ಬಿಜೆಪಿ ಮುಖಂಡ ವಿರೋಪಾಕ್ಷ ಗಾದಗಿ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹ 

 ಬಿಜೆಪಿ ಮುಖಂಡ ವಿರೋಪಾಕ್ಷ ಗಾದಗಿ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹ 

ಕೊರಟಗೆರೆ ;- ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ಅವರ ಕುಟುಂಬದ ವಿರುದ್ದ ಅವಹೇಳನಕಾರಿ ಹಾಗೂ ಆಶ್ಲೀಲವಾಗಿ ನಿಂದಿರುವ ಬೀದರ್‌ನ ಬಿಜೆಪಿ ಮುಖಂಡ ವಿರೋಪಾಕ್ಷ ಗಾದಗಿ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಬಂದಿಸಿ ರಾಜ್ಯದಿಂದ ಗಡಿಪಾರು ಮಾಡುವಂತೆ ಜಿಲ್ಲಾ ವೀರಶೈವ ಮುಖಂಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಆಗ್ರಹಿಸಿದರು.
ಅವರು ಪಟ್ಟಣದ ರಾಜೀವ ಭವನದಲ್ಲಿ ಡಾ.ಜಿ.ಪರಮೇಶ್ವರ ರವರ ಬೆಂಬಲಿಗ ರೊಂದಿಗೆ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿ ಹುಬ್ಬಳಿಯಲ್ಲಿ ನಡೆದ ನೇಹಾ ಹಿರೇಮಠ ರವರ ಕೊಲೆಯ ಬಗ್ಗೆ ನಮಗೂ ಆಕ್ರೂಶ ಮತ್ತು ದುಃಖವಿದೆ, ಅಪರಾದಿಯನ್ನು ಗಲ್ಲಿಗೇರಿಸಲಿ ಇಲ್ಲಾವೇ ನಮ್ಮ ಕಾನೂನಿನಲ್ಲಿ ಅವಕಾಶ ವಿದ್ದರೆ ಎನ್‌ಕೌಂಟರ್ ಮಾಡಲಿ, ಅದರಲ್ಲಿ ಅದಕ್ಕೆ ನಮ್ಮಗಳ ಬೆಂಬಲವಿದೆ, ನೇಹಹಿರೇಮಠ್ ರವರು ಕೊಲೆಯಾದಾಗ ಗೃಹ ಸಚಿವರಾಗಿ ಡಾ.ಜಿ.ಪರಮೇಶ್ವರ ರವರು ಎಲ್ಲಾ ರೀತಿಯ ಕಾನೂನು ಕ್ರಮ ಕೈಗೊಂಡು ಕೂಡಲೆ ಆರೋಪಿಯನ್ನು ಬಂದಿಸಿದ್ದಾರೆ, ಅಂದಿನ ಘಟನೆಯ ಬಗ್ಗೆ ಪೊಲೀಸ್ ಇಲಾಖೆಯ ಪ್ರಥಮ ಹಂತದ ವರದಿಯನ್ನು ಮಾಧ್ಯಮದ ಮುಂದೆ ತಿಳಿಸಿದ್ದಾರೆ, ಅದನ್ನು ಅರಿಯದ ಬಿಜೆಪಿ ಪಕ್ಷದ ಮೂರ್ಖ, ಗೂಂಡಾ, ವಿರೋಪಾಕ್ಷಗಾದಗಿ ಮಾತಿನ ಬರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ರವರನ್ನು ಮತ್ತು ಅವರ ಕುಟುಂಬವನ್ನು ಹೀಯಾಳಿಸಿ ಸಾರ್ವಜನಿಕರ ಮುಂದೆ ಅಶ್ಲೀಲವಾಗಿ ನಿಂದಿಸಿದ್ದಾನೆ, ಡಾ.ಜಿ.ಪರಮೇಶ್ವರ ರವರ ಕಾಲಿನ ದೂಳಿಗೂ ಸಮವಿರದ ಗಾದಗಿ ಗೂಂಡಾ ಬೇಷರತ್ತಾಗಿ ಬಂದು ಡಾ.ಜಿ.ಪರಮೇಶ್ವರವರ ಮುಂದೆ ಬಂದು ಕ್ಷಮೆ ಕೇಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾಧ್ಯಂತ ಡಾ.ಜಿ.ಪರಮೇಶ್ವರ ಬೆಂಬಲಿಗರು ಉಗ್ರ ಪ್ರತಿಭಟನೆ ಮಾಡಲಿದ್ದು ಗೂಂಡಾ ಗಾದಗಿಗೆ ಬುದ್ದಿ ಕಳಿಸುತ್ತೇವೆ ಎಂದರು.
ಕೆ.ಪಿ.ಸಿ.ಸಿ ಹಾಗೂ ಪ.ಪಂ.ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಬಿಜೆಪಿಯು ಒಂದು ಅಮಾಯಕ ಹೆಣ್ಣು ಮಗಳ ಕೊಲೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ, ನೇಹಾ ಹಿರೇಮಠರವರ ಕೊಲೆ ಎಲ್ಲಾರಿಗೂ ದುಃಖ ತಂದಿದೆ, ಆದರೆ ಬಿಜೆಪಿ ಪಕ್ಷ ಅಮಾಯಕರ ಸಾವಿನಲ್ಲೂ ತನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದೆ, ಇದೇ ರೀತಿ ಪಕ್ಕದ ತಾಲೂಕು ಗುಬ್ಬಿ ಹಾಗೂ ರಾಜ್ಯದಲ್ಲಿ ಹಲವು ಹೆಣ್ಣು ಮಕ್ಕಳ ದಾರುಣ ಹತ್ಯಗಳಾಗಿವೆ, ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಆರೋಪಿಗಳ ವಿರುದ್ದ ಪ್ರತಿಭಟಿಸದೆ ನೊಂದವಾರಿಗೆ ಸಾತ್ವನ ಹೇಳದ ಬಿಜೆಪಿ ನಾಯಕರು ಕೊಲೆ ಮಾಡಿದವನು ಒಬ್ಬ ಮುಸ್ಲಿಂ ಯುವಕ ಎಂಬ ಕಾರಣವನ್ನು ಮುಂದಿಟ್ಟಕೊAಡು ರಾಷ್ಟಿçÃಯ ನಾಯಕರು ಇದರಲ್ಲಿ ರಾಜಕೀಯ ಮಾಡುತ್ತಿರುವುದು ನಾಚಿಕೆ ಗೇಡಾಗಿದೆ, ಈ ಘಟನೆಯಲ್ಲಿ ಗೃಹ ಸಚಿವರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ, ಅದರೆ ಕೋಮುವಾದಿ ಪಕ್ಷದ ಬೀದರ್‌ನ ಗುಂಡಾ ಮುಖಂಡ ಅಯೋಗ್ಯ ವಿರೂಪಾಕ್ಷ ಗಾದಗಿ ಗೃಹ ಸಚಿವರ ಬಗ್ಗೆ ಹೀನಾಯವಾಗಿ ಮಾತನಾಡಿರುವುದು ಅವರ ಬೆಂಬಲಿಗರನ್ನು ಕೆರಳಿಸಿದೆ ಇದನ್ನು ಹೀಗೆ ಮುಂದುವರೆಯುವುದನ್ನು ಬಿಡುವುದಿಲ್ಲಾ ಗಾದಗಿ ಗೊಂಡಾಗೆ ಡಾ.ಜಿ.ಪರಮೇಶ್ವರ ಬೆಂಬಲಿಗರು ಬುದ್ದಿಕಲಿಸಲ್ಲಿದ್ದಾರೆ ಎಂದರು.
ಕಾAಗ್ರೆಸ್ ಪಕ್ಷದ ಮಹಿಳಾ ಪದಾದಿಕಾರಿ ವಿದ್ಯಾದಿನೇಶ್ ಮಾತನಾಡಿ ನೇಹಾ ರವರಿಗಾದ ಅನ್ಯಾಯದ ವಿರುದ್ದ ಮಹಿಳಾ ಕಾಂಗ್ರೆಸ್‌ನ ಅನೇಕ ಪದಾದಿಕಾರಿಗಳು ಖಂಡಿಸಿದ್ದಾರೆ, ಆದರೆ ಬಿಜೆಪಿ ಪಕ್ಷದವರ ಹಾಗೆ ಸಾವಿನ ಮನೆಯಲ್ಲಿ ರಾಜಕೀಯ ಮಾಡಿಲ್ಲಾ, ಇಂತಹ ಸೂಕ್ಷö್ಮ ವಿಚಾರದಲ್ಲಿ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಸರಿಯಾದ ಕಾನೂನು ರೀತಿ ಕ್ರಮ ಕೈಗೊಂಡಿದ್ದರೂ ಬಿಜೆಪಿಯ ಗೂಂಡಾ ಗಾದಗಿಯ ಹೇಳಿಕೆ ಮಹಿಳಾ ಕಾಂಗ್ರೆಸ್ ನವರನ್ನು ಕೆರಳಿಸಿದ್ದು,  ಅವನಿಗೂ ಹೆಂಡತಿ ಮಕ್ಕಳು ಅಕ್ಕ-ತಂಗಿಯರು ಇದ್ದಾರೆಂಬುದನ್ನು ಮರೆತ್ತಿದ್ದಾನೆ, ಹೆಣ್ಣು ಮಕ್ಕಳಿಗೆ ಹಾಗೂ ತಾಯಂದಿರಿಗೆ ಬೆಲೆ ಕೊಡದ ಇಂತಹ ಮೂರ್ಖನನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಕವಿತಾ, ಜಿಲ್ಲಾ ಎಸ್ಟಿ ಅಧ್ಯಕ್ಷ ಕುಮಾರ್, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಮುಖಂಡರುಗಳಾದ ಮಹಾಲಿಂಗಪ್ಪ, ಹುಲಿಕುಂಟೆ ಪ್ರಸಾದ್, ಈಶ್ವರಯ್ಯ, ಎಲ್.ರಾಜಣ್ಣ, ತೀತಾ ಮಂಜುನಾಥ್, ಗಟ್ಲಹಳ್ಳಿ ಕುಮಾರ್, ಹೊಳವನಹಳ್ಳಿ ಜಯರಾಂ, ಟಿ.ಸಿ.ರಾಮಯ್ಯ, ಗೊಂದಿಹಳ್ಳಿ ರಂಗರಾಜು, ಹಂಚಿಹಳ್ಳಿ ಹನುಮಂತ, ಆನಂದ್, ಕೆ.ಬಿ.ಲೋಕೇಶ್, ಮಲ್ಲಿಕಾರ್ಜುನ್, ಕಿರಣ್, ಚಂದನ್, ರೇಣುಕಪ್ಪ, ಸಿದ್ದರಾಜು, ಉಮಾಶಂಕರ್, ಯುವ ಘಟಕದ ದೀಪಕ್, ರಂಜಿತ್, ಏರ್‌ಟೇಲ್ ಗೋಪಿ, ಅರವಿಂದ್, ಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.