ಇಂದಿನಿಂದ ಐದು ದಿನಗಳ ಕಾಲ ಶ್ರೀ ಪವಾಡ ಬಸವೇಶ್ವರರ ಅದ್ದೂರಿ ಜಾತ್ರೆ.

ಇಂದಿನಿಂದ ಐದು ದಿನಗಳ ಕಾಲ ಶ್ರೀ ಪವಾಡ ಬಸವೇಶ್ವರರ ಅದ್ದೂರಿ ಜಾತ್ರೆ.

ಅಲಂಕೃತ ಗೊಂಡ ಶ್ರೀ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿ.

ಮುದ್ದೇಬಿಹಾಳ:-ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರರ ಜಾತ್ರೆಯು ಎಪ್ರಿಲ್ 23 ರಿಂದ ಎಪ್ರಿಲ್ 27ರವರೆಗೆ 5 ದಿನಗಳ ಕಾಲಾ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡು ಅದ್ದೂರಿಯಾಗಿ ನಡೆಯುವುದು. ಎಪ್ರಿಲ್ 23   ಮಂಗಳವಾರದಂದು ಬೆಳ್ಳಿಗ್ಗೆ 6 ಗಂಟೆಗೆ ಶ್ರೀ ಪವಾಡ ಬಸವೇಶ್ವರರ ಮೂರ್ತಿಗೆ ಅಭಿಷೇಕ, ನಂತರ 9 ಗಂಟೆಗೆ ಗುಡಿ ಕಳೋತ್ಸವ ಮತ್ತು ಪಲ್ಲಕ್ಕಿ ಉತ್ಸವದೊಂದಿಗೆ ಕುಂಭಮೇಳ ನಡೆಯುವುದು.ನಂತರ ಟ್ರ್ಯಾಕ್ಟರ್ ಹಿಂಬದಿ ಬಲ ಪ್ರದರ್ಶನ.ಪ್ರಥಮ 25001,ದ್ವೀತಿಯ 15001,ತೃತೀಯ 10001 ರೂಪಾಯಿ ಬಹುಮಾನ ಇರುವುದು.ಸ್ಪರ್ಧೆಗೆ ಸೂಚನೆಗಳು ಅನ್ವಯಿಸುತ್ತದೆ.9-30 ಗಂಟೆಯಿಂದ ಸುಪ್ರಸಿದ್ಧ ಶಿವಭಜನೆ ಜರುಗುವುದು. ಅಂದೇ ರಾತ್ರಿ 10 ಗಂಟೆಗೆ ಸಿದ್ದಮ್ಮ ಕೋಳ್ಳೂರಗಿ ಮತ್ತು ಅಕ್ಷತಾ ಮುತ್ತೂರ ಅವರ  ವಾದಿ ಮತ್ತು ಪ್ರತಿವಾದಿ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗುವುದು.24 ಬುಧವಾರದಂದು ಮುಂಜಾನೆ10 ಗಂಟೆಗೆ ಭಾರವಾದ ಚೀಲ ಎತ್ತುವುದು ಪ್ರಥಮ 10001,ದ್ವೀತಿಯ 5001,ತೃತೀಯ 2501ರೂ ಇರುವುದು.ಮಧ್ಯಾಹ್ನ 12 ಗಂಟೆಗೆ ನಿಡಗುಂದಿ ಗ್ರಾಮದಿಂದ ತೇರಿಣ ಕಳಶ,ಮತ್ತು ಬೆಳ್ಳಿಯ ಛತ್ರಿ ಆಗಮಣ,ಕಾಶಿನಕುಂಟಿ ಗ್ರಾಮದಿಂದ ಪಲ್ಲಕ್ಕಿ ಆಗಮನ,ರೂಡಗಿ ಗ್ರಾಮದಿಂದ ತೇರಿಣ ಮೀಣಿ(ಹಗ್ಗ)ವನ್ನು ಮೆರವಣಿಗೆಯ ಮುಖಾಂತರ ಆಗಮಿಸುವುದು.ಮೂರುಲಿಂಗದ ದೇವಸ್ಥಾನದಿಂದ ಕಲಶದೊಂದಿಗೆ ಮೆರವಣಿಗೆಯ ಮುಖಾಂತರ ಶ್ರೀ ಪವಾಡ ಬಸವೇಶ್ವರರ ದೇವಸ್ಥಾನಕ್ಕೆ ಬರುವುದು. ನಂತರ ಸಾಯಂಕಾಲ 5 ಗಂಟೆಗೆ ಸುತ್ತಮುತ್ತಲಿನ ಗ್ರಾಮಸ್ಥರೊಂದಿಗೆ ಮಹಾರಥೋತ್ಸವ ಜರುಗುವುದು.ಅಂದೇ ರಾತ್ರಿ 10 ಗಂಟೆಗೆ ಎಲ್ಲಿ ಅದಿ ಮಲ್ಯಾ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ಜರುಗುವುದು.ಎಪ್ರಿಲ್ 25ರಂದು ಗುರುವಾರದಂದು ಭಾರವಾದ ಕಲ್ಲು ಜಗ್ಗಿಸುವ ಸ್ಪರ್ಧೆ ಇರುವುದು. ಪ್ರಥಮ 10 ಗ್ರಾಂ ಬಂಗಾರ,ದ್ವೀತಿಯ 5 ಗ್ರಾಂ ಬಂಗಾರ,ತೃತೀಯ 10001,ಚತುರ್ಥಿ5001 ರೂಪಾಯಿ ಬಹುಮಾನ ಇರುವುದು. ಸಂಜೆ 5 ಗಂಟೆಯಿಂದ ಬೆಳಗಿನ ಜಾವ 6ರ ವರೆಗೆ ಪಲ್ಲಕ್ಕಿಯು ಹೊರಗಿನ ಮಠಕ್ಕೆ ಹೋಗಿ ಬರುವುದು.ಎಪ್ರಿಲ್ 26 ಶುಕ್ರವಾರರಂದು ಮುಂಜಾನೆ 10 ಗಂಟೆಗೆ ಪುಟ್ಟಿಗಾಡಿ ರೇಸ್ ಪ್ರಥಮ 5ಗ್ರಾಂ ಬಂಗಾರ,ದ್ವೀತಿಯ 10001,ತೃತೀಯ 5001 ರೂಪಾಯಿ ಇರುತ್ತದೆ. ಹಾಗೂ ಸೂಚನೆಗಳು ಇರುತ್ತವೆ.ಅಂದೇ ರಾತ್ರಿ 10 ಗಂಟೆಗೆ ಗಡಿಗೆ ಜೋಕಿ ತಂಗಿ ಅರ್ಥಾತ್‌ ಮಕ್ಕಳ ಮಾರಾಟ ಎಂಬ ಸುಂದರ ಸಾಮಾಜಿಕ ನಾಟಕ ಇರುತ್ತದೆ.ಎಪ್ರಿಲ್27 ಶನಿವಾರದಂದು ಬೆಳ್ಳಿಗ್ಗೆ 10 ಗಂಟೆಗೆ ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆ ಗಟ್ಟಿ ಮೈದಾನದಲ್ಲಿ ಇರುತ್ತದೆ.ಒಟ್ಟು ಹತ್ತು ಆಕರ್ಷಕ ಬಹುಮಾನಗಳು ಇರುವುದು.ಹೀರೋ ಸ್ಪೇಂಡರ್ ಪ್ಲಸ್, ಹೀರೋ ಸಿಡಿ ಡಿಲಕ್ಸ್, 30001,20001,15001,12001,10001,8001,6001,5001 ರೂಪಾಯಿ.ಅನುಕ್ರಮವಾಗಿ 1ರಿಂದ ಒಟ್ಟು 10 ಬಹುಮಾನಗಳನ್ನು ವಿತರಿಸಲಾಗುವುದು.ಸೂಚನೆಗಳು ಇರುತ್ತವೆ.ಅಂದೇ ರಾತ್ರಿ 10 ಗಂಟೆಗೆ ಸಿಂಧೂರ ಲಕ್ಷ್ಮಣ ಎಂಬ ಸುಂದರ ನಾಟಕ ಇರುವುದು. ಹೆಚ್ಚಿನ ಮಾಹಿತಿಗಾಗಿ  ಕಮೀಟಿಯು ಈ ಸಂಖ್ಯೆಗೆ ಸಂಪರ್ಕಿಸಿರಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 9902666262, 9880501650. ಬಾಕ್ಸ್:-ಎಪ್ರಿಲ್ 23 ಮಂಗಳವಾರದಂದು ಮುಂಜಾನೆ 10 ಗಂಟೆಗೆ  ಶ್ರೀ ಪವಾಡ ಬಸವೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಬಸರಕೋಡ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವಿಜಯಪುರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಢವಳಗಿ ಹಾಗೂ ಶ್ರೀ ಪವಾಡ ಬಸವೇಶ್ವರರ ದೇವಸ್ಥಾನ ಕಮೀಟಿ ಬಸರಕೋಡ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು  ಶ್ರೀ ಪವಾಡ ಬಸವೇಶ್ವರರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.ರಕ್ತದಾನ ಮಾಡುವವರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಬಹುದು ಎಂದು ತಿಳಿಸಿದರು. ಢವಳಗಿ ಆರೋಗ್ಯ ಇಲಾಖೆ ಅಧಿಕಾರಿಗಳಾದ ಬಸವರಾಜ ಆಲಗೂರ ಅವರು ತಿಳಿಸಿದರು.