ಬೋವಿ ಸಮುದಾಯ ಭವನಕ್ಕೆ ಸರಕಾರ, ವ್ಯಯಕ್ತಿಕವಾಗಿ ಅನುದಾನ ನೀಡುವೆ: ಕೊತ್ತೂರು ಮಂಜುನಾಥ್

ಬೋವಿ ಸಮುದಾಯ ಭವನಕ್ಕೆ ಸರಕಾರ, ವ್ಯಯಕ್ತಿಕವಾಗಿ ಅನುದಾನ ನೀಡುವೆ: ಕೊತ್ತೂರು ಮಂಜುನಾಥ್

ಬೋವಿ ಸಮುದಾಯ ಭವನಕ್ಕೆ ಸರಕಾರ, ವ್ಯಯಕ್ತಿಕವಾಗಿ ಅನುದಾನ ನೀಡುವೆ: ಕೊತ್ತೂರು ಮಂಜುನಾಥ್

ಕೋಲಾರ : ಬೋವಿ ಸಮುದಾಯದ ಅಭಿವೃದ್ಧಿಗಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಸರಕಾರದಿಂದ ಹಾಗೂ ವೈಯಕ್ತಿಕವಾಗಿ ಅನುದಾನ ನೀಡಲು ಸಿದ್ದರಿದ್ದು ಸಮುದಾಯಕ್ಕೆ ಅನುಕೂಲವಾಗುವಂತೆ ಭವನವನ್ನು ನಿರ್ಮಾಣ ಮಾಡಿ ನಾಲ್ಕು ಜನ ನೆನಪಿಸಿಕೊಳ್ಳುವಂತಾಗಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು

ನಗರ ಹೊರವಲಯದ ಟಮಕ ಬಡಾವಣೆ ಕುಡಾ ಲೇಔಟ್ ನಲ್ಲಿ ಶನಿವಾರ ಸುಮಾರು 4 ಕೋಟಿ ವೆಚ್ಚದ ಭೋವಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು ಯಾವುದೇ ಸಮಾಜವಾಗಲಿ, ಜಾತಿಯಾಗಲಿ ನಾಲ್ಕು ಜನಕ್ಕೆ ಒಳ್ಳೆಯದು ಮಾಡುವ ಕೆಲಸಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ ಜನಪ್ರತಿನಿಧಿಗಳಿಗೆ ರಾಜಕೀಯ ಮುಖ್ಯವಲ್ಲ ಎಲ್ಲಾ ಜಾತಿ ಜನಾಂಗಗಳಿಗೆ ಒಳಿತು ಮಾಡುವ ಜವಾಬ್ದಾರಿ ನಮ್ಮದು ಆಗಿರಬೇಕು ಅಷ್ಟೇ ಎಂದು ತಿಳಿಸಿದರು.

ಸಮುದಾಯದ ಜಾಗವನ್ನು ಗುರುತಿಸಿಕೊಳ್ಳಲು ಅನೇಕರ ಶ್ರಮವಿದೆ ಹಿಂದೆ ಗುದ್ದಲಿ ಪೂಜೆಯೂ ಮಾಡಿದ್ದಾರೆ ಆದರೆ ಯಾರೇ ಪೂಜೆ ಮಾಡಲಿ, ಬಿಡಲಿ ಅದು ಉಪಯೋಗಕ್ಕೆ ಬರುವಂತೆ ಕೆಲಸ ಮಾಡಿದಾಗ ಮಾತ್ರವೇ ಜನ ನೆನಪಿಸಿಕೊಳ್ಳುತ್ತಾರೆ ಮುಂದಿನ ಒಂದು ವರ್ಷದಲ್ಲಿ ಕಟ್ಟಡವನ್ನು ಪೂರ್ಣಗೊಳಿಸಿ ಬೋವಿ ಸಮುದಾಯದ ಚಟುವಟಿಕೆಗಳಿಗೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರನಿಗೆ ತಿಳಿಸಿ ಸಮುದಾಯದ ಮುಖಂಡರು ಒಗ್ಗಟ್ಟಿನಿಂದ ಆಗಿಂದಾಗ್ಗೆ ಬಂದು ಕಾಮಗಾರಿಯನ್ನು ಪರಿಶೀಲನೆ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ರಾಜ್ಯ ಸರಕಾರವು ಪ್ರತಿಯೊಂದು ಸಮುದಾಯಗಳು ತಮ್ಮ  ಚಟುವಟಿಕೆಗಳನ್ನು ನಡೆಸಲು ಸಮುದಾಯ ಭವನಗಳ ನಿರ್ಮಾಣ ಮಾಡಲು ಉದ್ದೇಶಿಸಿದೆ ಈ ಸಮುದಾಯ ಭವನ ನಿರ್ಮಾಣಕ್ಕೆ ಹಣದ ಕೊರತೆ ಆದರೆ ಎಂಎಲ್ಸಿ ಹಾಗೂ ಮತ್ತು ಶಾಸಕರ ಅನುದಾನದಲ್ಲಿ ಅಗತ್ಯ ಹಣ ಬಿಡುಗಡೆ ಮಾಡಿಕೊಡುವ ಆಶ್ವಾಸನೆ ನೀಡಿದರು ಜಾಗದ ಕೊರತೆ ಹಾಗೂ ಭೂಮಿ ಕಡಿಮೆ ಕೊಟ್ಟಿರುವ ಬಗ್ಗೆ ವಿಚಾರ ಮಾಡಿ ಲಭ್ಯತೆ ಇದ್ದರೆ ಮತ್ತಷ್ಟು ಜಾಗವನ್ನು ಕೊಡಿಸಿ ಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ  ಹಾಗೂ ಭೋವಿ ಜನಾಂಗದ ಜಿಲ್ಲಾ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ ಸಮುದಾಯದ ಅಭಿವೃದ್ಧಿಗಾಗಿ ಸರಕಾರವು ಒಂದು ಕೋಟಿ ಜಾಗಕ್ಕೆ ನಾಲ್ಕು ಕೋಟಿ ಸಮುದಾಯ ಭವನಕ್ಕೆ ನೀಡಿದ್ದಾರೆ ಮುಂದೆ ಸಮುದಾಯದ ಮಕ್ಕಳ ಶೈಕ್ಷಣಿಕವಾಗಿ ಬೆಳೆಯಲು ಶಾಲೆ ಹಾಗೂ ಹಾಸ್ಟೆಲ್ ಅವಶ್ಯಕತೆ ಇದ್ದು ಕನಿಷ್ಠ 20 ಕುಂಟೆ ಜಾಗವನ್ನು ಸರಕಾರ ಮಂಜೂರು ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಭೋವಿ ಜನಾಂಗದ ಜಿಲ್ಲಾ ಉಪಾಧ್ಯಕ್ಷ ಸಿ.ವಿ ಗೋಪಾಲ್, ನಗರಸಭೆ ಸದಸ್ಯರಾದ ಅಂಬರೀಷ್, ನಾಗರಾಜ್, ಕೋಚಿಮುಲ್ ಮಾಜಿ ನಿರ್ದೇಶಕ ಛತ್ರಕೋಡಿಹಳ್ಳಿ ರಾಮಕೃಷ್ಣೇಗೌಡ, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ವಕ್ಕಲೇರಿ ರಾಜಪ್ಪ, ಮೈಲಾಂಡಹಳ್ಳಿ ಮುರಳಿ, ಬೋವಿ ಸಮುದಾಯದ ಮುಖಂಡರಾದ ವರದೇನಹಳ್ಳಿ ವೆಂಕಟೇಶ್, 
ಹರಿಪ್ರಸಾದ್, ಮಾಲೂರು ಎಸ್.ವಿ.ಲೋಕೇಶ್, ಎಲ್.ಜಿ ಮುನಿರಾಜು, ಪಾಪಣ್ಣ, ಕೂಟೇರಿ ಚರಣ್, ಗುತ್ತಿಗೆದಾರ ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.