ಲಂಚ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಿ: ನ್ಯಾ.ಗಣಪತಿ ಗುರುಸಿದ್ಧ ಬಾದಾಮಿ ಅಭಿಮತ

ಲಂಚ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಿ: ನ್ಯಾ.ಗಣಪತಿ ಗುರುಸಿದ್ಧ ಬಾದಾಮಿ ಅಭಿಮತ

ಕೆಜಿಎಫ್: ಸಾರ್ವಜನಿಕ ವಲಯದಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಲಂಚಮುಕ್ತ ಮಾಡಲು ಹಾಗೂ ಲಂಚಮುಕ್ತ ರಾಷ್ಟ್ರ ಮಾಡಲು ಸಾರ್ವಜನಿಕರು ಸಹಕರಿಸಿ ಎಂದು. ಕೆಜಿಎಫ್ ತಾಲೂಕು ಕಚೇರಿಯಲ್ಲಿ ಆಯೋಜನೆ ಮಾಡಿರುವ ಕರ್ನಾಟಕ ಲೋಕಾಯುಕ್ತ ಕಾಯ್ದೆ ಹಾಗೂ ಲಂಚ ನಿಷೇಧ ಕಾಯ್ದೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ಧ ಬಾದಾಮಿ ತಿಳಿಸಿದರು. ಲಂಚಮುಕ್ತ ರಾಷ್ಟ್ರ ನಿರ್ಮಾಣ ಮಾಡಲು ನಾವು ಸಾರ್ವಜನಿಕರು ಮೊದಲು ಸಹಕರಿಸಬೇಕು. ಯಾವುದೇ ಒಂದು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಾಗ. ಕೆಲಸ ಆಗಬೇಕೆಂದು ನಾವು ಲಂಚ ನೀಡುವುದು ಅಪರಾಧ. ನಾವೇ ಲಂಚ ಕೋರರನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಯಾವುದೇ ಇಲಾಖೆಯಲ್ಲಿ ನಾವು ಲಂಚವನ್ನು ನೀಡಬಾರದು. ಲಂಚವನ್ನು ಕೇಳಿದ ಸಂದರ್ಭದಲ್ಲಿ ಇದಕ್ಕೆ ಸಂಬಂಧಪಟ್ಟ ಲೋಕಾಯುಕ್ತ ಇಲಾಖೆಗೆ ದೂರ ನೀಡಿ ಭ್ರಷ್ಟ ಅಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು. ಆಗ ಮಾತ್ರ ಲಂಚ ಮುಕ್ತ ರಾಷ್ಟ್ರ ಮಾಡಲು ಸಹಕಾರ ಆಗುತ್ತದೆ ಎಂದು ತಿಳಿಸಿದರು. ಲಂಚ ಸ್ವೀಕಾರ ಹಾಗೂ ನೀಡುವುದು ಶಿಕ್ಷಾ ಅಪರಾಧ ಇದರಿಂದ ಇಬ್ಬರಿಗೂ ಕಾನೂನಿನಲ್ಲಿ ಶಿಕ್ಷೆ ಇದೆ ಆದ್ದರಿಂದ ನಾವು ಯಾರಿಗೂ ಲಂಚ ನೀಡಬಾರದು ಸ್ವೀಕಾರ ಮಾಡಬಾರದು. ಇದನ್ನು ನಾವು ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮನೆ ಬಾಗಿಲಿಗೆ ಬಂದು ಕುಕ್ಕರು .ಮೂಗುತಿ ಹಣವನ್ನು ನೀಡುವುದು ಇದನ್ನು ನಾವು ತೆಗೆದುಕೊಂಡ ಸಂದರ್ಭದಲ್ಲಿ ನಮ್ಮ ವಾರ್ಡ್ಗಳಲ್ಲಿ ನಾವು ವಾಸ ಮಾಡುವ ಸ್ಥಳಗಳಲ್ಲಿ ರಸ್ತೆ ಸಮಸ್ಯೆ ಹಾಗೂ ಚರಂಡಿ ಸಮಸ್ಯೆಗಳು ಇದ್ದ ಪಕ್ಷದಲ್ಲಿ ಇದಕ್ಕೆ ಸಂಬಂಧಪಟ್ಟ ರಾಜಕೀಯ ವ್ಯಕ್ತಿಯನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಗಳ ಹತ್ತಿರ ಹಣವನ್ನು ಹಾಗೂ ಇತರ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಗಳಾದ, ವಿನೋದ್ ಕುಮಾರ್, ಮಂಜುನಾಥ್,ಆರ್.ವಕೀಲರ ಸಂಘದ ಅಧ್ಯಕ್ಷರು  ರಾಜಗೋಪಾಲ್ ಗೌಡ. ಕಾರ್ಯದರ್ಶಿ ಕೆ.ಸಿ.ನಾಗರಾಜ್ ಉಪಾಧ್ಯಕ್ಷರು, ಮಣಿವಣ್ಣನ್, ಸರ್ಕಾರಿ ವಕೀಲರು, ದಿನೇಶ್ ಕುಮಾರ್, ತಹಶೀಲ್ದಾರ್, ರಾಮ ಲಕ್ಷ್ಮಯ್ಯ ,ಪೌರಾಯುಕ್ತರು ಪವನ್ ಕುಮಾರ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜೇಶ್, ಅಶ್ವಥ್ ನಗರಸಭೆ ಅಧಿಕಾರಿ ಶಶಿಕುಮಾರ್ ಅಂಗನವಾಡಿ ಕಾರ್ಯಕರ್ತರು ಕಾರ್ಯಕರ್ತರು ಭಾಗವಹಿಸಿದ್ದರು.