ಸಾಲ ಕೊಡಿಸುವ ಸೋಗಿನಲ್ಲಿ ಲಕ್ಷಾಂತರ:ವಂಚನೆ

ಸಾಲ ಕೊಡಿಸುವ ಸೋಗಿನಲ್ಲಿ ಲಕ್ಷಾಂತರ:ವಂಚನೆ


ಇಂಡಿ :ತಾಲೂಕಿನಲ್ಲಿ ಜನ ಅಭಿವೃದ್ಧಿ ಮಹಿಳಾ ಸ್ವ ಸಹಾಯ ಸಂಘ ಅಂತ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ.ಇಂಡಿ ತಾಲೂಕಿನ ಸಿಂದಗಿ ರಸ್ತೆಯ ಕಾಂಪ್ಲೆಕ್ಸ್ ಒಂದರಲ್ಲಿ ಈ ನಕಲಿ ಸಂಘದ ಕಚ್ಚೆರಿ ಒಂದನ್ನು ಸ್ಥಾಪಿಸಿ ಅಲ್ಲಿ ಯಾವುದೇ ರೀತಿಯ ಕಂಪ್ಯೂಟರ್ ಮತ್ತು ಇತರೆ ವಸ್ತುಗಳೇ ಇರಲಿಲ್ಲ. ಇಂಡಿ ತಾಲೂಕಿನ ಪ್ರತಿ ಹಳ್ಳಿಗಳಿಗೆ ಹೋಗಿ ಹೆಣ್ಣು ಮಕ್ಕಳ ಹತ್ತು ಜನರ ಒಂದು ಗುಂಪು ಮಾಡಿ ನಿಮಗೆ ಪ್ರತಿಯೊಬ್ಬರಿಗೂ 150000 ಸಾವಿರ ರೂ ಹಣ ನಿಮ್ಮ ಖಾತೆಗೆ 3ದಿನಗಳಲ್ಲಿ ಜಮಾ ಮಾಡುತ್ತೇವೆ 150000 ರ ದಲ್ಲಿ 15000ಸಾವಿರ ಸಬ್ಸಿಡಿ ಲೆಕ್ಕದಲ್ಲಿ ಇರುತ್ತೆ ಮುಂಗಡವಾಗಿ ಎಲ್ಲರೂ ತಲಾ 5000ಸಾವಿರ ದಂತೆ ಮೊದಲಿಗೆ ಕೊಡಬೇಕು ಅಂತ ಹೇಳಿ ತಲಾ 5000 ರಂತೆ ವಂಚಿಸಿ ಜನರಿಗೆ  ಮೋಸ ಮಾಡಿ ಪರಾರಿ ಆಗಿದ್ದರೆ ಎನ್ನುವ ಗುಮಾನಿ ಎಲ್ಲಡೆ ಮನೆಮಾತಾಗಿದೆ.ನಿಮ್ಮ ಸಾಲದ ಪ್ರಕ್ರಿಯೆ ಮುಗಿಯಲು 8 ದಿನ ಬೇಕಾಗುತ್ತದೆ ಎಂದು ಹೇಳಿ ಕರೆ ಕಟ್‌ ಮಾಡುತ್ತಿದ್ದರು. ಸರಿಯಾಗಿ 8 ದಿನಗಳ ನಂತರ ಮತ್ತೆ ಕರೆ ಮಾಡುವ ಈ ವಂಚಕರು, 'ನಿಮಗೆ ಸಾಲ ಮಂಜೂರಾಗಿದೆ. 5000 ಮುಂಗಡವಾಗಿ ನೀವು ಪಾವತಿಸಬೇಕಾಗುತ್ತದೆ.ಮುಂಗಡ ಜಮೆ ಮಾಡಿದ ವಾರದೊಳಗೆ ನಿಮ್ಮ ಖಾತೆಗೆ ಸಾಲದ ಹಣ ಸಂದಾಯವಾಗುತ್ತದೆ ಎನ್ನುವ ಭರವಸೆಯನ್ನೂ ನೀಡುತ್ತಿದ್ದರು. ವಾರ ಕಳೆದು ತಿಂಗಳು ಮುಗಿದರೂ ತಮ್ಮ ಖಾತೆಗೆ ಸಾಲದ ಹಣ ಬಾರದಿದ್ದಾಗ ಅವರು ವಾಪಾಸ್‌ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್‌ ಆಫ್‌ ಮಾಡಿಕೊಂಡು ಫರಾರಿಯಾಗಿದ್ದಾರೆ.ವಂಚಕರ ಬೈಕ್ ಸಂಖ್ಯೆ:KA18W416 ಮತ್ತು KA66J3945 ಹೀಗಿರುತ್ತದೆ. ಯಾರಾದರೂ ಈ ಬೈಕ್ ಸಂಖ್ಯೆ ಮತ್ತು ಅರವನ್ನು ಕಂಡರೆ ಯಾರು ಮೋಸ ಹೋಗದೆ ಕೂಡಲೇ ಹತ್ತಿರದ ಪೊಲೀಸ ಠಾಣೆಗೆ ಕರೆ ಮಾಡಬೇಕು ಈ ಘಟನೆ ನಡೆದ ಮೇಲಾದರೂ ಇಂಡಿ ತಾಲೂಕಿನ ಜನತೆ ದುಡ್ಡಿಗೆ ಮೋಸ ಹೋಗದೆ. ತಮ್ಮ ಧಾಖಲೆಗಳನ್ನು ನೀಡದೆ ಜಾಗೃತಿಯಿಂದ ಇರಬೇಕು.