ಕನ್ನಡ ನಾಡಿಗೆ ಕಪ್ಪು ಚುಕ್ಕೆಯಾದ ನೇಹಾ ಹಿರೇಮಠ ಹತ್ಯ ಖಂಡನೀಯವಾದದ್ದು:ಯುವ ಸಾಹಿತಿ ಡಾ. ಗಂಗಯ್ಯ ಕುಲಕರ್ಣಿ.

ಕನ್ನಡ ನಾಡಿಗೆ ಕಪ್ಪು ಚುಕ್ಕೆಯಾದ ನೇಹಾ ಹಿರೇಮಠ ಹತ್ಯ ಖಂಡನೀಯವಾದದ್ದು:ಯುವ ಸಾಹಿತಿ ಡಾ. ಗಂಗಯ್ಯ ಕುಲಕರ್ಣಿ.

ಹಾವೇರಿ :ಹುಬ್ಬಳ್ಳಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಅತ್ಯಂತ ಘೋರ ಅಮಾನವೀಯ ಕೃತ್ಯವಾಗಿದ್ದು ಇಡಿ ಮನುಕುಲವೇ ತಲೆ ತಗ್ಗಿಸುವಂತಾಗಿದೆ ಎಂದು ಯುವ ಸಾಹಿತಿ, ಸಾಮಾಜಿಕ ಹೋರಾಟಗಾರ ಡಾ. ಗಂಗಯ್ಯ ಕುಲಕರ್ಣಿ ಖಂಡಿಸಿದ್ದಾರೆ. ಪಾಲಕರು ತಮ್ಮ ಮಕ್ಕಳನ್ನು ಯಾವ ಧೈರ್ಯ ಮತ್ತು ನಂಬಿಕೆಯಿಂದ ಶಾಲಾ -ಕಾಲೇಜಿಗೆ ಕಳುಹಿಸಬೇಕು, ಮಕ್ಕಳಿಗೆ ರಕ್ಷಣೆ ಇಲ್ಲದ ಪ್ರಾಣ ಕಳೆದುಕೊಳ್ಳುವ ಶಿಕ್ಷಣ ಬೇಕೆ ಎಂಬ ಚಿಂತೆಯಲ್ಲಿದ್ದಾರೆ.ವಿದ್ಯ ಪಡೆಯುವ ದೇವಾಲಯದ ಅವರಣದಲ್ಲೇ ನೀಚ ಕೃತ್ಯ ನಡೆದಿದ್ದು ಎಷ್ಟು ಸರಿ?ಪ್ರಾಣ ತೆಗೆಯುವ ನೀಚ ಕೃತ್ಯ ಮಾಡಬಾರದಿತ್ತು. ಕರ್ನಾಟಕ ಇತಿಹಾಸದಲ್ಲಿ ಕನ್ನಡ ನಾಡಿಗೆ ಇದೊಂದು ದೊಡ್ಡ ಕಪ್ಪು ಚುಕ್ಕೆಯಾಯಿತು. ಆಡಳಿತದಲ್ಲಿರುವ ಮತ್ತು ವಿರೋಧ ಪಕ್ಷದಲ್ಲಿರುವ ಎಲ್ಲ ಜನ ಪ್ರತಿನಿದಿಗಳು ರಾಜಕೀಯಕ್ಕೆ ಬಳಸದೆ ಆರೋಪಿ ಪಯಾಜ್ಗೆ ಶೀಘ್ರದಲ್ಲೇ ಗಲ್ಲು ಶಿಕ್ಷೆ ವಿದಿಸಲು ಮುಂದಾಗಬೇಕು. ಸುಮ್ಮನೆ "ಸುಮ್ಮನೆ ಕುಳಿತರೆ ಅನ್ಯಾಯ ತಪ್ಪದು ಹೋರಾಡಿದರೆ ಜಯ ನಮ್ಮದು"ಎಂಬಂತೆ ಎಲ್ಲ ಪಾಲಕರು ತಮ್ಮ ಮನೆಯಿಂದಲೇ ಪ್ರತಿಭಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೋರಾಟ ವ್ಯಕ್ತ ಪಡಿಸಿ ನೇಹಾ ಹಿರೇಮಠಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದ ಅವರು ಮುಂಬರುವ ದಿನಗಳಲ್ಲಿ ಶಾಲಾ -ಕಾಲೇಜುಗಳಲ್ಲಿ ನ್ಯಾಯಾಲಯದ ಆದೇಶದಂತೆ ಮಾನ್ಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಿರಂತರವಾಗಿ ಸಭೆ ಕರೆಯುವ ಮೂಲಕ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ವಿದ್ಯಾರ್ಥಿನಿಯರ್ ಹಾಗೂ ಸಮಸ್ತ ವಿದ್ಯಾರ್ಥಿ ಸಮುದಾಯದ ರಕ್ಷಣೆಗೆ ಮುಂದಾಗಬೇಕು ಎಂದರು.