ರಾಜ್ಯಕ್ಕೆ 3ನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಢವಳಗಿ ಗ್ರಾಮದ ಪವಿತ್ರಾ ಕೊಣ್ಣೂರ. 

ರಾಜ್ಯಕ್ಕೆ 3ನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಢವಳಗಿ ಗ್ರಾಮದ ಪವಿತ್ರಾ ಕೊಣ್ಣೂರ. 

ಮುದ್ದೇಬಿಹಾಳ:- ತಾಲೂಕಿನ ಬಿದರಕುಂದಿ ಸರ್ಕಾರಿ ಆದರ್ಶ RMSA ಶಾಲೆಯ ವಿದ್ಯಾರ್ಥಿನಿ ಢವಳಗಿ ಗ್ರಾಮದ ಕುಮಾರಿ ಪವಿತ್ರಾ ಮಡಿವಾಳಪ್ಪಗೌಡ ಕೊಣ್ಣೂರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಆಂಗ್ಲ ಮಾಧ್ಯಮದ ವಿಭಾಗದಲ್ಲಿ  625ಕ್ಕೆ 623 ಅಂಕ ಪಡೆದು ರಾಜ್ಯಕ್ಕೆ 3ನೇ ಮತ್ತು ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.ಇಂಗ್ಲಿಷ್ ವಿಷಯದಲ್ಲಿ 99, ವಿಜ್ಞಾನ 99,ಕನ್ನಡ 125, ಉಳಿದೆಲ್ಲ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾಳೆ.ಮಗಳ ಸಾಧನೆ ಮೆಚ್ಚಿ ತಂದೆ ತಾಯಿ ಮಗಳಿಗೆ ಸಿಹಿ ತಿನಿಸಿ ಸಂಭ್ರಮಿಸಿದರು.ತಂದೆ ಪಿಯುಸಿಯ ವರೆಗೆ ವಿದ್ಯಾಭ್ಯಾಸ ಮುಗಿಸಿ ಸಾರಿಗೆ ಇಲಾಖೆಯಲ್ಲಿ ಕಂಡಕ್ಟರ್ ಆಗಿದ್ದಾರೆ. ತಾಯಿ ಎಸ್ಸೆಸ್ಸೆಲ್ಸಿ ಓದಿದ್ದು ಗೃಹಣಿ ಆಗಿದ್ದಾಳೆ ಎಂದು ವಿದ್ಯಾರ್ಥಿ ತಂದೆ ಮಡಿವಾಳಪ್ಪಗೌಡ ಕೊಣ್ಣೂರ ಅವರು ತಿಳಿದ್ದಾರೆ.