ವಿಭಿನ್ನ ಸಂಗೀತ - ನೃತ್ಯ ಕಾರ್ಯಕ್ರಮ "ನೃತ್ಯಸಂಭ್ರಮ"

ವಿಭಿನ್ನ ಸಂಗೀತ - ನೃತ್ಯ ಕಾರ್ಯಕ್ರಮ "ನೃತ್ಯಸಂಭ್ರಮ"

ವಿಭಿನ್ನ ಸಂಗೀತ - ನೃತ್ಯ ಕಾರ್ಯಕ್ರಮ "ನೃತ್ಯಸಂಭ್ರಮ"

ಬೆಂಗಳೂರು: ನಗರದ ಪ್ರತಿಷ್ಠಿತ ನೃತ್ಯ ಶಾಲೆಯಾದ ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಜನವರಿ 23, ಮಂಗಳವಾರ ಮಧ್ಯಾಹ್ನ 3 ರಿಂದ 8ರ ವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಮುಚ್ಚಯ ರಂಗಮಂದಿರದಲ್ಲಿ "ಕರ್ನಾಟಕ ಸಂಗೀತ", "ಜನಪದ ಸಂಗೀತ", "ಭರತನಾಟ್ಯ", "ಜನಪದ ನೃತ್ಯ" ಮುಂತಾದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಆರ್. ಚಂದ್ರಶೇಖರ್ (ಸಹಾಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ), ಶ್ರೀ ಲೇಪಾಕ್ಷಿ ಸಂತೋಷ ರಾವ್ (ಹಿರಿಯ ಪತ್ರಕರ್ತರು, ಬೆಂಗಳೂರು), ಶ್ರೀ ಪ್ರಸನ್ನ ಪಂಚಾಕ್ಷರಯ್ಯ (ಕಾರ್ಯದರ್ಶಿ, ವೀರಶೈವ ಲಿಂಗಾಯತ ಸಾಂಸ್ಕೃತಿಕ ವೇದಿಕೆ), ಮತ್ತು ಶ್ರೀ ಎಂ.ಎ. ರಂಗಸ್ವಾಮಿ (ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಹಾಸನ) ಆಗಮಿಸಲಿದ್ದು, ಕಲಾಭಿಮಾನಿಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕ ನಿರ್ದೇಶಕರೂ, ಗುರುಗಳೂ ಆದ ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರು ಕೋರಿದ್ದಾರೆ.