ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಅಯೋಧ್ಯಾ ಸಂಭ್ರಮೋತ್ಸವದ ಪ್ರಯುಕ್ತ ಹೆರಿಗೆ ಸಂಪೂರ್ಣ ಉಚಿತ

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಅಯೋಧ್ಯಾ ಸಂಭ್ರಮೋತ್ಸವದ ಪ್ರಯುಕ್ತ ಹೆರಿಗೆ ಸಂಪೂರ್ಣ ಉಚಿತ

ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಅಯೋಧ್ಯಾ ಸಂಭ್ರಮೋತ್ಸವದ ಪ್ರಯುಕ್ತ ಹೆರಿಗೆ ಸಂಪೂರ್ಣ ಉಚಿತ

ವಿಜಯಪುರ:22ರಂದು ಅಯೋಧ್ಯೆಯಲ್ಲಿ ಜರುಗಲಿರುವ ರಾಮಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅಯೋಧ್ಯಾ ಸಂಭ್ರಮೋತ್ಸವನ್ನು ಆಚರಿಸಲಾಗುತ್ತಿದ್ದು, ಅದರ ಪ್ರಯುಕ್ತ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಪೇಕ್ಷೆಯಂತೆ ಜ. 18ರಿಂದ 22ರ ವರೆಗೆ ಐದು ದಿನಗಳ ಕಾಲ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ ಹುಟ್ಟಿದ ಮಗುವನ್ನು ಶ್ರೀ ರಾಮ ಹಾಗೂ ಸೀತಾದೇವಿ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗುತ್ತದೆ. ಈ ಮೂಲಕ ಅಯೋಧ್ಯೆಯಲ್ಲಿ ಜರುಗುವ ರಾಮ ಮಂದಿರದ ಉದ್ಘಾಟನೆಯ ಸಮಯವನ್ನು ಮತ್ತಷ್ಟು ಸಾರ್ಥಕವಾಗಿಸಲಾಗುತ್ತಿದ್ದು ಅವಶ್ಯಕತೆಯುಳ್ಳ ರಾಮ ಭಕ್ತರು ಇದರ ಲಾಭ ಪಡೆದುಕೊಳ್ಳಬೇಕು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಈ ಸಂದರ್ಭದಲ್ಲಿ ಸರ್ವ ಹಿಂದೂಗಳ ಪರವಾಗಿ ನಾಡಿನ ಜನತೆಗೆ ಈ ಮೂಲಕ ಕೊಡುಗೆ ನೀಡಲಾಗುತ್ತಿದೆ ಎಂದು ಜೆಎಸ್‍ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಶರಣ ಮಳಖೇಡ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.