ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ "ನವ ಚಂಡಿಕಾ ಹೋಮ" 

ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ "ನವ ಚಂಡಿಕಾ ಹೋಮ" 

ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ "ನವ ಚಂಡಿಕಾ ಹೋಮ" 

ಬೆಂಗಳೂರು : ಮಲ್ಲೇಶ್ವರದ ತೆಂಗಿನ ಮರದ ರಸ್ತೆಯಲ್ಲಿರುವ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಹಾಗೂ  ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿ ಅಮ್ಮನವರ ಅನುಗ್ರಹಕ್ಕಾಗಿ ಫೆಬ್ರವರಿ 20 ಮತ್ತು 21ರಂದು ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಫೆಬ್ರವರಿ 20, ಮಂಗಳವಾರ : ಬೆಳಗ್ಗೆ ಗುರುಪ್ರಾರ್ಥನಾ, ಗಣಪತಿ ಪೂಜೆ, ಸ್ವಸ್ತಿ ವಾಚನ, ದೇವತಾ ನಾಂದಿ, ಗಣಪತಿ, ನವಗ್ರಹ ಪುರಸ್ವರ, ಮೃತ್ಯುಂಜಯ ಹವನಗಳು ಹಾಗೂ ಪರಿವಾರ ದೇವತಾ ಹವನಗಳು ಮತ್ತು ಇದೇ ದಿನ ಪ್ರದೋಷ ಕಾಲದಲ್ಲಿ ಗುರುಪ್ರಾರ್ಥನ, ವೇದಿಕಾರ್ಚನ, ಕಳಶ ಸ್ಥಾಪನೆ, ಚಂಡಿಕಾ ಪಾರಾಯಣ.
ಫೆಬ್ರವರಿ 21, ಬುಧವಾರ : ಬೆಳಗ್ಗೆ ವೇದಿಕಾರ್ಚನೆ, "ನವ ಚಂಡಿಕಾ ಹೋಮ" ಪೂರ್ಣಾಹುತಿ, ಕಳಶ ಉದ್ವಾಸನ, ಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ ಮತ್ತು ಅನ್ನದಾನ ಸೇವೆಗಳನ್ನು ಏರ್ಪಡಿಸಿದೆ. 
ಸ್ಥಳ : ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, 5ನೇ ಅಡ್ಡರಸ್ತೆ, ಬಿಗ್ ಬಜಾರ್ ಹತ್ತಿರ, ಮಲ್ಲೇಶ್ವರಂ, ಬೆಂಗಳೂರು-560003
ಹೆಚ್ಚಿನ ಮಾಹಿತಿಗಾಗಿ : ವಿನಯ್ ಕುಮಾರ್, ಅರ್ಚಕರು, ಮೊಬೈಲ್ : 9066250970.