ನಿಗಮ ಮಂಡಳಿ ವೀರಶೈವರಿಗೆ ನೀಡಿ ಶಿವಲಿಂಗೇಗೌಡರಿಗೆ ಶಿವರಾಂ ಅಡ್ಡಗಾಲು- ಹಳಬರು-ಕಾರ್ಯಕರ್ತರ ಪರ ವಕಾಲತ್ತು

ನಿಗಮ ಮಂಡಳಿ ವೀರಶೈವರಿಗೆ ನೀಡಿ ಶಿವಲಿಂಗೇಗೌಡರಿಗೆ ಶಿವರಾಂ ಅಡ್ಡಗಾಲು- ಹಳಬರು-ಕಾರ್ಯಕರ್ತರ ಪರ ವಕಾಲತ್ತು

ನಿಗಮ ಮಂಡಳಿ ವೀರಶೈವರಿಗೆ ನೀಡಿ ಶಿವಲಿಂಗೇಗೌಡರಿಗೆ ಶಿವರಾಂ ಅಡ್ಡಗಾಲು- ಹಳಬರು-ಕಾರ್ಯಕರ್ತರ ಪರ ವಕಾಲತ್ತು

ಹಾಸನ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ವೀರಶೈವರನ್ನು ಕಡೆಗಣಿಸಿದ್ದರಿಂದಲೇ ಆರು ಕ್ಷೇತ್ರಗಳಲ್ಲಿ 

ಸೋಲಾಗಿದ್ದು, ಲೋಕಸಭೆ ಚುನಾವಣೆಯಲ್ಲೂ ಹಾಗಾಗದೇ ಇರಬೇಕಾದರೆ ಲಿಂಗಾಯತ ಸಮುದಾಯದವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ಬಿ.ಶಿವರಾಂ ಆಗ್ರಹಿಸಿದರು. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನ ಸೇರಿದಂತೆ ರಾಜ್ಯದ ೨೮ ಕಡೆಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು ಎಂದು ಹೈಕಮಾಂಡ್ ಹೇಳಿದೆ. ಆದರೆ ಕೆಲ ವಿಚಾರಗಳಿದ್ದು, ಅವುಗಳನ್ನು ಸರಿಪಡಿಸಬೇಕು. ಹಿರಿಯರು, ಹಳಬರನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಎಂಪಿ ಚುನಾವಣೆಯಲ್ಲಿ ಜಿಲ್ಲೆಯ ಏಕೈಕ ಶಾಸಕ ಕೆ.ಎಂ.ಶಿವಲಿಂಗೇಗೌಡರು ಸಮರ್ಥರಿದ್ದಾರೆ. ಅವರು ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಜನಾಭಿಪ್ರಾಯವೂ ಅದೇ ಇದೆ. ಆದರೆ ಅವರೇ ನಿಲ್ಲಬೇಕು ಎಂದು ಬಲವಂತ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಟಿಕೆಟ್ ಆಕಾಂಕ್ಷಿಗಳು ಬಹಳ ಇದೀವಿ, ನನ್ನ ವಾದ ಸಮರ್ಥರನ್ನುಯ ಮಾಡಿ ಎಂಬುದಾಗಿದೆ. ಶಿವಲಿಂಗೇಗೌಡರು ಸ್ವಶಕ್ತಿ ಹೊಂದಿದ್ದಾರೆ, ಜೆಡಿಎಸ್‌ನಿಂದ ಗೆದ್ದಿದ್ದಾರೆ, ಸಂಪನ್ಮೂಲ ಇದೆ, ಹಾಗಾಗಿ ನಿಂತರೆ ಗೆಲುವಿಗೆ ಅನುಕೂಲವಾಗಲಿದೆ ಎಂದಿದ್ದೇನೆ ಎಂದು ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕಳೆದ ಅಸೆಂಬ್ಲಿ ಚುನಾವನೆಯಲ್ಲಿ ಆರು ಕಡೆ ನಾವು ಸೋತೆವು. ಇದಕ್ಕೆ ಲಿಂಗಾಯತ ಸಮುದಾವರನ್ನು ಕಡೆಗಣಿಸಿದ್ದೇ ಕಾರಣ. ಅರಸೀಕೆರೆಯಲ್ಲಿ ಆ ಸಮುದಾಯದವರಿಗೆ ಟಿಕೆಟ್ ಕೊಡಬೇಕಿತ್ತು. ಆದರೆ ಸಾಮಾಜಿಕ ನ್ಯಾಯ ಕಾಪಾಡಲು ವಿಫಲವಾಗಿದ್ದರಿಂದ ನಾವು ಸೋಲಬೇಕಾಯಿತು.