ಹುಯ್ಯಪ್ಪ ಮಳೆರಾಯ ಎಂಬ ನಾಟಕ ಪ್ರದರ್ಶನ ನಡೆಯಿತು

ಹುಯ್ಯಪ್ಪ ಮಳೆರಾಯ ಎಂಬ ನಾಟಕ ಪ್ರದರ್ಶನ ನಡೆಯಿತು

ಹುಯ್ಯಪ್ಪ ಮಳೆರಾಯ ಎಂಬ ನಾಟಕ ಪ್ರದರ್ಶನ ನಡೆಯಿತು

ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಕಲ್ಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಕಲ್ಕೆರೆ ಸರ್ಕಾರಿ ಪಾಠಶಾಲೆಯ ಆವರಣದಲ್ಲಿ "ತಿಂಗಳ ನಿಂದ ತರಗತಿಯ ಕಡೆಗೆ" ಎಂಬ ವಿನೂತನ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.ಕಲಾವಿದರಾದ ಸಂತೋಷ್ ದಿಂಡಗೂರು ರವರು ಈ ಶಾಲೆಯಲ್ಲಿ ಒಂದು ವರ್ಷಗಳ ಕಾಲ ಮಕ್ಕಳಿಗೆ ವಿವಿದ ಜಾನಪದ ಪ್ರಕಾರಗಳ ಮೂಲಕ ಕಲಾ ಅಂತರ್ಗತ ಪ್ರಯೋಗ ನಡೆಸಿ ಅದರ ಭಾಗವಾಗಿ ಪಠ್ಯ ಆಧಾರಿತ "ಹುಯ್ಯಪ್ಪ ಮಳೆರಾಯ" ಎಂಬ ನಾಟಕ ವನ್ನು ರಚಿಸಿ ನಿರ್ದೇಶನ ಮಾಡಿರುತ್ತಾರೆ. ನಾಟಕ ಪ್ರದರ್ಶನ ಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿ IFA ಹಾಗು ನಾಟಕದ ಬಗ್ಗೆ ತಮಟೆ ಅರೆ,ಸೋಮನಕುಣಿತ, ಕೋಲಾಟದ ಮೂಲಕ ಪ್ರಚಾರ ಮಾಡಿದರು. ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ದ ಪ್ರೌಡಶಾಲೆ ಯ ಮುಖ್ಯ ಶಿಕ್ಷಕರಾದ ಚಂದ್ರಮೌಳಿ ಯವರು ಮಾತನಾಡಿ, ಇಂತಹ  ವಿನೂತನ ಕಾರ್ಯಕ್ರಮವನ್ನು ನೀಡುತ್ತಿರುವ ಸಂಸ್ಥೆಯ ಕೆಲಸವನ್ನು ಶ್ಲಾಘಿಸಿದರು.ಸ್ಥಳೀಯ ಕಲೆಗಳು ನಶಿಸುತ್ತಿರುವ ಈ ಕಾಲದಲ್ಲಿ ಸಂತೋಷ್ ರಂತಹ ಕಲಾವಿದರು ಸ್ಥಳೀಯ ಕಲೆಗಳನ್ನ ಗಳನ್ನ ಮಕ್ಕಳಿಗೆ ಪರಿಚಯ ಮಾಡಿಕೊಡುವುದರ ಮೂಲಕ ಪಠ್ಯ ವನ್ನೂ ಭೋದಿಸುವ ಅವರ ಈ ಕೆಲಸ ಮೆಚ್ಚುವಂತದ್ದು ಎಂದರು.  ನಾಟಕದ ಬಗ್ಗೆ  ದೈಹಿಕ ಶಿಕ್ಷಕರಾದ ರಂಗನಾಥ್ ರವರು ಮಾತನಾಡಿ ತಿಂಗಳು ಮಾವನ ಹಬ್ಬದ ಆಚರಣೆಯನ್ನು ಇಟ್ಟುಕೊಂಡು ಅದನ್ನು  ಪಠ್ಯದ ಜೊತೆಗೆ ಎಣೆದಿರುವ ಪರಿ ಬಹಳ ಪರಿಣಾಮ ಕಾರಿ ಯಾಗಿದೆ ಎಂದರು. ಗ್ರಾಮೀಣ ಕಲೆಗಳು ಈ ಮೂಲಕ ಶಾಲೆಗೆ ಬರುತ್ತಿರುವುದು ಸ್ವಾಗತಾರ್ಹ ಈ ನಿಟ್ಟಿನಲ್ಲಿ ನಮ್ಮಶಿಕ್ಷಣ ಇಲಾಖೆ ಯಾವತ್ತೂ ಸಹಕಾರ ನೀಡುತ್ತದೆ . ಇಂತಹ ಯೋಜನೆಗಳು ಶಾಲೆಯಲ್ಲಿ ಹೆಚ್ಚು ಹೆಚ್ಚು ನಡೆಯಬೇಕು ಎಂದು ಕಲ್ಕೆರೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಗಳಾದ ಮಮತಾ ರವರು ಆಶಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ರಾದ ಜಯಂತಿಯವರು ಸ್ವಾಗತಿಸಿದರು, ವೇದಿಕೆಯಲ್ಲಿ ಗ್ರಾಮಪಂಚಾಯ್ತಿ ಮಾಜಿ ಸದಸ್ಯರಾದ ಭೈರೇಗೌಡ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುಳಾ, ಗ್ರಾಮಪಂಚಾಯ್ತಿ ಉಪಾಧ್ಯಕ್ಷರಾದ ಆಶಾ, ಕಲ್ಕೆರೆ ಪ್ರಕಾಶ್, ಇತರರು ಹಾಜರಿದ್ದರು.