ನಗಾರಿ ಜಾನಪದ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ
ನಗಾರಿ ಜಾನಪದ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ
ಮಳವಳ್ಳಿ ತಾಲೂಕು ಹಲಗೂರು ಸಮೀಪದ ಸಾಗ್ಯ ಗ್ರಾಮದಲ್ಲಿ ನಗಾರಿ ಜಾನಪದ ಟ್ರಸ್ಟ್, ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವತಿಯಿಂದ ನಗಾರಿ ಜಾನಪದ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಎಚ್ಎಸ್ ಸರ್ವೋತ್ತಮ್ ಅಂತರಾಷ್ಟ್ರೀಯ ಜಾನಪದ ಕಲಾವಿದರು ನಗಾರಿ ಬಡಿವುದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ದಲಿತ ಸಂಘದ ರಾಜ್ಯ ಸಂಘಟನೆಯ ಸಂಚಾಲಕ ಸಾಗ್ಯ ಕೆಂಪಣ್ಣರವರು ಮಾತನಾಡಿ. ನಮ್ಮ ಗ್ರಾಮದ ಶಿವಕುಮಾರವರು ತಮಟೆ ನಗಾರಿ ಕಲಾವಿದರಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರ ತಂದೆಯು ಸಹ ತಮಟೆ ನಗಾರಿ ಕಲಾವಿದರು. ನಗಾರಿ ಜಾನಪದ ಟ್ರಸ್ಟ್ ರಾಜ್ಯಮಟ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಲಿ. ವತಿಯಿಂದ ಹಾಗೂ ನನ್ನ ಬೆಂಬಲ ಈ ಟ್ರಸ್ಟಿಗೆ ಇದೆ ವತಿಯಿಂದ ನಮ್ಮ ಗ್ರಾಮದ ಹೆಸರು ಸಹ ವಿಜೃಂಭಿಸಲಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶಿಲ್ಪ, ಕುಂತುರು ಗುರು, ಸುರೇಶ್.ಎಸ್.ಎಂ, ಮಹದೇವ್, ಉಮಾ, ರಾಮಲಿಂಗ, ವೀರಪ್ಪಜಿ, ಕುಮಾರ್, ಮರ ಲಿಂಗೇಗೌಡ, ನಾಗೇಂದ್ರ ಹಾಜರಿದ್ದರು.ನಂತರ ಜಾನಪದ ಕಾರ್ಯಕ್ರಮ ನಡೆಯಿತು.