ವಿದ್ಯಾರ್ಥಿಗಳುಸತತ ಅಭ್ಯಾಸದಲ್ಲಿ ತೋಡಗಬೇಕು-ಬಿರಾದಾರ

ವಿದ್ಯಾರ್ಥಿಗಳುಸತತ ಅಭ್ಯಾಸದಲ್ಲಿ ತೋಡಗಬೇಕು-ಬಿರಾದಾರ

ವಿದ್ಯಾರ್ಥಿಗಳುಸತತ ಅಭ್ಯಾಸದಲ್ಲಿ ತೋಡಗಬೇಕು-ಬಿರಾದಾರ

ಸಿಂದಗಿ : ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಮಹತ್ವದ ಹಂತವಾಗಿದ್ದು ಕೆಲವೇ ದಿನಗಳಿರುವುದರಿಂದ ವಿದ್ಯಾರ್ಥಿಗಳು ತಾವು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಸತತ ಅಭ್ಯಾಸದಿಂದ ಹೆಚ್ಚಿನ ವಿಷಯವನ್ನು ಮನನ ಮಾಡಿಕೊಂಡು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ಬರೆಯಬೇಕು ಎಂದು  ಪ್ರೌಢ ಶಾಲಾ  ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಕನ್ನಡ ವಿಷಯ ವೇದಿಕೆ ಅಧ್ಯಕ್ಷ ಆರ್ ಎಚ್ ಬಿರಾದಾರ ಹೇಳಿದರು. ತಾಲೂಕಿನ ಮೋರಟಗಿ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಂಸ್ಥೆಯಲ್ಲಿ  ಕನ್ನಡ ವಿಷಯ ವೇದಿಕೆ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ  ಕಾರಜೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಆದರ್ಶ ಶಿಕ್ಷಕ ಪುರಸ್ಕೃತರಾದ ಶ್ರೀ ಎಂ ಸಿ ಅಂಗಡಿ  ವಹಿಸಿಕೊಂಡು ಮಾತನಾಡಿ  ಶಿಕ್ಷಣದಲ್ಲಿ  ವಿದ್ಯಾರ್ಥಿಗಳು ಸತತ ತಂತ್ರಜ್ಞಾನದ ಬಳಕೆಯನ್ನು ಮಾಡಿಕೊಂಡು ವಿದ್ಯಾರ್ಥಿಗಳು ತಾವು ಯಾವ ರೀತಿ ವಿದ್ಯಾಭ್ಯಾಸ  ಮಾಡಬೇಕೆಂದು ತಿಳಿ ಹೇಳಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ. ಶ್ರೀ ಶರಣಗೌಡ ಕರ್ನಾಳ ಸರ್ಕಾರಿ ಪ್ರೌಢಶಾಲೆ ಮಲಘಾಣ ತಾಲೂಕ ಬಸವನ ಬಾಗೇವಾಡಿ. ಇವರು ಕನಿಷ್ಠ ಕೆಳಹಂತದ ವಿದ್ಯಾರ್ಥಿಗಳನ್ನು ಪಾಸಿಂಗ್ ಪ್ಯಾಕೇಜ್ ಮೂಲಕ ವಿದ್ಯಾರ್ಥಿಗಳನ್ನು ಹೇಗೆ ತೆರ್ಗಡೆ ಮಾಡಿಸುವುದನ್ನು ತಿಳಿಹೇಳಿದರು. ಹಿರಿಯ ಕನ್ನಡ ಶಿಕ್ಷಕರಾದ ಬಿ.ಎಮ್ ಹೂನಳ್ಳಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಆರ್ ಆರ್ ಪೆಟ್ಲುರ್ ಗುರುಗಳು ನೀಲ ನಕ್ಷೆ ಬಗ್ಗೆ ತಿಳಿಸಿ ಮಾತನಾಡಿ ಪರೀಕ್ಷೆಯನ್ನು ಯಾವುದೇ ಅಂಜಿಕೆ ಇಲ್ಲದೆ ಎದುರಿಸಬೇಕು ಎಂದರು. ಪ್ರೌಢಶಾಲೆಯ ಮುಖ್ಯೋಪಾಧ್ಯ  ಬಿ.ಆರ್ ಬಿರಾದಾರ  ಮಹಾತಪಸ್ವಿ ಯೋಗಿ ವೇಮನರ ಜಯಂತಿ ಆಚರಿಸಿ  ಅವರು ಮಾತನಾಡಿ  ವೇಮನರು ಹದಿನೈದನೇ ಶತಮಾನದಲ್ಲಿ ಆಂಧ್ರಪ್ರದೇಶದ ತೆಲುಗಿನ ಶ್ರೇಷ್ಠ ವಚನಕಾರ, ಕವಿ ಸಮಾಜ ಚಿಂತಕರು. ಮಾನವ ಕುಲದ ಏಳಿಗೆಗಾಗಿ ಶ್ರಮಿಸಿದರು. ಕನ್ನಡದಲ್ಲಿ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ತೆಲುಗಿಗೆ ವೇಮನ ವಚನಕಾರರು, ಮಹಾಕವಿ ಮಹಾಯೋಗಿಯಾಗಿದ್ದಾರೆ.