ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು -ಶಂಭುನಾಥ ಶ್ರೀ

ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು -ಶಂಭುನಾಥ ಶ್ರೀ

ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು -ಶಂಭುನಾಥ ಶ್ರೀ

ಚನ್ನರಾಯಪಟ್ಟಣ: ಮನೆಗಳಲ್ಲಿ ಪೋಷಕರು, ಮತ್ತು ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಒಳ್ಳೆಯ ವಾತಾವರಣ ಕಲ್ಪಿಸಿದರೆ ಅವರು ಉತ್ತಮ ಸಂಸ್ಕಾರ ಜ್ಞಾನದೊಂದಿಗೆ ಸಮಾಜದ ಆಸ್ತಿಗಳಾಗುತ್ತಾರೆ ಎಂದು ಹಾಸನ ಶ್ರೀ ಆದಿಚುಂಚನಗಿರಿ ಸಂಸ್ಥಾನ ಹಾಸನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿನ ಬಿಜಿಎಸ್ ಪಬ್ಲಿಕ್ ಸ್ಕೂಲ್ ವತಿಯಿಂದ ಆಯೋಜಿಸಲಾಗಿದೆ ಬಿಜಿಎಸ್ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಶ್ರೀ ಗಳು ಮಕ್ಕಳಿಗೆ ಚಿಕ್ಕಂದಿನಿಂದಲೇ ವಿದ್ಯೆಯೊಂದಿಗೆ ವಿನಯ, ವಿಚಾರ, ಸಂಸ್ಕಾರ ,ಶ್ರದ್ಧೆ, ಸಂಸ್ಕೃತಿಯೊಂದಿಗೆ ಗುರುಹಿರಿಯರೊಂದಿಗೆ ನಡೆದುಕೊಳ್ಳುವುದನ್ನು ಕಲಿಸುವುದು ಪೋಷಕರ ಕರ್ತವ್ಯವಾಗಿದೆ ಎಂದರು, ಮಕ್ಕಳಲ್ಲಿರುವ ಆಸಕ್ತಿಯನ್ನು ತಿಳಿದು ಆ ನಿಟ್ಟಿನಲ್ಲಿ ಜ್ಞಾನವನ್ನು ನೀಡುವ ವಾತಾವರಣ ಕಲ್ಪಿಸಬೇಕು, ಮಕ್ಕಳು ಮಕ್ಕಳಾಗಿ ಬೆಳೆಯಲು ಬಿಡಬೇಕು, ಹುಟ್ಟು ಸಾವಿನ ನಡುವೆ ಸಮಾಜಕ್ಕೆ ಏನಾದರೂ ಕೊಡುಗೆಯಾಗಿ ನೀಡುವ ಆದರ್ಶ ವ್ಯಕ್ತಿಯನ್ನಾಗಿಸಬೇಕು, ಬಹು ಮುಖ್ಯವಾಗಿ ಮಾನವ ಮೌಲ್ಯವನ್ನು ಕಲ್ಪಿಸಬೇಕು, ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶಂಬುನಾಥ ಸ್ವಾಮೀಜಿ, ಶ್ರೀ ಶಿವಪುತ್ರ ಸ್ವಾಮೀಜಿ, ಬಿಇಓ ದೀಪಾ, ಪ್ರಾಂಶುಪಾಲರಾದ ಕುಮಾರ್, ಎಂ ಕೆ ಮಂಜುನಾಥ್, ಸೇರಿದಂತೆ ಇತರರು ಹಾಜರಿದ್ದರು.