ಭಾರಿ ಮಳೆ ಹಾಗೂ ಬಿರುಗಾಳಿಗೆ ವೀಳ್ಯದೆಲೆ ಬೆಳೆ ನೆಲಸಮ ಸ್ಥಳಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ 

ಭಾರಿ ಮಳೆ ಹಾಗೂ ಬಿರುಗಾಳಿಗೆ ವೀಳ್ಯದೆಲೆ ಬೆಳೆ ನೆಲಸಮ ಸ್ಥಳಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ 

ಹಲಗೂರು: ಶನಿವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿ ಯಿಂದಾಗಿ ತಾಲೂಕಿನ ಬಾಳೆ ಹೊನ್ನಿಗ ಗ್ರಾಮದಲ್ಲಿ ಅಪಾರ ಪ್ರಮಾಣದ ವೀಳ್ಯದೆಲೆ ಬೆಳೆ ನೆಲಸಮವಾಗಿರುವ ಸ್ಥಳಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಗ್ರಾಮದ ಜಯಮ್ಮ, ಸವಿತ, ನಾಗರಾಜು, ಶಿವಮ್ಮ ಸೇರಿದಂತೆ ಒಟ್ಟು 30ಕ್ಕೂ ಹೆಚ್ಚು ಬೆಳೆಗಾರರಿಗೆ ಸೇರಿದ ಸುಮಾರು 25 ಎಕರೆ ಯಷ್ಟು ವೀಳ್ಯದೆಲೆ ತೋಟ ಭಾರಿ ಮಳೆ ಬಿರುಗಾಳಿ ಹೊಡೆತಕ್ಕೆ ನೆಲಸಮವಾಗಿದೆ ಎನ್ನಲಾಗಿದೆ.ಹಾನಿಗೊಳಗಾದ ಎಲೆ ತೋಟ ಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಪಿ ಎಂ ನರೇಂದ್ರ ಸ್ವಾಮಿ ಅವರು ಹಾನಿಯ ಪರಿಶೀಲನೆ ನಡೆಸಿದರಲ್ಲದ ಶೀಘ್ರವಾಗಿ ಬೆಳೆ ನಷ್ಟದ ಅಂದಾಜು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿದರು.ಈ ವೇಳೆ ಮಾತನಾಡಿದ ಶಾಸಕರು ವರ್ಷದ ಮೊದಲ ಮಳೆಯಲ್ಲೇ ರೈತರ ಬೆಳೆಗಳು ಅದರಲ್ಲೂ ವಿಶೇಷವಾಗಿ ಬಾಳೆ ಹೊನ್ನಿಗ ಗ್ರಾಮದಲ್ಲಿ ವೀಳ್ಯದೆಲೆ ಬೆಳೆಯನ್ನೇ ಜೀವನಾಧಾರ ಮಾಡಿಕೊಂಡಿರುವ ಬಡ ಬೆಳೆಗಾರರು ಬೆಳೆ ಕಳೆದು ಕೊಂಡು ತೀವ್ರ ಸಂಕಷ್ಟಕ್ಕೆ ಒಳಗಾ ಗಿದ್ದು ನಷ್ಟಕ್ಕೊಳಗಾದ ಬೆಳೆಗಾರರಿಗೆ ಸರ್ಕಾರದಿಂದ ಸಾಂದರ್ಭಿಕ ಪರಿಹಾರದ ಜೊತೆಗೆ ನಷ್ಟವಾಗಿ ರುವ ಬೆಳೆಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಮುಖಂಡರಾದ ಕೃಷ್ಣ, ಬಾಗು ಕುಮಾರ್, ಮಾಜಿ ಜಿ ಪಂ ಸದಸ್ಯ ಚಂದ್ರಕುಮಾರ್, ಗ್ರಾ ಪಂ ಅಧ್ಯಕ್ಷ ಶಿವಣ್ಣ, ಪ್ರಕಾಶ್ ಮತ್ತಿತರರು ಈ ವೇಳೆ ಹಾಜರಿದ್ದರು.