ಸವಿತಾ ಮಹರ್ಷಿರವರ ಜಯಂತಿ ಆಚರಣೆ ಮಾಡಿದ ಗೂಡಿಹಾಳ ಶಾಲೆಯ ಶಿಕ್ಷಕರು ಮತ್ತು ಮಕ್ಕಳು

ಸವಿತಾ ಮಹರ್ಷಿರವರ ಜಯಂತಿ ಆಚರಣೆ ಮಾಡಿದ ಗೂಡಿಹಾಳ ಶಾಲೆಯ ಶಿಕ್ಷಕರು ಮತ್ತು ಮಕ್ಕಳು

ಸವಿತಾ ಮಹರ್ಷಿರವರ ಜಯಂತಿ ಆಚರಣೆ ಮಾಡಿದ ಗೂಡಿಹಾಳ ಶಾಲೆಯ ಶಿಕ್ಷಕರು ಮತ್ತು ಮಕ್ಕಳು

ಮುದ್ದೇಬಿಹಾಳ: ತಾಲೂಕಿನ ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ  ಶ್ರೀ ಸವಿತಾ ಮಹರ್ಷಿರವರ ಜಯಂತಿ ಆಚರಣೆ ಮಾಡಲಾಯಿತು. ಶ್ರೀ ಬಸನಗೌಡ ಸಂಗನಗೌಡ ಬಿರಾದಾರ ಸವಿತಾ ಮಹರ್ಷಿರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಅವರು ಶ್ರೀ ಸವಿತಾ ಮಹರ್ಷಿ ರವರ ಬಗ್ಗೆ ಮಾತನಾಡುತ್ತಾ ಪುರಾಣದಲ್ಲಿ ಯಜ್ಞ ಯಾಗಾದಿಗಳನ್ನು ಮಾಡುವಾಗ ಶಿವನ ಮೀಸೆ ಹಾಗೂ ಕೂದಲುಗಳಿಗೆ ಬೆಂಕಿ ತಗಲಿ ಕೂದಲುಗಳು ಸುಟ್ಟಾಗ ಪಾರ್ವತಿ ದೇವಿಯು ಅವುಗಳನ್ನು ಸರಿ ಮಾಡಲು ಹೇಳಿದಳು ಆಗ ಶಿವನ ಕಣ್ಣಿನಿಂದ ಹುಟ್ಟಿದವರೇ ಶ್ರೀ ಸವಿತಾ ಮಹರ್ಷಿಗಳು ಇವರು ಶಿವನ ಕೂದಲು ಕ್ಷೌರ ಮಾಡಿ ಚೆನ್ನಾಗಿ ಕಾಣುವಂತೆ ಮಾಡಿದರು ಇಂದು ಈ ಸವಿತಾ ಸಮಾಜದ ಬಾಂಧವರು ಕೈಯಲ್ಲಿ ಕತ್ರಿ ಬಾಚಣಿಗೆ ಹಾಗೂ ಕನ್ನಡಿ ಹಿಡಿದು ನಿಲ್ಲದೆ ಹೋದರೆ ಮನುಷ್ಯರಾದ ನಾವು ರಾಕ್ಷಸರಂತೆ ಕೂದಲು ಮೀಸೆ ಬಿಟ್ಟು ಅಡ್ಡಾಡುವುದು ನಿಶ್ಚಿತ ಆ ನಿಟ್ಟಿನಲ್ಲಿ ನಮಗೆ ಸೇವೆ ಮಾಡುವ ಶ್ರೀ ಸವಿತಾ ಮಹರ್ಷಿ ಸಮಾಜದ ಬಾಂಧವರನ್ನು ಸಹೋದರರಾಗಿ ಗೌರವ ಪ್ರೇಮ ಆದರಗಳಿಂದ ಕಾಣುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಅದೇ ರೀತಿಯಲ್ಲಿ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕೂದಲುಗಳನ್ನು ಕತ್ತರಿಸಿ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕೃತಿ ಬಗ್ಗೆ ಅಭಿಮಾನ ಮೂಡಿಸುವದು ಶ್ರೀ ಸವಿತಾ ಮಹರ್ಷಿ ಸಮಾಜದ ಜವಾಬ್ದಾರಿಯಾಗಿದ್ದು ಮಕ್ಕಳಿಗೆ ಪ್ಯಾಶನ್ ಗಿಂತ ಶಿಕ್ಷಣ ಮುಖ್ಯ ಎಂದು ತಿಳಿ ಹೇಳುವುದು ಶ್ರೀ ಸವಿತಾ ಮಹರ್ಷಿ ಬಾಂಧವರ ಹೊಣೆಗಾರಿಕೆ ಎಂದರು. ಸಂವಿಧಾನ ಜಾರಿಯಾಗಿ 75ನೇ ವರ್ಷ ಕಾಲಿಡುವ ಸುಸಂದರ್ಭದಲ್ಲಿ ರಾಜ್ಯಾದ್ಯಂತ ಸಂವಿಧಾನ ಜಾಥಾ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು ನಮ್ಮ ಸಂವಿಧಾನ ಹೇಳುವಂತೆ ನಾವೆಲ್ಲರೂ ಸಮಾನರು ಇಂದು ಎಲ್ಲ ಸಮಾಜ ಬಾಂಧವರು ನೆಮ್ಮದಿಯಿಂದ ಬದುಕಲು ನಮ್ಮ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಆಗಿದೆ ನಮ್ಮ ಸಂವಿಧಾನವನ್ನು ನಾವೆಲ್ಲರೂ ಗೌರವಿಸೋಣ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ಸಹೋದರರಾಗಿ ಭಾತೃತ್ವ ಭಾವನೆಯಿಂದ ಸಮಾನತೆಯಿಂದ ಗೌರವದಿಂದ ಬದುಕುವ ಹಕ್ಕನ್ನು ನಿರ್ಮಿಸುವುದರಲ್ಲಿ ಎಲ್ಲರೂ ಕೈಜೋಡಿಸೋಣ ಸಾಂಸ್ಕೃತಿಕ ನಾಯಕರದ ಬಸವಣ್ಣನವರು ಹಡಪದ ಅಪ್ಪಣ್ಣನವರು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಹೇಳಿದರು. ಗುಡಿಹಾಳ ಗ್ರಾಮದ ಶಿಕ್ಷಣ ಪ್ರೇಮಿಗಳಾದ ಬೈಲಪ್ಪಗೌಡ (ಮುತ್ತನಗೌಡ) ಬಸನಗೌಡ ವಜ್ಜಲ
ರವರು ಮಕ್ಕಳಿಗೆ ಜಾಮೂನು  ಸಿಹಿ ವಿತರಣೆ ಮಾಡಿದರು ಹಾಗೂ  ಪ್ರಭಾರಿ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿರವರ ಆತ್ಮೀಯರಾದ ಶ್ರೀ ಸವಿತಾ ಮಹರ್ಷಿ ತಾಲೂಕ ಅಧ್ಯಕ್ಷರು ಹಾಗೂ ನಯನ ಭಾರ್ಗವ ಪತ್ರಿಕೆಯ ವರದಿಗಾರರು ಆಗಿರುವ ಶ್ರೀ ರವಿ ಮಲ್ಲಣ್ಣ ತೇಲಂಗಿರವರು ತಮ್ಮ ತಂದೆಯವರಾದ ಶ್ರೀ ಸವಿತಾ ಮಹರ್ಷಿ ಸಮಾಜದ ಗೌರವಾಧ್ಯಕ್ಷರಾದ ಶ್ರೀ ಮಲ್ಲಣ್ಣ ಮಹಾದೇವಪ್ಪ ತೇಲಂಗಿ ರವರ ಹೆಸರಿನಲ್ಲಿ ಎಲ್ಲ ಮಕ್ಕಳಿಗೂ ಹಾಗೂ ಶಿಕ್ಷಕರಿಗೂ 75ನೇ ಸಂವಿಧಾನ  ಸಂಭ್ರಮಾಚರಣೆಯ ವರ್ಷದ ನಿಮಿತ್ತ 75 ಉಪಯುಕ್ತ ಪುಸ್ತಕಗಳನ್ನು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪಾಲಕ ಪೋಷಕರಾದ ಶ್ರೀ ಬಸನಗೌಡ ಸಂಗನಗೌಡ ಬಿರಾದಾರ ಶ್ರೀ ಚಿದಾನಂದ ಹಿರೇಕುರುಬರ ಶ್ರೀ ಮುದುಕಪ್ಪ ಚಲವಾದಿ ಶ್ರೀ ಶರಣಗೌಡ ಹನುಮಂತರಾಯ ಲಿಂಗದಳ್ಳಿ ಶ್ರೀ ಶಿವಪ್ಪ ತಾಳಿಕೋಟಿ ಶ್ರೀಮತಿ ದೇವಮ್ಮ ಮೇಟಿ ಉಳಿದಂತೆ ಶಿಕ್ಷಕರೂ ಹಾಗೂ ಅತಿಥಿ ಶಿಕ್ಷಕರೂ ಸೇರಿದಂತೆ ಮುದ್ದು ಮಕ್ಕಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಪ್ರಾರ್ಥಿಸಿದರು. ಅತಿಥಿ ಶಿಕ್ಷಕಿಯರಾದ ಶ್ರೀಮತಿ ಕಾಶಿಬಾಯಿ ಹಾದಿಮನಿ  ನಿರೂಪಿಸಿದರು, ಶ್ರೀಮತಿ ಎಲ್ಲಮ್ಮ ಉತಾಳೆ ಸ್ವಾಗತಿಸಿದರು ಶಿಕ್ಷಕಿಯರಾದ ಕುಮಾರಿ ಲಕ್ಷ್ಮೀ ಮನಿಕಟ್ಟಿ ವಂದಿಸಿದರು.