ದನ-ಕರಗಳ ಮೇಲೆ ಹನಿ ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಸ್ವಪ್ನಿಲ ಮತ್ತು ಸಂತೋಷ

ದನ-ಕರಗಳ ಮೇಲೆ ಹನಿ ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಸ್ವಪ್ನಿಲ ಮತ್ತು ಸಂತೋಷ

ಅಬ್ಬಬ್ಬಾ ಏನು ಬಿಸಿಲು, ಚಿಕ್ಕೋಡಿ ಉಪವಿಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನ ಜಾನವಾರುಗಳು ತತ್ತರಿಸಿ ಹೋಗಿವೆ, ಸುಮಾರು 40 ಕ್ಕೂ ಮೀರಿ ತಾಪಮಾನ ದಾಖಲಾಗುತ್ತಿದೆ, ಮಳೆಯ ಸುಳಿವೂ ಸಹ ಇತ್ತ ಕಡೆಗೆ ಇಲ್ಲ,ಇಂತಹ ಪರಿಸ್ಥಿತಿಯಲ್ಲಿ ನಿಪ್ಪಾಣಿ ತಾಲೂಕಿನ, ಮಾಂಗೂರ ಗ್ರಾಮದ ರೈತರಾದ ಸ್ವಪ್ನಿಲ ಮತ್ತು ಸಂತೋಷ ಮಾನಕಾಪುರೆ ಇವರು, ದನ-ಕರಗಳ ಹಿತದೃಷ್ಟಿಯಿಂದ ಗೊಟಗಿಯಲ್ಲಿ ತಂಪಾದ ಶಾವರ ನಿರ್ಮಿಸಿ, ದನ-ಕರಗಳ ಮೇಲೆ ಹನಿ ಹನಿಯಾಗಿ ನೀರು ಬೀಳುವಂತೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ, ಈ ಶಾವರ ವ್ಯವಸ್ಥೆಯನ್ನು ನೋಡಲು ಬಹಳಷ್ಷು ಜನರು ಭೆಟ್ಟಿ ನೀಡಿ ಮಾನಕಾಪುರೆ ಕುಟುಂಬದವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ, ಮನುಷ್ಯ ತನಗಾಗಿ ಪಂಕಾ ಕೂಲರ ಏಸಿ ಅಂತಹ ತಂತ್ರಜ್ಞಾನಗಳನ್ನು ಬಳಸುತ್ತದೆ, ದನ-ಕರಗಳಿಗಾಗಿ ಶಾವರ ಬಳಸುತ್ತಿರುವ ಈ ರೈತರ ಕಾರ್ಯವನ್ನು ಆ ಭಗವಂತ ಮೆಚ್ಚಲೇ ಬೇಕೆಂದು, ಚಿಕ್ಕೋಡಿ ಪಟ್ಟಣದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಇವರು ಹಾರೈಸಿದ್ದಾರೆ.