ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಒಂದು ಆಸ್ತಿಯನ್ನಾಗಿ ಮಾಡಿ ಡಾ.ಸ್ವಾತಿ.ಪಿ.ಭಾರದ್ವಾಜ್

ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಒಂದು ಆಸ್ತಿಯನ್ನಾಗಿ ಮಾಡಿ ಡಾ.ಸ್ವಾತಿ.ಪಿ.ಭಾರದ್ವಾಜ್

ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಒಂದು ಆಸ್ತಿಯನ್ನಾಗಿ ಮಾಡಿ ಡಾ.ಸ್ವಾತಿ.ಪಿ.ಭಾರದ್ವಾಜ್

ಚನ್ನರಾಯಪಟ್ಟಣ: ಲಿಟಲ್ ಮಿಲೇನಿಯಮ್ ಪ್ರತಿಷ್ಠ 2023-2024ರ ಸಾಲಿನ ಕಾರ್ಯಕ್ರಮ ಹಾಗೂ ಮೊದಲನೇ ವರ್ಷದ ಶಾಲಾ  ವಾರ್ಷಿಕೋತ್ಸವವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ ಡಾ. ಸ್ವಾತಿ ಪಿ ಭಾರದ್ವಾಜ್  ಲಿಟಲ್ ಮಿಲೇನಿಯಮ್ ವಿದ್ಯಾ ಸಂಸ್ಥೆಯು ಕರ್ನಾಟಕದಲ್ಲಿ 750 ಪ್ರಾಥಮಿಕ ಶಾಲೆಗಳನ್ನು ತೆರೆದಿದೆ, 150 ಕಿಡ್ಸ್ ಶಾಲೆಗಳನ್ನು ಕಾರ್ಯನಿರ್ವಹಿಸುತ್ತಿದೆ, 2,00,000 ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ, ಕಳೆದ15 ವರ್ಷಗಳಿಂದ ಕರ್ನಾಟಕ ರಾಜ್ಯದ ನಾನಾ ಭಾಗಗಳಲ್ಲಿ ಶಾಖೆಗಳನ್ನು ಹೊಂದಿರುವ ಲಿಟಲ್ ಮಿಲೇನಿಯಮ್  ಶಾಲೆ ಚನ್ನರಾಯಪಟ್ಟಣದಲ್ಲಿ ಇರುವುದು ಸಂತೋಷವಾದ ವಿಷಯ ಎಂದರು. ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಬೆಳಸಿ, ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಒಂದು ಆಸ್ತಿಯನ್ನಾಗಿ ಮಾಡಿ ಯಾವುದಾದರೂ ಒಂದು ಕಲೆಯನ್ನು ಕಲಿಸಿ ಸಂಸ್ಕಾರವಂತರನ್ನಾಗಿ ಮಾಡಿ ಎಂದು  ಪೋಷಕರಿಗೆ ಸಲಹೆ ನೀಡಿದರು,  ಪುಟ್ಟ ಪುಟ್ಟ ಮಕ್ಕಳಲ್ಲಿ ಇರುವ ಶಿಸ್ತಿನ್ನು ಗಮನಿಸಿ ಸಂತೋಷವಾಯಿತು ಒಂದು ವರ್ಷದ ಶಾಲೆಯ ಸಾಧನೆಯ ಪಟ್ಟಿಯಲ್ಲಿ ಪುಟ್ಟ ಮಕ್ಕಳಲ್ಲಿ ಸಂಚಾರಿ ನಿಯಮಗಳನ್ನು ಒಳಗೊಂಡಂತೆ ಹಲವಾರು ವಿಷಯಗಳ ಬಗ್ಗೆ ತಾಳ್ಮೆಯಿಂದ  ಮಕ್ಕಳಿಗೆ ತಿಳಿಸುವ  ಮೂಲಕ ಶಿಕ್ಷಕರ ಸಾಧನೆಯನ್ನು ಶ್ಲಾಘಿಸಿದರು, ಕಾರ್ಯಕ್ರಮದಲ್ಲಿ ಪುಟ್ಟ ಪುಟ್ಟ ಮಕ್ಕಳ ನೃತ್ಯವು ಮನೋಹರವಾಗಿತ್ತು ಪೋಷಕರ ಮತ್ತು ವೀಕ್ಷಕರ ಕಣ್ಮನ ಸೆಳೆಯಿತು ಮಕ್ಕಳ ತಾಯಂದಿರ  ಮುಖದಲ್ಲಿ ಮಂದಹಾಸ ಮೂಡಿತು ಅತ್ಯುತ್ತಮವಾಗಿ ಆಯೋಜನೆ ಮಾಡಿದ ಕಾರ್ಯಕ್ರಮದಲ್ಲಿ ಶಾಲೆಯ ಸಿ.ಎಲ್. ಓ.ಸುಷ್ಮಾ ಮಂಜುನಾಥ್, ಕೇಶವ ಮಂಜುನಾಥ್, ಸುಧಾ ಗೋಪಾಲ್, ಹೇಮಾವತಿ, ಅಮೃತ , ಹಾಗೂ ಇತರೆ ಶಿಕ್ಷಕರು ಮಹಾ ಪೋಷಕರು ಸೇರಿದಂತೆ ಇತರರು ಹಾಜರಿದ್ದರು