-ತಾಯಂದಿರ ಪಾದ ಪೂಜೆ ಹಾಗೂ ವಿದ್ಯಾರ್ಥಿಗಳ 7 ನೇ ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ  ಉದ್ಘಾಟಿಸಿ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿ ಸರಕಾರಿ ಹುದ್ದೆ ಅಲಂಕರಿಸಬೇಕು ಎಂದು ಗುರಿಯೊಂದಿಗೆ ತಂದೆ-ತಾಯಿ ಗುರು ತೋರಿರುವ ಸನ್ಮಾರ್ಗದಲ್ಲಿ ನಡೆಯುವ ಮೂಲಕ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದರು. ಶಿಕ್ಷಕ ಸಾಹಿತಿ ಬಸವರಾಜ ಅಗಸರ ಮಾತನಾಡಿ ವಿದ್ಯಾರ್ಥಿಗಳು ಸತತ ಪರಿಶ್ರಮ ಶ್ರೆದ್ಧೆ ಮತ್ತು ನಿಷ್ಠೆಯಿಂದ ಆಳವಾದ ಅಧ್ಯಯನ ಶೀಲರಾದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು.ಶಿಕ್ಷಕರು ವಿದ್ಯಾರ್ಥಿಗಳು ಭಾವನಾತ್ಮಕ ಮತ್ತು ಆ ಸಕ್ತಿದಾಯಕ ಆಲೋಚನೆಗಳನ್ನು ನಾವು ಕಾಣಬೇಕು ಎಂದರು. ಕನ್ನೋಳ್ಳಿ ಹಿರೇಮಠದ ಷ.ಬ್ರ.ಸಿದ್ಧಲಿಂಗ ಶಿವಾಚಾರ್ಯರು ಸಭೆ ಸಾನಿಧ್ಯವಹಿಸಿ ಆಶೀರ್ವಚನ ನೀಡಿ  ನಮ್ಮ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ನಮ್ಮ ಶಿಕ್ಷಕರು ಕಠಿಣ ಪರಿಶ್ರಮವಹಿಸಿ  ಗುಣ ಮಟ್ಟದ ಶಿಕ್ಷಣ ನೀಡುವ ಮೂಲಕ ತಂದೆ ತಾಯಿಯಂದರ ಪಾದ ಪೂಜೆ ಮಾಡುವದರಿಂದ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಆಚಾರ -ವಿಚಾರ  ಜೀವನದಲ್ಲಿ ರೂಡಿಸಿ ಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ದೇವರ ಹಿಪ್ಪರಗಿ ಕೆಪಿಟಿಸಿಎಲ್ ಸಹಾಯಕ ಅಭಿಯಾಂತರ ಗಂಗಧಾರ ಲೋಣಿ ಸಿ.ಆರ್.ಪಿ ಬಿ.ಜಿ.ಬಿರಾದಾರ .ಸಿದಗೊಂಡಪ್ಪಗೌಡ ಬಿರಾದಾರ, ಬಾಬುಗೌಡ ಪಾಟೀಲ, ಮುತ್ತಪ್ಪ ಹರಿಜನ. ಶಂಕರ ಬಗಲಿ, ಸಿದ್ದಣ್ಣಸಾಹುಕಾರ ಕೊಲ್ಲೂರ, ಭಾಗಪ್ಪ ಶಿವಣಗಿ, ಯೋಗಪ್ಪ ಪಾರ್ಸನಳ್ಳಿ, ಶರಣಪ್ಪ ಮಾಗಣಗೇರಿ, ಸಿದ್ದಣ್ಣ ಗೊಲ್ಲಾಳಪ್ಪ ಚೌಧರಿ, ಶ್ರೀಶೈಲಗೌಡ ಪಾಟೀಲ, ಚನ್ನಪ್ಪ ಯಂಕಂಚಿ, ಲಕ್ಷ್ಮಣ ಪ್ರಸಾದ, ಎಸಪ್ಪಗೌಡ ಬಿರಾದಾರ, ದೊಡ್ಡಪ್ಪ ಮಂಗೊಂಡಿ, ರೇಣುಕಾಚಾರ್ಯ ಹಿರೇಮಠ ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ಶಿವಲೀಲಾ ಉದಂಡಪ್ಪ ಬಿರಾದಾರ   ವೇದಿಕೆ ಮೇಲೆ ಇದ್ದರು. ಹಂದಿಗನೂರ ಸರಕಾರಿ ಪ್ರೌಢ ಶಾಲೆಯ ಶಿಕ್ಷಕ ಎಸ್.ಕೆ.ಗುಗ್ಗರಿ ಕಾರ್ಯಕ್ರಮ ನಿರೂಪಿಸಿದರು.ಶಾಲೆಯ ಮುಖ್ಯಗುರು ಸಂಗಯ್ಯ ಗಚ್ಚಿನಮಠ ಸ್ವಾಗತಿಸಿ ವಂದಿಸಿದರು. ಶಾಲೆಯ ವಿದ್ಯಾರ್ಥಿಗಳಾದ ಐಶ್ವರ್ಯ ನಂದಿಗೇರಿ.ಶಿವಲೀಲಾ ಬಿರಾದಾರ. ಗೀತಾ ಯಾಳಗಿ, ಸಿದ್ದಮ್ಮ ನಾಗಠಾಣ ಅನಿಸಿಕೆ ಹೇಳಿದರು. ರೇಣುಕಾಚಾರ್ಯ ಹಿರೇಮಠ ಮಾಂತೇಶ ಕಾಳಗಿ ಮಹೇಶ ಭಂಟನೂರ ಅವರಿಂದ ಸಂಗೀತ ಸೇವೆ ಜರಗಿತು. ವಿವಿಧ ಪರೀಕ್ಷೆಯಲ್ಲಿ ಪಾಸದ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅಪಾರ ಪಾಲಕರು ಇದ್ದರು.