ಮಲ್ಲೇಶ್ವರಂನಲ್ಲಿ ಎನ್‌ಸಿಸಿ ವಿದ್ಯಾರ್ಥಿನಿಯರಿಂದ ಮತದಾನ ಜಾಗೃತಿ ಕುರಿತು ಬೀದಿ ನಾಟಕ  

ಮಲ್ಲೇಶ್ವರಂನಲ್ಲಿ ಎನ್‌ಸಿಸಿ ವಿದ್ಯಾರ್ಥಿನಿಯರಿಂದ ಮತದಾನ ಜಾಗೃತಿ ಕುರಿತು ಬೀದಿ ನಾಟಕ  

ಲೋಕ ಸಭಾ ಚುನಾವಣೆ-2024 ರ ಅಂಗವಾಗಿ ಜನ ಜಾಗೃತಿ ಅಭಿಯಾನವನ್ನು ಕೈಗೊಂಡಿರುವ ಬಿಬಿಎಂಪಿ ವತಿಯಿಂದ ಪಶ್ಚಿಮ ವಲಯದ ಭಾಗದಲ್ಲಿ, ಉಪ ಆಯುಕ್ತರಾದ ಮಂಜುನಾಥ ಸ್ವಾಮಿರವರ ಉಸ್ತುವಾರಿಯಲ್ಲಿ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕಳೆದ ಮೂರ್ನಾಲ್ಕು ವಾರಗಳಿಂದ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದ್ದು,  ಸೋಮವಾರದಂದು ಮಲ್ಲೇಶ್ವರಂನಲ್ಲಿರುವ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ವಿದ್ಯಾಲಯ ಸ್ವಾಯತ್ತ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳು ಮಲ್ಲೇಶ್ವರದ ಸರ್ಕಲ್ ಮಾರಮ್ಮ ದೇವಸ್ಥಾನದ ವೃತ್ತ, ಸಿ ಇ ಟಿ ಸಮೀಪ ಹಾಗೂ 18 ನೇ ಕ್ರಾಸ್ ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ, ಎನ್ ಸಿ ಸಿ ಅಧಿಕಾರಿ ಲೆಫ್ಟಿಂನೆಂಟ್ ಡಾ. ಭವ್ಯ ಭಾನುರವರ ಮಾರ್ಗದರ್ಶನದಲ್ಲಿ ಬೀದಿ ನಾಟಕ ಪ್ರದರ್ಶಿಸುವ ಮುಖೇನ ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಮನೋಜ್ಞವಾಗಿ ಅಭಿನಯಿಸಿದರು. ಉಪ ಆಯುಕ್ತರು ಮತದಾನ ಮಾಡುವ ಸಂಬಂಧ ಇ ವಿ ಎಂ ಯಂತ್ರ ಬಳಕೆ ಮಾಡಿ ಮತ ಚಲಾಯಿಸುವ ಕುರಿತಾಗಿ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮತದಾನದ ಪಾವಿತ್ರ್ಯತೆ ಕಾಯ್ದುಕೊಳ್ಳುವ ಕುರಿತು ಪ್ರತಿಜ್ಞಾವಿಧಿಯನ್ನು ಸಹ ಅವರು ಭೋದಿಸಿದರು. ಈ ವೇಳೆ ಪಶ್ಚಿಮ ವಲಯದ ಆರ್ ಓ, ಎ ಆರ್ ಓ, ಆರ್ ಐ, ದಿಶಾ ಭಾರತ್ ಎನ್ ಜಿ ಓ ನ ಶ್ರೀಮತಿ ಸ್ನೇಹ ದಾಂಲೆ ಮುಂತಾದವರು ಉಪಸ್ಥಿತರಿದ್ದರು.