ಭೂಮಿಯ ಫಲವತ್ತತೆ ಉಳಿಸುವ ಕೆಲಸ ನಮ್ಮೆಲರ ಜವಾಬ್ದಾರಿ-ನ್ಯಾಯಾಧೀಶ ಜೆ.ರಂಗಸ್ವಾಮಿ

ಭೂಮಿಯ ಫಲವತ್ತತೆ ಉಳಿಸುವ ಕೆಲಸ ನಮ್ಮೆಲರ ಜವಾಬ್ದಾರಿ-ನ್ಯಾಯಾಧೀಶ ಜೆ.ರಂಗಸ್ವಾಮಿ




ಬಾಗೇಪಲ್ಲಿ: 2024ರ ಭೂ ದಿನಾಚರಣೆ ಧ್ಯೇಯವಾಕ್ಯದಂತೆ ಭೂಮಿಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಭೂಮಿಯ ಫಲವತ್ತತೆ ಉಳಿಸಬೇಕು’ ಎಂದು ಸಿವಿಲ್, ಜೆ. ಎಂ. ಎಫ್.ಸಿ ನ್ಯಾಯಾಧೀಶ ಜೆ. ರಂಗಸ್ವಾಮಿ ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವು ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ  ನಡೆದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ದುರಾಸೆಯಿಂದ ಭೂಮಿ ಮೇಲಿನ ತಾಪಮಾನ  ಹೆಚ್ಚುತ್ತಿದ್ದು, ಇದು ಮನುಷ್ಯನಿಗೇ ಅಪಾಯ ತಂದೊಡ್ಡಿದೆ.

ಈ ಸಮಸ್ಯೆ ಬಗೆಹರಿಸಲು ಎಲ್ಲರೂ ಕೈಜೋಡಿಸಬೇಕು ಭೂಮಿಯನ್ನು ಮುಂದಿನ ಪೀಳಿಗೆ ಉಳಿಸುವ ಕುರಿತಂತೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ತುರ್ತಾಗಿ ನೀಡಬೇಕಾದ ಎಲ್ಲಾ ನೆರವು ಸೇರಿದಂತೆ ವಿವಿಧ ವಿಚಾರಗಳು ಚರ್ಚೆಗೆ ಬರುತ್ತವೆ ಎಂದರು.

ಈ ಸಂಧರ್ಭದಲ್ಲಿ ಅರಣ್ಯ ಇಲಾಖೆ ಅಣ್ಣಪ್ಪ,ವಕೀಲರ ಸಂಘದ ಉಪಾಧ್ಯಕ್ಷ ರಾಮಾಂಜಿ ಜಿ.ಸರ್ಕಾರಿ ಅಭಿಯೋಜಕರು ಚಿನ್ನ ಸ್ವಾಮಿ, ವಕೀಲರಾದ ಜೆ. ನಂಜಪ್ಪ, ಎಂ. ಕೆ. ಅಲ್ಲಾ ಬಕಾಶ್, ನರಸಿಂಹ ಮೂರ್ತಿ, ಖಜಾಂಚಿ ಎ. ಮಂಜು, ಜಯಪ್ಪ,ಶ್ರೀನಿವಾಸ್,ಸತೀಶ್, ಬಾಬು, ಬಿಂದು, ನಾಗಭೂಷಣ, ಬಾಲು ನಾಯಕ್, ವೆಂಕಟರವಣ, ಮಹೇಶ್, ಮುಸ್ಟಾಕ್ ಅಹ್ಮದ್, ಸಿಬಂದಿ ಸಂದ್ಯಾ, ಸಂಜನಾ,ಧನುoಜಾಯ್,ಸೇರಿದಂತೆ ಇತರರು ಇದ್ದರು... ವರದಿ ಸುಬ್ಬು ಬಾಗೇಪಲ್ಲಿ