ಮಾನವ ಹಕ್ಕುಗಳ ಬಗ್ಗೆ ಸಾರ್ವಜನಿಕರು ಅರ್ಥೈಸಿ ಕೊಂಡು ನೊಂದವರ ಪರ ಶ್ರಮಿಸಬೇಕು:ಮಹೇಂದ್ರ ಕುಮಾರ್ 

ಮಾನವ ಹಕ್ಕುಗಳ ಬಗ್ಗೆ ಸಾರ್ವಜನಿಕರು ಅರ್ಥೈಸಿ ಕೊಂಡು ನೊಂದವರ ಪರ ಶ್ರಮಿಸಬೇಕು:ಮಹೇಂದ್ರ ಕುಮಾರ್ 

ದೇವನಹಳ್ಳಿ:ಮಾನವೀಯತೆ ಹಾಗೂ ಮನುಸ್ಯತ್ವ ದ ಆಧಾರದ ಮೇಲೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ನಾವುಗಳು ಹಿಂಜರಿಯ ಮಾಡಬಾರದು ಎಂದು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ರಾಜ್ಯಾ ಧ್ಯಕ್ಷರಾದ ಡಿಕೆ.ಮಹೇಂದ್ರ ಕುಮಾರ್ ತಿಳಿಸಿದರು. ದೇವನಹಳ್ಳಿ ಪಟ್ಟಣದಲ್ಲಿ ನಡೆದ ಕಾರ್ಮಿಕರ ದಿನಾಚರ ಣೆಯ ಅಂಗವಾಗಿ ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಮಿತಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರ ಕರ್ತರ ಧ್ವನಿ ಸಂಘ ಟನೆ ವತಿಯಿಂದ ವಿವಿಧ ಕ್ಷೇತ್ರಗ ಳಲ್ಲಿ ಸಾಧನೆ ಮಾಡಿದ ಸಾದಕರಿಗೆ ಸನ್ಮಾನ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾ ಡಿದ ಅವರು, ನಮ್ಮ ಸಂಘಟನೆ ಅಸ್ತಿತ್ವಕ್ಕೆ ಬಂದು ಎಂಟು ವರ್ಷಗಳ  ಕಳೆದಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಕಂಡುಕೊಂಡು ಸಂಕಷ್ಟ ದ್ದವರಿಗೆ ನೆರವಾಗಿದ್ದೇವೆ.ಜನರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಕಾರ್ಯ ನಿರತ ರಾಗಿದ್ದೇವೆ ಮುಂದೆಯೂ ಜನರ ನ್ಯಾಯಯುತ ಕೆಲಸ ಕಾರ್ಯಗಳಿಗೆ ಕಾನೂನು ಬದ್ದವಾಗಿ, ಸಾಮಾಜಿಕ ವಾಗಿ ತಮ್ಮಿಂದ ಮಾಡಬಹು ದಾದ ಸಹಾಯ, ಸಹಕಾರ ನೀಡಲು ಕಟಿ ಬದ್ಧ ರಾಗಿರುತ್ತೇವೆ ಎಂದರು. ಅಲ್ಪ ಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ಎಂ.ಝೆಡ್.ಸರ್ಕಾರ್ ಮಾತನಾಡಿ, ಮಾನವ ಹಕ್ಕುಗಳು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಮಾನವಾಗಿರುತ್ತದೆ.ಮಾನವ ಹಕ್ಕುಗಳು ಎಲ್ಲಾ ಮಾನವರ ಘನತೆಯನ್ನು ಗುರುತಿಸುವ ಮತ್ತು ರಕ್ಷಿಸುವ ಮಾನದಂಡಗಳಾಗಿವೆ. ಮಾನವ ಹಕ್ಕುಗಳು ವೈಯಕ್ತಿಕ ಮಾನವರು ಸಮಾಜ ದಲ್ಲಿ ಮತ್ತು ಪರಸ್ಪರ ಹೇಗೆ ಬದುಕುತ್ತಾರೆ, ಹಾಗೆಯೇ ರಾಜ್ಯದೊಂದಿಗೆ ಅವರ ಸಂಬಂಧ ಮತ್ತು ರಾಜ್ಯವು ಅವರ ಕಡೆಗೆ ಹೊಂದಿರುವ ಬಾಧ್ಯತೆಗಳನ್ನು ನಿಯಂತ್ರಿ ಸುತ್ತದೆ. ನಾವೆಲ್ಲ ಮಾನವರಾಗಿದ್ದೇವೆ ಸಮಸ್ಯೆ ಗಳನ್ನು  ಸಮರ್ಥವಾಗಿ ಎದುರಿಸಿ ನೊಂದವರ ಪಾಲಿಗೆ ಸಹಾಯ ಹಸ್ತ ನೀಡಬೇಕೆಂದರು.ಈ ಸಂದರ್ಭದಲ್ಲಿ ದೇವನಹಳ್ಳಿ ಟೌನ್ ಪುರಸಭೆ ಸದಸ್ಯರಾದ ಡಿ.ಆರ್.ಬಾಲರಾಜ್, ಸಮಿತಿ ಯ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರು ವಸಂತ ಕುಮಾರಿ, ವಿಜಯ್ ಕುಮಾರ್, ಕಾನೂನು ಸಲಹೆ ಗಾರರು ಶಿವಕುಮಾರ್, ಘಟಕದ ಅಧ್ಯಕ್ಷರು ಪೈಂಟರ್ ತುಮಕೂರು ಜಿಲ್ಲಾಧ್ಯಕ್ಷರು ಕೃಷ್ಣ ಮೂರ್ತಿ, ಮಂಜುನಾಥ್, ಎಲ್.ಶ್ರೀನಿವಾಸ್, ಸುರೇಶ್, ಡಿ. ಎಮ್ ಅಂಜಿನಪ್ಪ,ಭರತ್ ಶ್ರೀನಿವಾಸ್,ಬಲರಾಮ, ರಾಜು ಆಗತ್ಸ್ಯ, ಸೀತಾರಾಮ್, ನರಸಿಂಹ ಮೂರ್ತಿ, ರಾಮಚಂದ್ರ, ಡಿಸಿ. ಶಂಕರ್,ರಾಮಕೃಷ್ಣ. ಎಂ.ನೀಲೇರಿ ಮಂಜು ಎಂ. ಚಂದ್ರಶೇಖರ್, ಗುರು ಸಿದ್ದಯ್ಯ, ಮಿಮಿಕ್ರಿ ಪ್ರೇಮ್ ಇತರರು ಹಾಜರಿದ್ದರು.