ಶಾಸಕ ಕೊತ್ತೂರು ಮಂಜುನಾಥ್ ಅವರನ್ನ ಸನ್ಮಾನಿಸಿದ ಬುಡ್ಗ ಜಂಗಮ ಸಮುದಾಯದವರು

ಶಾಸಕ ಕೊತ್ತೂರು ಮಂಜುನಾಥ್ ಅವರನ್ನ ಸನ್ಮಾನಿಸಿದ ಬುಡ್ಗ ಜಂಗಮ ಸಮುದಾಯದವರು

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರನ್ನ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬುಡ್ಗ ಜಂಗಮ ಸಮುದಾಯದವರು ಸನ್ಮಾನಿಸಿದರು. ಇಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಪರ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ಚಿಕ್ಕೋಡಿ‌ ಸೇರಿದಂತೆ ರಾಯಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಚಿಕ್ಕೋಡಿ ಲೋಕ ಸಭಾ ಕ್ಷೇತ್ರದ ಕರ್ನಾಟಕ ರಾಜ್ಯ ಅಲೆಮಾರಿ ಬೇಡ, ಬುಡ್ಗ ಜಂಗಮ ಕ್ಷೇಮಾಭಿವೃದ್ದಿ ಸಂಘದ ಮುಖಂಡರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೊತ್ತೂರು ಮಂಜುನಾಥ್ ಅವರು, ಲೋಕಸಭಾ ಚುನಾವಣೆಯಲ್ಲಿ ನಮ್ಮ ಜನಾಂಗದವರೆಲ್ಲಾ  ಕಾಂಗ್ರೇಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೆ ನಮ್ಮ ಜನಾಂಗದ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು. ಈ ವೇಳೆ ತಮ್ಮ ಗ್ರಾಮಗಳಲ್ಲಿ ದೇವಸ್ಥಾನ, ಸಮುದಾಯ ಭವನ ಸೇರಿದಂತೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ರು. ಈ ವೇಳೆ ತಮ್ಮ ಸಮುದಾಯದವರು ಇರುವಂತಹ ಕ್ಷೇತ್ರದ ನಾಯಕರಲ್ಲಿ ಚರ್ಚಿಸಿ ನಿಮ್ಮ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ರು. ಇದೇ ವೇಳೆ ಸಮುದಾಯದ ಮುಖಂಡರಾದ ಪರುಶಾರಾಮ್, ರಾಜೀವ್ ಸಂಕಣ್ಣನವರ್. ಮಾರುತಿ, ರಮೇಶ್, ಪ್ರಕಾಶ್ ಎಣ್ಣೆ, ಆನಂದ್ ರಾಮಪ್ಪ ಬಹುರೂಪಿ. ಎಲ್ಲಪ್ಪ‌ ನಾಗಪ್ಪ ವಿಭೂ

ತಿ, ಬಸವರಾಜ್ ಸೇರಿದಂತೆ ಮತ್ತಿತರರು ಹಾಜರಿದ್ರು.