ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ, ಡಿ.ವಿ. ಮಂಜುನಾಥಗೌಡ, ಉಪಾಧ್ಯಕ್ಷರಾಗಿ ಹೆಚ್.ಟಿ.ಕೆಂಚಪ್ಪ ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ, ಡಿ.ವಿ. ಮಂಜುನಾಥಗೌಡ, ಉಪಾಧ್ಯಕ್ಷರಾಗಿ ಹೆಚ್.ಟಿ.ಕೆಂಚಪ್ಪ ಆಯ್ಕೆ

ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ, ಡಿ.ವಿ. ಮಂಜುನಾಥಗೌಡ, ಉಪಾಧ್ಯಕ್ಷರಾಗಿ ಹೆಚ್.ಟಿ.ಕೆಂಚಪ್ಪ ಆಯ್ಕೆ

ಮಾಲೂರು: ತಾಲ್ಲೂಕಿನ ದಿನ್ನೇರಿ ಹಾರೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಆಡಳಿತ ಅವಧಿಗೆ ಗುರುವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಿ.ವಿ. ಮಂಜುನಾಥಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್. ಟಿ. ಕೆಂಚಪ್ಪ ನವರು ಮಾತ್ರ ನಾಮಪತ್ರ ಸಲ್ಲಿಸಿದ್ದು ಈ ಸ್ಥಾನಗಳಿಗೆ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರನ್ನಾಗಿ ಡಿ.ವಿ. ಮಂಜುನಾಥಗೌಡ ಹಾಗೂ ಉಪಾಧ್ಯಕ್ಷರನ್ನಾಗಿ ಹೆಚ್ ಟಿ ಕೆಂಚಪ್ಪ ನವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಚುನಾವಣೆ ಅಧಿಕಾರಿ ತಿಳಿಸಿದ್ದಾರೆ. ನೂತನ ಅಧ್ಯಕ್ಷ ಡಿ ವಿ. ಮಂಜುನಾಥಗೌಡ ಮಾತನಾಡಿ ಶಾಸಕ ಕೆ.ವೈ.ನoಜೇಗೌಡ ಹಾಗೂ ಗ್ರಾಮದ ಹಿರಿಯ ಆಶೀರ್ವಾದದಿಂದ ಮತ್ತು ಎಲ್ಲಾ ನಿರ್ದೇಶಕರುಗಳ ಸಹಕಾರ ದೊಂದಿಗೆ ಕಾಂಗ್ರೇಸ್ ಬೆಂಬಲಿತ ಅಧ್ಯಕ್ಷ ಮತ್ತು ಉಪಧ್ಯಕ್ಷರನ್ನು ಮುಂದಿನ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಿದ್ದೂ, ಸರ್ಕಾರ ಮತ್ತು ಒಕ್ಕೂಟದಿಂದ ಬರುವ ಅನುದಾನಗಳನ್ನು ತಂದು ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದರ ಜತಗೆ ಹಾಲು ಉತ್ಪಾದಕ ಸಮಸ್ಯೆಗಳಿಗೆ ಸಹಕರಿಸಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗು ವುದಾಗಿ ಹೇಳಿದರು. ಈ ಸಂದರ್ಭದಲ್ಲಿ ದಿನ್ನೇರಿ ಹಾರೋಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ವೈ.ನಾರಾಯಣಪ್ಪ, ಕಾರ್ಯನಿರ್ವಹಣಾಧಿಕಾರಿ ಹೆಚ್ ವಿ ತಿರುಮೇಗೌಡ, ಎಸ್ ಸಿ ವೆಂಕಟಸ್ವಾಮಿ,  ಎನ್.ಮುನೇಗೌಡ, ಡಿ.ಕೆ.ನಾರಾಯಣ ಸ್ವಾಮಿ, ವಿ. ನಾರಾಯಣಸ್ವಾಮಿ, ಹೆಚ್.ವಿ. ರಾಮಚಂದ್ರೆಗೌಡ, ಹೆಚ್.ವಿ.ಮಂಜುನಾಥ್ ಕಾರ್ಯನಿರ್ವಹಕ ಜಗನಾಥ್, ಚಿಕ್ಕಮುಡಿಯಪ್ಪ, ಹೆಚ್.ವಿ.ನಾಗರಾಜ್, ಹೆಚ್.ಎಂ.ರಾಮಚಂದ್ರ ನಿರ್ದೇಶಕರಾದ ಶಾಮಣ್ಣ, ನಾಗರಾಜ, ಶಂಕರ್, ಸೋಮಣ್ಣ, ಮುನೇಗೌಡ, ಸತೀಶ್, ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಗೋವಿಂದಪ್ಪ, ಸಾವಿತ್ರಮ್ಮ, ಮುನಿರತ್ನಮ್ಮ ಉಪಸ್ಥಿತರಿದ್ದರು.