ಕುಂಬ ಮೇಳ ಜಾಥಾಗೆ ಚಾಲನೇ ನೀಡಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ 

ಕುಂಬ ಮೇಳ ಜಾಥಾಗೆ ಚಾಲನೇ ನೀಡಿದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ರಾಹುಲ ಶಿಂಧೆ 

ಚಿಕ್ಕೋಡಿ ಮೇ 07 ರಂದು ಜರುಗಲಿರುವ ಚುನಾವಣೆಯಲ್ಲಿ ಪ್ರತಿಯೊಬ್ಬರು ತಮ್ಮ ಮತದಾನದ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸುವ ಮೂಲಕ ಸಧೃಡ ರಾಷ್ಟ್ರ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿ.ಪಂ.ಸಿ.ಇ.ಓ ರಾಹುಲ ಶಿಂಧೆ ಅವರು ಕರೆ ನೀಡಿದರು.

ಚಿಕ್ಕೋಡಿ ತಾ.ಪಂ.ಕಚೇರಿ ಆವರಣದಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಳ್ಳಲಾಗಿದ್ದ ಕುಂಬ ಮೇಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು ಎಲ್ಲ ಮತದಾರರು ತಪ್ಪದೇ ಮತ ಚಲಾಯಿಸುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಮತದಾನದಿಂದ ಯಾರು ಕೂಡಾ ಹೊರಗುಳಿಯದೇ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದರು.

ಒಬ್ಬ ಮಹಿಳೆ ಕನಿಷ್ಠ ಹತ್ತು ಜನರಿಗಾದ್ರೂ ಮತದಾನ ಮಾಡುವಂತೆ ಪ್ರೇರೆಪಸಿಬೇಕು ಎಂದು ಕುಂಬ ಮೇಳದಲ್ಲಿ ಪಾಲ್ಗೊಂಡ ಮಹಿಳೆಯರಿಗೆ  ತಿಳಿಸಿದರು. ಕಡ್ಡಾಯವಾಗಿ ಮತದಾನ ಮಾಡುವದರ ಜೊತೆಗೆ ತಮ್ಮ ಅಕ್ಕ, ಪಕ್ಕದವರಿಗೂ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿ ಮತ ಚಲಾಯಿಸಲು ಪ್ರೆರೇಪಿಸಬೇಕು. ಎಂದರು

ಕುಂಬ ಮೇಳ ತಾಲೂಕು ಪಂಚಾಯತ ಆವರಣದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕೊನೆಗೆ ಬಸ್ ನಿಲ್ಧಾಣದ ಹತ್ತಿರ ಮುಕ್ತಾಯಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಜಿ.ಪಂ ಮುಖ್ಯಯೋಜನಾಧಿಕಾರಿ ಗಂಗಾಧರ ದಿವಟರ, ಜಿ.ಪಂ ಲೆಕ್ಕಾಧಿಕಾರಿ ಗಂಗಾ ಹಿರೇಮಠ, ತಾಪಂ. ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವ, ಪುರಸಭೇ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ, ತಾಪಂ. ಸಹಾಯಕ ನಿರ್ದೇಶಕ ಎಸ್ ಎಸ್ ಮಠದ ವ್ಯವಸ್ಥಾಪಕರಾದ ಉದಯಗೌಡ ಪಾಟೀಲ ಜಿಲ್ಲಾ ಪಂಚಾಯತ ಜಿಲ್ಲಾ ಐ.ಇ.ಸಿ ಸಂಯೋಜಕ ಪ್ರಮೋದ ಗೋಡೆಕರ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ತಾಪಂ. ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿಕಾರ್ಯಕರ್ತರು ಎನ.ಆರ್.ಎಲ್.ಎಮ್. ಯೋಜನೆಯ ಮಹಿಳಾ ಸ್ವಸಹಾಯ ಸಂಘದವರು ಉಪಸ್ಥಿತರಿದ್ದರು.