ಇಳಿಯ ಚುಂಬಿಸುತ ಮಳೆರಾಯ

ಇಳಿಯ ಚುಂಬಿಸುತ ಮಳೆರಾಯ

ಮಳೆ ಬಂತು ಜೋರಾಗಿ 
ಸಂತಸವ ತಂತು ಬಿರುಸಾಗಿ 
ನಗುಮುಖದಿ  ಬರ  ಮಾಡಿಕೊಳ್ಳುತ
ಇಳೆಯ ಚುಂಬಿಸುತ ಮಳೆರಾಯ .....

 ಪ್ರಕೃತಿಯ ಮಾತೆಗದು ಹಬ್ಬವು 
ಹಸಿರ  ಸೀರೆಯ ಉಡುತಿರಲು  
ಚಿಗುರಲೆಗೆ ಅದುವೇ ಆಡಂಬರವು 
ಹಕ್ಕಿಪಿಕ್ಕಿಗಳು  ನಾದದಿ ನಲಿಯುತಿರಲು.....

 ತಂಪಾದ ವಾತಾವರಣದಿಂದ ತುಂಬಿರಲು 
 ಮನುಕುಲವು ಸಂತಸದಿ ಕುಣಿಯುತಿರಲು
 ರೈತರ  ಬಯಕೆಗಳೆಲ್ಲ ಈಡೇರುತಿರಲು 
 ಬೆಳೆಗಳ ಬಗ್ಗೆ ಚಿಂತಿಸದೆ ಕಾರ್ಯ ಮಾಡುತಿರಲು.....

  ಯುಗಾದಿ ಹಬ್ಬದ ಚಿಗುರಿನ ಪ್ರಥಮ ಮಳೆಯು  
 ಎಲ್ಲರಲು  ಮೂಡಿಸುತಿದೆ  ಆಹ್ಲಾದಕರ  ಭಾವನೆಯು  
 ಪುಟ್ಟ ಪುಟ್ಟ ಮಕ್ಕಳಲ್ಲ ಕುಣಿಯುತಿರಲು
 ಮಳೆರಾಯ ಅದನ್ನು ನೋಡಿ ಸಂತಸ ಪಡುವಂತಾಗುತ್ತಿರಲು......

 ಭಕ್ತಿಯಲಿ ಬೇಡಿದ್ದು  ಈಡೇರಿತೆಂದು 
 ಆರಕೆಗಳ ತೀರಿಸುತ ದೇವರ ಪೂಜಿಸುತಿರಲು 
 ಬೇಕು ಬೇಡಗಳ ಚರ್ಚೆಯ ಮಾಡುತಲಿ 
 ಸಂತಸದಿ ಬಾಳಿರಿ ಎಲ್ಲಾ ಒಂದುಗೂಡು ತಲಿ...... 


ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್..
ಸಾಮಾಜಿಕ ಚಿಂತಕಿ. ಶಿಕ್ಷಕಿ. ಹಾಸನ