ಸುಧಾರಿತ ತೆಂಗು ಬೆಳೆಯ ಪದ್ಧತಿಗಳು ಕುರಿತು ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮ

ಸುಧಾರಿತ ತೆಂಗು ಬೆಳೆಯ ಪದ್ಧತಿಗಳು ಕುರಿತು ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮ

ಸುಧಾರಿತ ತೆಂಗು ಬೆಳೆಯ ಪದ್ಧತಿಗಳು ಕುರಿತು ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ವಿಜ್ಞಾನಕೇಂದ್ರ, ವಿ.ಸಿ.ಫಾರಂ,ಮಂಡ್ಯ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಇವರುಗಳ ಸಹಯೋಗದೊಂದಿಗೆ ತೆಂಗು ಅಭಿವೃದ್ಧಿ ಮಂಡಳಿಯ 44ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ “ಸುಧಾರಿತತೆಂಗು ಬೆಳೆಯ ಪದ್ದತಿಗಳು” ಕುರಿತು ಜಿಲ್ಲಾಮಟ್ಟದ ಸಂವಾದವನ್ನು ಕೃಷಿ ವಿಜ್ಞಾನಕೇಂದ್ರ, ವಿ.ಸಿ.ಫಾರಂ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಡಾ.ಎಸ್.ಎಸ್. ಪ್ರಕಾಶ್, ಡೀನ್ (ಕೃಷಿ), ಕೃಷಿ ಕಾಲೇಜು, ವಿ.ಸಿ.ಫಾರಂ, ಮಂಡ್ಯರವರು ಉದ್ಘಾಟಿಸಿ ಮಾತನಾಡುತ್ತಾ ತೆಂಗು ರೈತರ ಬಾಳಿನ ಕಲ್ಪವೃಕ್ಷವಾಗಿದ್ದು ರೈತರ ಸಾಮಾಜಿಕ–ಆರ್ಥಿಕಜೀವನಮಟ್ಟ ವೃದ್ದಿಗೆ ಸದಾಕಾಲ ಸಹಕಾರಿಯಾಗಿದೆ ಎಂದು ನುಡಿದರು. ತಾಂತ್ರಿಕ ಸಮಾವೇಶದ ಅಂಗವಾಗಿ ಡಾ. ವಿ.ಬಿ ಸನತ್‌ಕುಮಾರ್, ಸಸ್ಯರೋಗ ಶಾಸ್ತ್ರ ತಜ್ಞರು ತೆಂಗಿನಲ್ಲಿ ಮುಖ್ಯವಾಗಿ ಕಂಡುಬರುವ ಪೀಡೆಗಳಾದ ನುಸಿ, ಕೆಂಪು ತಲೆದುಂಬಿ, ಕಪ್ಪು ತಲೆ ದುಂಬಿಯ ಹತೋಟಿ ಕ್ರಮಗಳ ಹಾಗೂ ಸಮಗ್ರರೋಗ ನಿರ್ವಹಣೆ ಪದ್ದತಿಗಳ ಕುರಿತು ಮಂಡಿಸಿದರು. ಡಾ. ಕಾವ್ಯ, ತೋಟಗಾರಿಕಾತಜ್ಞರು ತೆಂಗಿನ ಬೇಸಾಯಕ್ಕೆ ಕಾಯಿ ಮತ್ತು ಗಿಡಗಳ ಆಯ್ಕೆಕುರಿತಾದಿಯಾಗಿ ತೆಂಗಿನ ಬೆಳೆಯಅಂತರ,ಅಂತರ ಬೇಸಾಯ ಹಾಗೂ ಬೆಳೆ ನಿರ್ವಹಣೆ ಕುರಿತು ಪ್ರಸ್ತುತ ಪಡಿಸಿದರೆ,
ಡಾ. ಅತೀಫಾ ಮುನವ್ವರಿ, ಮಣ್ಣು ವಿಜ್ಞಾನಿಗಳು ತೆಂಗಿನ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿಯನ್ನು ತಿಳಿಸಿದರು. ಶ್ರೀ. ಜಿ ಧನಕರ್, ಹಿರಿಯಕ್ಷೇತ್ರ ಅಧಿಕಾರಿಗಳು, ತೆಂಗುಅಭಿವೃದ್ಧಿ ಮಂಡಳಿ, ಬೆಂಗಳೂರುರವರು ತೆಂಗಿನ ಬೆಳೆಯ ವಿಮೆ ಕುರಿತು ರೈತರಿಗೆ ಅರಿವು ಮೂಡಿಸಿದರು. ಡಾ.ನರೇಶ್‌ಎನ್.ಟಿ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೈತರು ವೈಜ್ಞಾನಿಕ ಮತ್ತು ವ್ಯವಸ್ಥಿತವಾಗಿ ತೆಂಗು ಬೆಳೆಯನ್ನು ಬೆಳೆಯುವ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸಬಹುದೆಂದು ತಿಳುವಳಿಕೆ ನೀಡಿದರು. ಕಾರ್ಯಕ್ರಮವು ಡಾ.ಸುರೇಶ್.ಡಿ.ಕೆ, ವಿಜ್ಞಾನಿ, ಕೃಷಿ ವಿಸ್ತರಣೆರವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡಿತು. ಈ ಕಾರ್ಯಕ್ರಮದಲ್ಲಿ ಡಾ.ಎಸ್.ಬಿಯೋಗಾನಂದಾ, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಬೇಸಾಯ ಶಾಸ್ತ್ರ , ತೆಂಗು ಅಭಿವೃದ್ಧಿ ಮಂಡಳಿಯ ಸಿಬ್ಬಂದಿವರ್ಗದವರು, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿಗಳು ಹಾಗೂ ಜಿಲ್ಲೆಯ  ಜನ ಪ್ರಗತಿಪರ ರೈತರು ಉಪಸ್ಥಿತರಿದ್ದು ಸಂವಾದದ ತಾಂತ್ರಿಕ ಉಪಯೋಗ ಪಡೆದುಕೊಂಡರು.