ಶಕ್ತಿಶಾಲಿ ದೇವತೆ ದಾನಮ್ಮ 

ಶಕ್ತಿಶಾಲಿ ದೇವತೆ ದಾನಮ್ಮ 

ಶಕ್ತಿಶಾಲಿ ದೇವತೆ ದಾನಮ್ಮ 

ಇಂಡಿ:ಶಿವನಾಮ ಸಂಸ್ಕೃತಿಯಿoದ ಬೆಳೆದು ಬಂದ  ಲಿಂಗಮ್ಮ ಶರಣುಕುಲ ಶ್ರೇಷ್ಠ ಬಸವಣ್ಣವರಿಂದ ದಾನಮ್ಮಳಾಗಿ ಖ್ಯಾತಿ ಹೊಂದಿ  ತನ್ನ ನಂಬಿ ಬರುವ ಭಕ್ತರನ್ನು ಉದ್ಧರಿಸಿದ್ದಾಳೆ ಇದೀಗ ಇಂಡಿಯಲ್ಲಿ ನೆಲೆಗೊಂಡಿದ್ದಾಳೆ ಎಂದು  ಕಾಶಿ  ಪೀಠದ ಜಗದ್ಗುರು ಡಾ. ಮಲ್ಲಿಕಾರ್ಜುನ  ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾಂಗಳ  ಹೇಳಿದರು. ಪಟ್ಟಣದ ಭೀರಪ್ಪ ನಗರದಲ್ಲಿ ನೂತನವಾಗಿ ನಿರ್ಮಿತ ದಾನಮ್ಮದೇವಿ ದೇವಸ್ಥಾನದ ಸಮಾರಂಭದಲ್ಲಿ ಮಾತನಾಡಿದರು. ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ ಗುರು, ಲಿಂಗ, ಜಂಗಮ ಪ್ರೇಮಿಯಾಗಿ ವಿಶ್ವಕ್ಕೆ ದಾನದ ಕೀರ್ತಿಯನ್ನು ಸಾರಿದ ದಾನಮ್ಮ ಭಕ್ತರ ಸಕಲ ಇಷ್ಟಗಳನ್ನು ಈಡೇರಿಸುತ್ತಾಳೆ ಎಂದರು. ದಿವ್ಯ ಸಾನಿದ್ಯ ವಹಿಸಿ ನೊಣವಿಕೆರೆ ಕಾಡಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಗಳು,  ಪೂಜಾ ಕೈಂಕರ್ಯ  ಶ್ರೀ ವೇ.ಮೂ ಚಿದಾನಂದ ಶಾಸ್ತ್ರೀಗಳು , ಶ್ರೀ ಶಾಂತೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು. ದೇವಸ್ಥಾನ ಸಮಿತಿಯ ಶ್ರೀಮತಿ ನೀಲಮ್ಮತಾಯಿ ಸಿದ್ರಾಮಯ್ಯ ಹಿರೇಮಠ, ಆರ್.ಡಿ.ಖಂಡಳ್ಳಿ, ಅಶೋಕ ವಾಲಿ, ಶಿವಕುಮಾರ ಯಾಗಂಟಿ, ಎಸ್.ಕೆ.ಮಲಕಗೊಂಡ, ರುದ್ರಯ್ಯ ಹಿರೇಮಠ, ರಾಚಯ್ಯ ಮಠ, ನಾಗಯ್ಯ ಚಿಕ್ಕಪಟ, ಶಿವಾನಂದ ತಾಂಬೆ , ಭೀಮನಗೌಡ ಪಾಟೀಲ, ಅನೀಲ ಪ್ರಸಾದ ಏಳಗಿ, ಅನೀಲಗೌಡ ಪಾಟೀಲ, ಸುಧೀರ ಕರಕಟ್ಟಿ ಮತ್ತಿತರಿದ್ದರು.