ದ್ರಾವಿಡರು ಮತ್ತು ಆರ್ಯರು ನಡುವಿನ ಸಂಘರ್ಷವೇ ರಾಮಾಯಣ ಮಹಾಭಾರತ ಕಥೆ - ಸಾಹಿತಿ ಬೋರಲಿಂಗಯ್ಯ

ದ್ರಾವಿಡರು ಮತ್ತು ಆರ್ಯರು ನಡುವಿನ ಸಂಘರ್ಷವೇ ರಾಮಾಯಣ ಮಹಾಭಾರತ ಕಥೆ - ಸಾಹಿತಿ ಬೋರಲಿಂಗಯ್ಯ

ದ್ರಾವಿಡರು ಮತ್ತು ಆರ್ಯರು ನಡುವಿನ ಸಂಘರ್ಷವೇ ರಾಮಾಯಣ ಮಹಾಭಾರತ ಕಥೆ - ಸಾಹಿತಿ ಬೋರಲಿಂಗಯ್ಯ

ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಬಿ ಬೋರಲಿಂಗಯ್ಯನವರು ಅಧ್ಯಕ್ಷೀಯ ನುಡಿಗಳನ್ನು ಮಾತನಾಡುತ್ತ ಭಾರತ ದೇಶದ ಸಿಂಧು ನದಿಯ ಬಯಲಿನಲ್ಲಿ ಒಂದು ಜನಾಂಗ ಇತ್ತು, ಸಿಂಧು ಬಯಲಿನಲ್ಲಿ ವಾಸವಾಗಿತ್ತು, ಮೂರು ಸಾವಿರ ವರ್ಷಗಳ ಹಿಂದೆ ಅಂದರೆ ಕ್ರಿಸ್ತಪೂರ್ವ 1000 ವರ್ಷಗಳ ಹಿಂದೆ ಭಾರತಕ್ಕೆ ವಾಯುವ್ಯ ಕಣಿವೆಗಳ ಮೂಲಕ ದನ ಕರುಗಳನ್ನು ಹೊಡೆದುಕೊಂಡು, ಕುದುರೆಗಳ ಮೇಲೆ ಭಾರತಕ್ಕೆ ಬರುವ ಮುಂಚೆ ದ್ರಾವಿಡ ಜನಾಂಗವು ಅತ್ಯಂತ ಶಾಂತಿ ಪ್ರಿಯರಾಗಿದ್ದು, ಮಾದರಿ ಪಟ್ಟಣಗಳನ್ನು ಕಟ್ಟಿಕೊಂಡಿದ್ದು, ಉತ್ತಮ ರೀತಿಯ ಬೀದಿಗಳನ್ನು ರಚನೆ ಮಾಡಿಕೊಂಡು, ವ್ಯವಸಾಯಗಳನ್ನು ಮಾಡಿಕೊಂಡಿದ್ದ ಪ್ರಕೃತಿ  ನಿಯಮವನ್ನು ತಾಂತ್ರಿಕತೆಗಳನ್ನು ಅನುಸರಿಸುತ್ತಿದ್ದ ಒಂದು ಜನಾಂಗ ಇತ್ತು,ಅವರುಗಳ ಮೇಲೆ ಜಗಳಗಳು ನಡೆದವು ಆಮೇಲೆ ಒಂದಾದರು, ಆರ್ಯರು ದ್ರಾವಿಡ ಒಂದಾಗಿ ಇಲ್ಲಿವರೆಗೂ ಬೆಳೆದುಕೊಂಡು ಬಂದಿದೆ, ದ್ರಾವಿಡರ ಸಂಸ್ಕೃತಿ ಹೆಚ್ಚು ಕಮ್ಮಿ ಅಲ್ಲಿ ನಾಶವಾಗಿದೆ, ಆದರೆ ನಮ್ಮ ಹಳ್ಳಿಗಳಲ್ಲಿ ದ್ರಾವಿಡ ಸಂಸ್ಕೃತಿ ಬದುಕಿದೆ, ಆ ವಿಷಯಗಳನ್ನು ಇಲ್ಲಿ ಹೆಚ್ಚು ಬಳಸಲ್ಲ, ಈ ಆರ್ಯ ದ್ರಾವಿಡ ಸಂಸ್ಕೃತಿಯ ಸಂಘರ್ಷದಲ್ಲಿ ರಾಮಾಯಣ ಮತ್ತು ಮಹಾಭಾರತ ಹುಟ್ಟುಕೊಂಡಿವೆ, ದ್ರಾವಿಡರು ಶಿವ ಆರಾಧಕರು , ಆರ್ಯರು ವೈಷ್ಣವ ಆರಾಧಕರು, ಬ್ರಹ್ಮ, ವಿಷ್ಣು, ಕೃಷ್ಣ ಈ ಆರ್ಯರ ಕಡೆ ಇರುವಂತವರು, ಶಿವ(ಶೈವ) ಆರಾಧಕರು ಹಾಗೂ ವಿಷ್ಣು ಆರಾಧಕರು ನಡುವೆ ನಡೆದಿರುವ ಸಂಘರ್ಷವೇ ರಾಮಾಯಣ ಮತ್ತು ಮಹಾಭಾರತ ಎಂದರು, ರಾವಣ ನಮ್ಮ ಪೂರ್ವಜ ಶೈವ ಆರಾಧಕರ ಪೂರ್ವಜ , ರಾಮ ವಿಷ್ಣು ಆರಾಧಕರ ಹಿರಿಯ, ಇಲ್ಲಿ ಹೇಗೆ ವೈಚಾರಿಕತೆಯನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ ಇದನ್ನು ಸುಮ್ನೆ ನಿಮ್ಮ ಮನಸ್ಸಿನಲ್ಲಿ ಯೋಚನೆ ಮಾಡ್ತಾ ಇರಿ ನಾವು ಪ್ರಹ್ಲಾದ ಕಥೆಯನ್ನು ತುಂಬಾ ಖುಷಿ ಪಡುತ್ತೇವೆ ಹಾಗೂ ಸಂತೋಷ ಪಡುತ್ತೇವೆ, ಈ ಪ್ರಹ್ಲಾದನ ಕಥೆ ಏನನ್ನು ಹೇಳುತ್ತದೆ , ಹಿರಣ್ಯ ಕಶ್ಯಪ್ಪ ಶಿವನ ಪರಮ ಭಕ್ತ, ಈರಣ್ಯ ಕಶ್ಯಪನ ಮಗ ಪ್ರಹ್ಲಾದ ಯಾಕೋ ಏನೋ ಹರಿಯ ಭಕ್ತನಾದ , ಅಪ್ಪ ಹೇಳ್ದ ಮಗು ನಮ್ಮ ಪರಂಪರೆ ಇದಪ್ಪ, ನಮ್ಮ ಸಂಪ್ರದಾಯ ಇದಪ್ಪ, ನೀನು ಹರಿಯ ಸ್ಮರಣೆಯನ್ನು ಬಿಟ್ಟು ಬಿಡಬೇಕಪ್ಪ ಎಂದ, ಆದರೆ ಪ್ರಹ್ಲಾದನ ಕೈಯಲ್ಲಿ ವಿಷ್ಣುವನ್ನು ಬಿಡಲು ಸಾಧ್ಯವಾಗಲಿಲ್ಲ, ಹಾಗಾಗಿ ಅಪ್ಪ-ಮಗನ ನಡುವೆ ಜಗಳ ಶುರುವಾಯಿತು, ಮಗ ತುಂಬಾ ಚಿಕ್ಕವನ್ನು ನಿನ್ನ ದೇವರು ಎಲ್ಲೆಲ್ಲಿ ಇದ್ದಾನಪ್ಪ ಎಂದನು, ಪ್ರಹ್ಲಾದನು ಹರಿಯು  ಎಲ್ಲೆಲ್ಲೂ ಇದ್ದಾನಪ್ಪ ಎನ್ನುತ್ತಾನೆ, ವಿಷ್ಣುವು ಶಿವನಕಿಂತ ಶ್ರೇಷ್ಠ ಎಂದು ಹೇಳುವುದು ಈ ಕಥೆಯ ಉದ್ದೇಶವಾಗಿದೆ. ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ, ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಬೋರಲಿಂಗಯ್ಯ, ಶಾಸಕ ಸಿ ಎನ್ ಬಾಲಕೃಷ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಎ ಗೋಪಾಲಸ್ವಾಮಿ, ಕಸಾಪ ಜಿಲ್ಲಾಧ್ಯಕ್ಷ ಮಲ್ಲೇಶ್ ಗೌಡ, ಕಸಾಪ ಮಾಜಿ ಅಧ್ಯಕ್ಷ ಮದನ್ ಗೌಡ, ತಾಲೂಕು ಅಧ್ಯಕ್ಷ ಹೆಚ್ ಎನ್ ಲೋಕೇಶ್,ಕಸಬಾ ಹೋಬಳಿ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ, ಸಾಹಿತಿ ರಮಾ ಸಿದ್ದಲಿಂಗಯ್ಯ, ಡಿವೈಎಸ್ಪಿ ರವಿಪ್ರಸಾದ್, ಬಿಒ ದೀಪ, ಸಿಡಿಪಿಓ ಇಂದಿರಾ, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಯಶೋಧ ಜೈನ್, ಶ್ರೀಮತಿ ತಾರಾ,ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಟಿ ಮಂಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಲೇಂದ್ರ, ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ಸಮ್ಮೇಳನದ ರೂವಾರಿಗಳಾದ ರಂಗನಾಥ್, ಕಲ್ಕೆರೆ ಮೋಹನ್, ವಕೀಲರಾದ ಕಲ್ಕೆರೆಬಸವರಾಜು, ದೇವಿಗೆರೆಬಸವರಾಜ್, ಸೇರಿದಂತೆ ಇತರರು ಹಾಜರಿದ್ದರು.