ಶ್ರವಣಬೆಳಗೊಳದ ಎಸ್.ಎನ್.ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ 

ಶ್ರವಣಬೆಳಗೊಳದ ಎಸ್.ಎನ್.ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ 

ಶ್ರವಣಬೆಳಗೊಳದ ಎಸ್.ಎನ್.ಪದವಿ ಪೂರ್ವ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ 

ಚನ್ನರಾಯಪಟ್ಟಣ: ತಾಲೂಕಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಅತ್ಯಂತ ಭಾವನಾತ್ಮಕವಾಗಿ ನಡೆದ ಈ ಸಮಾರಂಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಅತ್ಯಂತ ಹೃದಯ ಸ್ಪರ್ಶಿಯಾಗಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ವಿಜಯ್ ಕುಮಾರ್ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು  ಸನ್ನಡತೆಯನ್ನು ರೂಢಿಸಿಕೊಂಡಾಗ ಮಾತ್ರ ಕಲಿತ ವಿದ್ಯೆಗೆ ಬೆಲೆ ಬರುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಹಿರಿಯ ಉಪನ್ಯಾಸಕರಾದ ಡಾ.ಎಸ್. ದಿನೇಶ್ ವಿದ್ಯಾರ್ಥಿಗಳು ಓದಿನೊಂದಿಗೆ ಗುರುಹಿರಿಯರನ್ನ ಗೌರವಿಸುವ ಸನ್ನಡತೆಯನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು. ಜೊತೆಗೆ ನಮ್ಮ ಜನ್ಮಕ್ಕೆ ಕಾರಣಕರ್ತರಾದ ತಂದೆ ಹಾಗೂ ನಮ್ಮನ್ನು ಹೆತ್ತು -ಹೊತ್ತು _ತುತ್ತಿಕ್ಕಿದ ತಾಯಿ ಹಾಗೂ ನಮ್ಮ ಎದೆಯಲ್ಲಿ ಅಕ್ಷರವನ್ನು ಬಿತ್ತಿದ ಶಿಕ್ಷಕರನ್ನು ನಾವು ಎಂದಿಗೂ ಮರೆಯಬಾರದು ಇವರುಗಳು ನಮಗೆ ಎಂದೆಂದಿಗೂ ಪ್ರಾತಸ್ಮರಣೀಯರಾಗಿ ಉಳಿಯಬೇಕೆಂದರು.ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕಾಲೇಜು ಪ್ರಾಂಶುಪಾಲ ವಿಜಯ್ ಕುಮಾರ್, ಹಿರಿಯ ಉಪನ್ಯಾಸಕರಾದ ಡಾ. ಎಸ್ ದಿನೇಶ್, ಶ್ರೀಮತಿ ವೀಣಾ, ಶ್ರೀ ನವೀನ್, ಶ್ರೀ ಚಿಕ್ಕದೇವೆಗೌಡ, ಶ್ರೀಮತಿ ಯಮುನಾ, ಶ್ರೀಮತಿ ದೀಪಾ,ಶ್ರೀ ಯೋಗೇಶ್ ಉಪಸ್ಥಿತರಿದ್ದರು. ಬೋಧಕೇತರ ಸಿಬ್ಬಂದಿಗಳಾದ ಶ್ರೀ ದೇವರಾಜ್, ಶ್ರೀ ಶಂಕರೇಗೌಡ, ಶ್ರೀಮತಿ ಸುಶೀಲಮ್ಮ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.