ಸಮಾಜಕ್ಕೆ ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತ ಮಹಾಯೋಗಿ:ಮಾಜಿ ಸಚಿವ ಆರವಿಂದ ಲಿಂಬಾವಳಿ 

ಸಮಾಜಕ್ಕೆ ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತ ಮಹಾಯೋಗಿ:ಮಾಜಿ ಸಚಿವ ಆರವಿಂದ ಲಿಂಬಾವಳಿ 

ಸಮಾಜಕ್ಕೆ ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತ ಮಹಾಯೋಗಿ:ಮಾಜಿ ಸಚಿವ ಆರವಿಂದ ಲಿಂಬಾವಳಿ 

ಮಹದೇವಪುರ:  ಮಹನೀಯರ ಜಯಂತಿಯನ್ನು ಆಚರಿಸುವ ಉದ್ದೇಶ ಅವರು ತಮ್ಮ ಜೀವಿತಾವಧಿಯಲ್ಲಿ ಸಮಾಜಕ್ಕೆ ಕೊಟ್ಟಂತಹ ಸಂದೇಶವನ್ನು ನಮ್ಮ ಮುಂದಿನ ಪೀಳಿಗೆಗೂ ಪಸರಿಸುವಂತೆ ಮಾಡಬೇಕೆಂದು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಮಹದೇವಪುರ ಕ್ಷೇತ್ರದ ದೊಡ್ಡಕನ್ನಲ್ಲಿಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಿದ ಶ್ರೀ ಮಹಾಯೋಗಿ ವೇಮನರೆಡ್ಡಿ ಮತ್ತು ಹೇಮರೆಡ್ಡಿ ಮಲ್ಲಮ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಯಿ ಹೇಮಾರೆಡ್ಡಿ ಮಲ್ಲಮ್ಮ, ಮಹಯೋಗಿ ವೇಮನರೆಡ್ಡಿ, ಭಕ್ತ ಕನಕದಾಸರು, ಸಂತ-ದಾರ್ಶನಿಕ ಬಸವಣ್ಣನವರು, ಸಂವಿಧಾನ ಶಿಲ್ಪಿ  ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಮಹನೀಯರ ಜಯಂತಿ ಆಚರಿಸುವ ಉದ್ದೇಶ ಅವರು ತಮ್ಮ ಜೀವಿತಾವಧಿಯಲ್ಲಿ  ನೀಡಿದ ಕೊಡುಗೆ, ಸಿದ್ದಾಂತ, ವಿಚಾರ, ಸಂದೇಶವನ್ನು ನಮ್ಮ ಮುಂದಿನ ಪೀಳಿಗೆಗೂ ಪಸರಿಸುವಂತೆ ಅಧ್ಯಯನ ಮಾಡುವುದು ಹಾಗೂ ಜೀವನದಲ್ಲಿ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು,ಸಮಾಜಕ್ಕೆ ಶೇಷ್ಠ ಮಾನವೀಯ ಮೌಲ್ಯಗಳನ್ನು ಸಾರಿದ ಮಹಾನ್ ಸಂತ ಮಹಾಯೋಗಿ ಎಂದು ತಿಳಿಸಿದರು. ನಂತರ ಶಾಸಕಿ ಮಂಜುಳಾ ಲಿಂಬಾವಳಿ ಮಾತನಾಡಿ ಮಹಾಪುರುಷರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿರದೆ, ಎಲ್ಲಾ ಸಮಾಜಗಳಿಗೂ ಆದರ್ಶಪ್ರಾಯರಾಗಿರುತ್ತಾರೆ. ಹಾಗಾಗಿ ಎಲ್ಲಾ ಸಮಾಜದ ಜನರು ಸಾಮರಸ್ಯ ಮತ್ತು ಪರಸ್ಪರ ನಂಬಿಕೆ ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ನುಡಿದರು. ಮಾಜಿ ಸಚಿವ ಹಾಗೂ ಗಂಗವಾತಿ ಕ್ಷೇತ್ರದ  ಶಾಸಕ ಜಿ. ಜನಾರ್ಧನ ರೆಡ್ಡಿ, ಮಾತನಾಡಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ರೆಡ್ಡಿ ಸಮುದಾಯದವರು ಹೆಚ್ಚಾಗಿದ್ದಾರೆ ಹಾಗಾಗಿ ಬಿಜೆಪಿ ಪಕ್ಷದ ವತಿಯಿಂದ ಈಭಾರಿ ರೆಡ್ಡಿ ಸಮುದಾಯದವರಿಗೆ ಶ್ರೀಧರ್ ರೆಡ್ಡಿ ರವರಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲಿಸುವ ಹೊಣೆನನ್ನದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಡಾ. ಕೆ. ಸಿ. ರಾಮಮೂರ್ತಿ, ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಕ್ಷೇತ್ರ ಅಧ್ಯಕ್ಷರಾದ ಮನೋಹರ ರೆಡ್ಡಿ,  ಬಿ.ಎನ್. ನಟರಾಜ್, ಮುಖಂಡರಾದ ಶ್ರೀಧರ್ ರೆಡ್ಡಿ, ರಮೇಶ್ ರೆಡ್ಡಿ, ವಿಶ್ವನಾಥ್ ರೆಡ್ಡಿ, ಬಾಬುರೆಡ್ಡಿ, ಸತೀಶ್ ರೆಡ್ಡಿ, ಅಶೋಕ್ ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.