ಅಲ್ಪಸಂಖ್ಯಾತರ ವಸತಿ ನಿಲಯ ಕಟ್ಟಡ ನಿರ್ಮಾಣದ ಜಾಗ ಪರಶೀಲನೆ ನಡೆಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಅಲ್ಪಸಂಖ್ಯಾತರ ವಸತಿ ನಿಲಯ ಕಟ್ಟಡ ನಿರ್ಮಾಣದ ಜಾಗ ಪರಶೀಲನೆ ನಡೆಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಅಲ್ಪಸಂಖ್ಯಾತರ ವಸತಿ ನಿಲಯ ಕಟ್ಟಡ ನಿರ್ಮಾಣದ ಜಾಗ ಪರಶೀಲನೆ ನಡೆಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಗಡಿ ಭಾಗದಲ್ಲಿ ಜೀವನ ಸಾಗಿಸಬೇಕಾದರೆ ಹಣ, ಅಸ್ತಿ, ಸಂಪತ್ತು ಮುಖ್ಯವಲ್ಲ ಬಹು ಮುಖ್ಯವಾದದ್ದು ಶಿಕ್ಷಣ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದ್ದಾರೆ. ತಾಲೂಕಿನ ಪಾತಪಾಳ್ಯ ಹೋಬಳಿ ಕೇಂದ್ರದ ವಿಸ್ತಾರವುಳ್ಳ 40 ಎಕರೆ ಪ್ರದೇಶದಲ್ಲಿ ಅಲ್ಪಸಂಖ್ಯಾತರ ವಸತಿ ನಿಲಯ ನಿರ್ಮಾಣ ಮಾಡಲು ಸರ್ಕಾರ 30 ಕೋಟಿ ಹಣ ಬಿಡುಗಡೆ ಮಾಡಿದೆ. ಮೊದಲನೇ ಹಂತವಾಗಿ ಈಗಾಗಲೇ 9 ಕೋಟಿ ಹಣ ಮಂಜೂರಾಗಿದೆ. ಮಂಜೂರಾಗಿರುವ ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ನೂತನವಾಗಿ ಬೃಹತ್  ಅಲ್ಪಸಂಖ್ಯಾತರ  ವಸತಿ ಶಾಲೆ ಕಟ್ಟಡ  ನಿರ್ಮಾಣಕ್ಕೆ ಸ್ಥಳ ಗುರ್ತಿಸಲು  ಖುದ್ದಾಗಿ ಭೇಟಿ ನೀಡಿ  ಎತ್ತರವಾದ ಗುಡ್ಡ ಕಳ್ಳುಮುಳ್ಳುಗಳನ್ನು ಲೆಕ್ಕಿಸದೆ ಗುಡ್ಡವನ್ನು ಏರಿ ಸುಮಾರು 40 ಎಕರೆ ಜಮೀನು ಗುರ್ತಿಸಿ ಅತೀ ಶೀಘ್ರದಲ್ಲೇ ಅಲ್ಪಸಂಖ್ಯಾತರ ವಸತಿ ಶಾಲೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಹೆಮ್ಮೆಗೆ ಪಾತ್ರರಾಗಿದ್ದಾರೆ. ಈ ಸಂಧರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ. ಪಾಟೀಲ್,ಕಂದಾಯ ನಿರೀಕ್ಷಕ ಶ್ರೀನಾಥ್, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್, ಮುಖಂಡರಾದ ಬುರಗಮಡಗು ನರಸಿಂಹಪ್ಪ, ಶೇಖರ್ ರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.