ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

ಇಂಡಿ:ತಾಲ್ಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು,ಈ ಕಾರ್ಯಕ್ರಮವನ್ನು ತಡವಲಗಾ ಶ್ರೀ ಮರುಳಸಿದ್ದೇಶ್ವರ ಪ್ರೌಡ ಶಾಲೆ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಬಿ ಬಿ ಮಕಣಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ನಂತರ ಮಾತನಾಡಿದ ಅವರು ಮಕ್ಕಳಿಗೆ ಬಾಲ್ಯದಿಂದಲೇ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದಾಗ ಮಗು ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದಿರುತ್ತದೆ. ಮಗುವಿನ ಚಿಂತನಾ ಕ್ರಮ, ಕ್ರಿಯಾಶೀಲತೆ, ವಾಕ್‌ ಚಾತುರ್ಯ, ಅರಿವು ಉತ್ತಮಗೊಳ್ಳುತ್ತದೆ. ಭಾವನಾತ್ಮಕ ಗುಣಗಳು ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಸಹಾಯವಾಗುತ್ತದೆ. ತಂದೆ ತಾಯಿಗಳು ತಮ್ಮ ಮಗುವಿನ ಶಿಕ್ಷಣಾ ಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ರಂಜಿಸಿತು, ಹಾಗೂ ಇಂಡಿ ತಾಲೂಕು ಮಟ್ಟದ ಜ್ಯೋತಿಭಾ ಫುಲೆ ಪ್ರಶಸ್ತಿ ಪುರಸ್ಕೃತರಾದ ಶಾಲೆಯ ಗುರುಮಾತೆ ಪಿ ಎಸ್ ಮುರಾಳ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚಿರಂಜೀವಿ. ಕಲ್ಮೇಶ ಹೊಸಮನಿ, ಹಾಗೂ ಶಾಲೆಯು ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಠೋಬಾ ವಿಜಯಪೂರ, ಸಚೀನ ಇಂಡಿ, ಎನ್ ಸಿ ಕುಂಬಾರ, ಚಿದಾನಂದ ಇಂಡಿ, ಮಲ್ಲು ಮಸಳಿ, ನಾಗೇಶ್ ಸಾರವಾಡ, ಸುರೇಶ್ ಗೋಳ್ಳಗಿ, ಕೀರಣ ಪೂಜಾರಿ,ಅನೀಲ ಹಾದಿಮನಿ, ಪರುಶುರಾಮ ಸೈನಸಾಕಳೆ, ಹಾಗೂ CRP ಪ್ರಕಾಶ್ ರಾಠೋಡ,KGS ಶಾಲೆಯು ಮುಖ್ಯ ಗುರುಗಳಾದ ಆರ್ ಎಸ್ ದೊಡ್ಡಮನಿ ಹಾಗೂ ವಿವಿಧ ಶಾಲೆಗಳ ಮುಖ್ಯ ಗುರುಗಳಾದ ಎಸ್ ಎಂ ವಂದಾಲ, ಜಿ ಸಿ ಗೌರ, ಎಂ ಬಿ ಸುತ್ತಾರ, ಎ ಎಸ್ ಬಡಿಗೇರ, ಎಸ್ ಜಿ ನಾರಯಣಕರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.