ಪೊಲೀಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಸಿ.ಪಿ.ಆಯ್ ಅತ್ಯುತ್ತಮ ಸಾಧನೆ

ಪೊಲೀಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಸಿ.ಪಿ.ಆಯ್ ಅತ್ಯುತ್ತಮ ಸಾಧನೆ

ಪೊಲೀಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಸಿ.ಪಿ.ಆಯ್ ಅತ್ಯುತ್ತಮ ಸಾಧನೆ

ಇಂಡಿ: ಬೆಳಗಾವಿಯಲ್ಲಿ ನಡೆದ ಉತ್ತರ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಸಿ.ಪಿ.ಆಯ್ ಮಲ್ಲಿಕಾರ್ಜನ ಎಂ.ಡಪ್ಪಿನ ಅವರು ಅತ್ಯುತ್ತಮ ಸಾಧನೆ , ವಿಜಯಪೂರ ಜಿಲ್ಲೆಯ ಪೊಲೀಸ್ ಇಲಾಖೆಯ ಖದರ್ ಇನ್ನಷ್ಟು ಹೆಚ್ಚಿಸುವಲ್ಲಿ ಕಾರಣರಾಗಿದ್ದಾರೆ. ಅಲ್ಲದೆ ವಲಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು 6 ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವರಿಂದ ಅಹಿಂದ ಮುಖಂಡರು ಇಂದು ಸಿ.ಪಿ.ಆಯ್. ಮಲ್ಲಿಕಾರ್ಜುನ ಡಪ್ಪಿನ ಇವರಿಗೆ ಸನ್ಮಾನಿಸಿದರು. ಸರಕಾರದ ಕೆಲಸ ದೇವರ ಕೆಲಸ ಎಂದು ಪ್ರಮಾಣಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಪಿ.ಆಯ್ ಡಪ್ಪಿನ ಸಾಹೇಬರು 6 ಚಿನ್ನದ ಪದಕ ಪಡೇದಿರುವದರಿಂದ ಇಂಡಿ ತಾಲೂಕಾ ಅಹಿಂದ ಸಮುದಾಯಗಳ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಅಹಿಂದ ಮುಖಂಡರಾದ ಜೆಟ್ಟೆಪ್ಪ ರವಳಿ, ಪ್ರಶಾಂತ ಕಾಳೆ,ಇಲಿಯಾಸ ಬೋರಾಮಣಿ, ಧರ್ಮರಾಜ ವಾಲೀಕಾರ ಜಂಟಿ ಹೇಳಿಕೆ ನೀಡಿದ್ದಾರೆ. ಪೊಲೀಸ್ ಇಲಾಖೆ ಎಂದಾಕ್ಷಣ ಈ ಹಿಂದೆ ಸಾಕಷ್ಟು ಭಯ ಇತ್ತು ಆದರೆ ಇತೀತಲಾಗಿ ಪೊಲೀಸ್ ಅಧಿಕಾರಿಗಳು ಸ್ನೇಹ ಜೀವಿಗಳು ಅವರಲ್ಲಿ ಸಹಿತ ಕರುಣೆ, ಪ್ರೀತಿ ಇದೆ ಎಂಬುದು ಸಾಕಷ್ಟು ಜನ ಅಧಿಕಾರಿಗಳಿಗೆ ನೋಡಿದ್ದೇವೆ. ಮನುಷ್ಯ ಸಮಾಜ ಜೀವಿ ಸಮುದಾಯದಲ್ಲಿ ಕೆಲ ಸಂದರ್ಬಗಳಲ್ಲಿ ಪ್ರತಿಯೋಬ್ಬರಿಂದ ತಿಳಿದೂ ತಿಳಿಯದೆಯೋ ಪ್ರಮಾದಗಳು ಘಟಿಸುತ್ತವೆ ಇಂತಹ ಸಂದರ್ಬದಲ್ಲಿ ಸಾರ್ವಜನಿಕರು ಪೊಲೀಸ್ ಕಛೇರಿಗೆ ಬಂದಾಗ ಸಾರ್ವಜನಿಕರಿಗೆ ತಿಳುವಳಿಕೆ ಹೇಳಿ ಕೇಸು ದಾಖಲಿಸದೆ ರಾಜೀ ಸಂದಾನ ಮಾಡಿ ಕಳಿಸಿದ ಸಾಕಷ್ಟು ಉದಾರಣೆಗಳು ಇವೆ. ನಮ್ಮ ಇಂಡಿ ತಾಲೂಕು ಗಡಿ ಭಾಗದಲ್ಲಿ ಇದ್ದರೂ ಕೂಡಾ ಯಾವುದೇ ಅನಧಿಕೃತ ಚಟುವಟಿಕೆಗಳು ನಡೆಯುವುದು ವಿರಳ ,ಸಾಧ್ಯವಾದಷ್ಟು ಪೊಲೀಸ್ ಅಧಿಕಾರಿಗಳ ಜಾಣ ನಡೆಯಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಸರಕಾರಗಳು ಹಾಗೂ ಸಾರ್ವಜಿಕರು ,ಸಂಘ, ಸಂಸ್ಥೆಗಳು ಕೂಡಾ ಒಳ್ಳೇಯ ಅಧಿಕಾರಿಗಳಿಗೆ ಗೌರವಿಸುವುದು ಆದ್ಯ ಕರ್ತವ್ಯ. ಪ್ರಶೇಸ್ತಿಗಳು ನೀಡುವದರಿಂದ ಅವರಿಗೆ ಗೌರವಿಸುವದರಿಂದ ಮತ್ತಷ್ಟು ಜವಾಬ್ದಾರಿ ಮತ್ತು ಆತ್ಮಗೌರವ ಹೆಚ್ಚಿಸುತ್ತದೆ ಎಂದು ಹೇಳಿದರು. ಮಹಿಬೂಬ ಅರಬ, ಧರ್ಮರಾಜ ವಾಲೀಕಾರ, ಸದಾಶಿವ ಪ್ಯಾಟಿ, ಭೀಮಣ್ಣಾ ಕೌಲಗಿ, ಜಬ್ಬಾರಣ್ಣಾ ಅರಬ, ರುಕ್ಮುದೀನ ತದ್ದೇವಾಡಿ, ಮಲ್ಲಿಕಾರ್ಜನ ನಡಗಡ್ಡಿ, ದತ್ತು ಶಿರಶ್ಯಾಡ, ರಾಜು ಪಡನೂರ, ಕೆ.ಎಲ್ ನಡುವಿನಮನಿ ಸೇರಿದಂತೆ ಅನೇಕ ಅಹಿಂದ ಮುಖಂಡರು ಇದ್ದರು.