ಕೊರಟಗೆರೆ ಪಟ್ಟಣದಲ್ಲಿ ಗೃಹಸಚಿವ ಡಾ ಜಿ.ಪರಮೇಶ್ವರ್ ರೋಡ್ ಷೋ

ಕೊರಟಗೆರೆ ಪಟ್ಟಣದಲ್ಲಿ ಗೃಹಸಚಿವ ಡಾ ಜಿ.ಪರಮೇಶ್ವರ್ ರೋಡ್ ಷೋ

ಕೊರಟಗೆರೆ ಪಟ್ಟಣದಲ್ಲಿ ಗೃಹಸಚಿವ ಡಾ ಜಿ.ಪರಮೇಶ್ವರ್ ರೋಡ್ ಷೋ 


ಕೊರಟಗೆರೆ: ಬಡವರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕಿದ್ದು ತುಮಕೂರಿನವರೇ ಆದ  ಎಸ್.ಪಿ.ಮುದ್ದಹನುಮೇಗೌಡ ರವರನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಮನವಿ ಮಾಡಿದರು.

ಅವರು ಕೊರಟಗೆರೆ ಪಟ್ಟಣದಲ್ಲಿ ಸಾವಿರಾರು ಜನರೊಂದಿಗೆ ಭರ್ಜರಿ ರೋಡ್ ಷೋ ಮುಖಾಂತರ ಚುನಾವಣಾ ಪ್ರಚಾರದಲ್ಲಿ ಮಾತನಾಡಿ, 2023 ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಮುಂಖ್ಯಮAತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ನೀಡಿದ್ದ 5 ಗ್ಯಾರಂಟಿಗಳನ್ನು ಮೊದಲ ಸಚಿವಸಂಪುಟ ಸಭೆಯಲ್ಲೇ ಜಾರಿಗೆ ತಂದೆವು. ಅದೇ ರೀತಿಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದ ತಕ್ಷಣ ಪ್ರತಿ ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ 1 ಲಕ್ಷ, ನಿರುದ್ಯೋಗ ಯುವಕರಿಗೆ ವರ್ಷಕ್ಕೆ 1 ಲಕ್ಷ , ರೈತರಿಗೆ ಕೃಷಿ ಸಾಲ ಮನ್ನಕ್ಕೆ ಶಾಶ್ವತ ಆಯೋಗ ರಚನೆ.ಶ್ರಮಿಕರಿಗೆ ನ್ಯಾಯಕ್ಕಾಗಿ ದಿನಕ್ಕೆ ಕನಿಷ್ಠ 400 ರೂ ವೇತನ, ಆರ್ಥಿಕ ಸಮಾನತೆಗಾಗಿ ಜಾತಿ ಜನಗಣತಿಯ 5 ಗ್ಯಾರಂಟಿಗಳನ್ನು ತಕ್ಷಣ ಜಾರಿಗೆ ತರಲಾಗುವುದು. ಈ ಕೇಂದ್ರದ ಗ್ಯಾರಂಟಿಯೊAದಿಗೆ ರಾಜ್ಯ ಸಕಾರದ ಗ್ಯಾರಂಟಿಯು ಸೇರಿದರೆ ಬಡ ಮಹಿಳೆಯರ ಆರ್ಥಿಕ ಸ್ಥಿತಿ ಭದ್ರಗೊಳ್ಳುತ್ತದೆ. ಅದಕ್ಕಾಗಿ ನಮ್ಮ ತುಮಕೂರಿನವರಾದ ನಿವೃತ್ತ ನ್ಯಾಯಧೀಶರು, ಎಲ್ಲಾ ಬಡವರಿಗೂ ಸ್ಪಂದಿಸುವ ಉತ್ತಮ ಸಂಸದೀಯ ¥ಟು ಎಂದು ಹೆಸರು ಗಳಿಸಿರುವ ತುಮಕೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರಿಗೆ ಮತ ನೀಡುವಂತೆ ಕೋರಿದರು. ಕಳೆದ ಭಾರಿಯ ಬಿಜೆಪಿ ಪಕ್ಷದ ಲೋಕಸಭಾ ಸದಸ್ಯ ಜಿ.ಎಸ್ ಬಸವರಾಜು ರವರ ಸೇವೆ ಮತ್ತು ಕೊಡುಗೆ ತುಮಕೂರುನಲ್ಲಿ ಶೂನ್ಯವಾಗಿದೆ. ಪ್ರಸ್ತುತ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ನಮ್ಮ ಜಿಲ್ಲೆಯವರಲ್ಲ. ಪ್ರತಿಯೊಂದಕ್ಕೂ ಜನರು ಬೆಂಗಳೂರಿನಲ್ಲಿ ವಾಸವಿರುವ ಅವರನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಅದೇ ರೀತಿಯಾಗಿ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ರಾಜ್ಯಕ್ಕೆ ಯಾವುದೇ ರೀತಿ ಕೊಡುಗೆ ನೀಡಿ ಅಭಿವೃದ್ದಿ ಮಾಡಿಲ್ಲ. ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬರಪರಿಹಾರ ಕೇಳಿದರೆ ಕೊಡುವುದಿಲ್ಲ ಎಂದು ಹೇಳಿ ಕಳಿಸಿರುತ್ತಾರೆ. ಕರ್ನಾಟಕದ ರಾಜ್ಯದ ಟ್ಯಾಕ್ಸ್ ಪಾವತಿಸಿಕೊಂಡು ರಾಜ್ಯಕ್ಕೆ ಚಂಬು ನೀಡುತ್ತಿರುವ ಬಿಜೆಪಿ ಸರ್ಕಾರದ ದೋರಣೆಯನ್ನು ಖಂಡಿಸಿ ರಾಜ್ಯಾದ್ಯಾಂತ ಚಂಬಿನ ಪ್ರದರ್ಶನವನ್ನು ಪಕ್ಷವು ಮಾಡಿದೆ. ಜೆಡಿಸ್ ಪಕ್ಷವು ಕೋಮುವಾದಿಗಳ ಜೊತೆ ಕೈಜೋಡಿಸಿ ದಾರಿ ತಪ್ಪಿರುವುದನ್ನು ಸಮರ್ಥಿಸಿಕೊಳ್ಳಲು ಗೃಹಲಕ್ಷಿö್ಮÃ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ತುಮಕೂರು ಕಾಂಗ್ರೇಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡರನ್ನು ಜಯಶೀಲರನ್ನಾಗು ಮಾಡಲು ಮತನೀಡುವಂತೆ ಮನವಿ ಮಾಡಿದರು. ರೋಡ್ ಷೋ ನಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವಥನಾರಾಯಣ, ಅರಕೆರೆ ಶಂಕರ್, ಪಟ್ಟಣ ಪಂಚಾಯತಿ ಸದಸ್ಯ ಎ.ಡಿ ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಮಾಜಿ ಅಧ್ಯಕ್ಷ ಸೈಯಾದ್ ಸೈಫುಲ್ಲಾ, ಉಪಾಧ್ಯಕ್ಷ ಕೆ.ವಿ ಮಂಜುನಾಥ್, ಸದಸ್ಯ ಲಾರಿ ಸಿದ್ದಪ್ಪ, ಯುವ ಕಾಂಗ್ರೇಸ್ ಅಧ್ಯಕ್ಷ ವಿನಯ್‌ಕುಮಾರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಮುಖಂಡರುಗಳಾದ ಗಣೇಶ್, ಎಲ್.ರಾಜಣ್ಣ, ಆಟೋ ಕುಮಾರ್, ತುಂಗಾ ಮಂಜುನಾಥ್, ಕೆ.ಎಂ.ಸುರೇಶ್, ಕೆ.ಬಿ ಲೋಕೇಶ್, ಚಿಕ್ಕರಂಗಯ್ಯ, ನಾಗರಾಜು ಅಟಿಕಾ, ಫಯಾಜ್, ರಾಘವೇಂದ್ರ, ಮಂಜುಳಮ್ಮ, ಅಶ್ವಥ್ಥ್ ಕಾರ್ ಮಹೇಶ್, ರಂಗನಾಥ್, ಅರವಿಂದ್, ಮಂಜು ಕೆ.ಎಲ್, ರವಿಕುಮಾರ್, ದೀಪಕ್, ರಂಜಿತ್, ಲಕ್ಷö್ಮಮ್ಮ, ಛಾಯಪತಿ ಸೇರಿದಂತೆ ಇತರರು ಹಾಜರಿದ್ದರು.