ನಕಲಿ ದಾಖಲೆಗಳ ಸೃಷ್ಠಿ ನಿರ್ಗತಿಕರಿಗೆ ಮೀಸಲಿಟ್ಟ ಸ್ಥಳಕ್ಕೆ ಬೆಂಕಿ-ಹುಣಸನಹಳ್ಳಿ ವೆಂಕಟೇಶ್ ತೀವ್ರ ಖಂಡನೆ

ನಕಲಿ ದಾಖಲೆಗಳ ಸೃಷ್ಠಿ ನಿರ್ಗತಿಕರಿಗೆ ಮೀಸಲಿಟ್ಟ ಸ್ಥಳಕ್ಕೆ ಬೆಂಕಿ-ಹುಣಸನಹಳ್ಳಿ ವೆಂಕಟೇಶ್ ತೀವ್ರ ಖಂಡನೆ

ನಕಲಿ ದಾಖಲೆಗಳ ಸೃಷ್ಠಿ ನಿರ್ಗತಿಕರಿಗೆ ಮೀಸಲಿಟ್ಟ ಸ್ಥಳಕ್ಕೆ ಬೆಂಕಿ-ಹುಣಸನಹಳ್ಳಿ ವೆಂಕಟೇಶ್ ತೀವ್ರ ಖಂಡನೆ

ಬAಗಾರಪೇಟೆ ತಾಲ್ಲೂಕು, ಹುಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಪುರ ಗ್ರಾಮದ ಸರ್ವೆನಂ.22/ಪಿ1ರಲ್ಲಿ ಕರ್ನಾಟಕ ದಲಿತ ರೈತಸೇನೆಹಾಗೂ ಗ್ರಾಮಸ್ಥರ ಹೋರಾಟದ ಫಲವಾಗಿ 1ಎಕರೆ  ಜಮೀನು ಕಾರ್ಯನಿರ್ವಹಣಾಧಿಕಾರಿಗಳು ತಾಲ್ಲೂಕು ಪಂಚಾಯಿತಿ ರವರ ಹೆಸರಿನಲ್ಲಿದ್ದು, ನಿರ್ಗತಿಕರಿಗೆ ನಿವೇಶನ ನೀಡಲು ಮೀಸಲಿಡಲಾಗಿರುತ್ತದೆ. ಈ ಆಧಾರದ ಮೇಲೆಸ್ಥಳೀಯ ದಲಿತ ಬಡಕುಟುಂಬದವರು ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಎ.ಬಾಬು ಎಂಬ ಕಿಡಿಗೇಡಿಯು ನಕಲಿ ದಾಖಲೆಗಳನ್ನು ಸೃಷ್ಠಿಸಿ, ಸದರಿ ಸ್ಥಳವು ನನ್ನದೆಂದು ವಿನಾಕಾರಣ ತೊಂದರೆ ನೀಡಿ, ಬೆಂಕಿ ಹಚ್ಚಿರುತ್ತಾರೆ. ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕದಳದ ಸಮಯ ಪ್ರಜ್ಞೆಯಿಂದ ನಡೆಯಬಹುದಾದ ಭಾರಿ ಗಂಡಾAತರ ತಪ್ಪಿದೆ, ಇಂತಹ ಕಿಡಿಗೇಡಿಯನ್ನು ಈ ಕೂಡಲೇ ಬಂಧಿಸಬೇಕೆAದು ಕರ್ನಾಟಕ ದಲಿತ ರೈತಸೇನೆ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.

ಗುಡಿಸಲು ಮುಕ್ತ ರಾಜ್ಯ ಕನಸು ಭಗ್ನ:ತಾಲ್ಲೂಕಿನ ಹನುಮಂತಪುರ ಗ್ರಾಮದ ಬೆಂಕಿಗೆ ಆಹುತಿಯಾದ ಸ್ಥಳಕ್ಕೆ ಭೇಟಿ ನೀಡಿ, ನೊಂದವರಿಗೆ ಸಂತ್ವಾನ ಹೇಳಿ, ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಹುಣಸನಹಳ್ಳಿ ಗ್ರಾಮದ ಸುಮಾರು 25-30 ಕುಟುಂಬಗಳು, ಸುಮಾರು 50- 60ವರ್ಷಗಳಿಂದ ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದು, ಸರ್ಕಾರದ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಹಾಗೂ ಆಧಾರ್ ಕಾರ್ಡ್ ಸಹ ಹೊಂದಿದ್ದು, ಇವರು ಕೂಲಿ ಮಾಡಿ ಜೀವನವನ್ನು ಸಾಗಿಸುತ್ತಿದ್ದು, ಇವರಿಗೆ ವಾಸ ಮನೆ ಇಲ್ಲದೆ ಬಾಡಿಗೆ ಮನೆಗಳನ್ನು ಅವಲಂಬಿಸಿರುತ್ತಾರೆ. ಸುಮಾರು 15ವರ್ಷಗಳಿಂದ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಚುನಾಯಿತ ಪ್ರತಿನಿಧಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರೂ ಸಹ ಯಾವುದೇ ರೀತಿ ಪ್ರಯೋಜನವಾಗಿರುವುದಿಲ್ಲ. ಸರ್ಕಾರವು ಗುಡಿಸಲು ಮುಕ್ತ ರಾಜ್ಯ ಮಾಡಲು ಮತ್ತು ನಿವೇಶನ ರಹಿತರಿಗೆ, ನಿವೇಶನ ನೀಡುವುದಾಗಿ, ಪತ್ರಿಕೆಗಳಲ್ಲಿ ಮತ್ತು ಮಾದ್ಯಮಗಳಿಗೆ ಸೀಮಿತವಾಗಿದ್ದು, ಸಂವಿಧಾನಬದ್ಧವಾದ ಮೂಲಭೂತ ಹಕ್ಕುನ್ನು ನೀಡುವಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ವಿಫಲವಾಗಿರುತ್ತದೆ. ಇದರಿಂದ ಗುಡಿಸಲು ಮುಕ್ತ ರಾಜ್ಯ ಕನಸು ಭಗ್ನಗೊಂಡAತಾಗಿದೆ. ನಕಲಿ ದಾಖಲೆಗಳ ಸೃಷ್ಠಿಕರ್ತನನ್ನು ಬಂಧಿಸುವಲ್ಲಿ ಮೀನಾಮೇಷ,

ಅನುಮಾನಗಳಿಗೆ ಕಾರಣ: ಸದರಿ ಸ್ಥಳಕ್ಕೆ ಸಂಬAಧಪಟ್ಟAತೆ ಸ್ವತಃ ತಹಸೀಲ್ದಾರ್ ಅವರು 24/07/2023ರಂದು ನಮೂನೆ-51ರ ವಹಿಯಲ್ಲಿ ಸಂ.5457/91-92ರಲ್ಲಿ ಯಾವುದೋ ಹೆಸರನ್ನು ಬ್ಲೇಡ್‌ನಿಂದ ಗೀಚಿ ಎ.ಬಾಬು ಬಿನ್ ವೆಂಕಟಮ್ಮ ಹನುಮಂತಪುರ ಎಂದು ನಮೂದಿಸಿರುವುದು ಕಂಡು ಬಂದಿದೆ. ನಡವಳಿ ವಹಿಯಲ್ಲಿ ಸಾಗುವಳಿ ಚೀಟಿಯಲ್ಲಿ ನಮೂದಿರುವುದಿಲ್ಲ ಎಂಬುವುದಾಗಿ ದಾಖಲೆಯೊಂದಿಗೆ ತಿಳಿಸುತ್ತಾರೆ. ಇಷ್ಟಾದರೂ ತಾಲ್ಲೂಕು ಆಡಳಿತ ಇವರ ವಿರುದ್ದ ಕ್ರಿಮಿನಲ್ ಪ್ರಕರಣ ದೂರು ದಾಖಲಿಸಲು ಮೀನಾಮೇಷ ಎಣಿಸುತ್ತಿದೆ. ಇದರ ಹಿಂದಿನ ಉದ್ದೇಶವೇನೆಂಬುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಶ್ಲೀಲ ವೀಡಿಯೋ ಚಿತ್ರಿಕರಿಸಿದ ಎ.ಬಾಬು: ಮೂಲತಃ ಎ.ಬಾಬು ಅವರು ತಮಿಳುನಾಡಿನವರಾಗಿದ್ದು, ಈ ಭಾಗದಲ್ಲಿ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಚೀಟಿ ಪಡೆಯಲು ಹೇಗೆ ಸಾಧ್ಯ. ಸದರಿ ಸ್ಥಳದಲ್ಲಿ ವಾಸವಾಗಿರುವ ಮಹಿಳೆಯರು ಬಹಿರ್ದೆಸೆಗೆ ಹೋದಾಗ ಹಾಗೂ ಸ್ನಾನ ಮಾಡುವಾಗ ಪೊದೆ ನಿಂತು ಮೊಬೈಲ್‌ನಲ್ಲಿ ವೀಡಿಯೋ ಚಿತ್ರಿಕರಣ ಮಾಡಿರುತ್ತಾರೆ. ಇದನ್ನು ಕಂಡ ಮಹಿಳೆಯರು ಬಾಬು ಅವರನ್ನು ಪ್ರಶ್ನಿಸಲಾಗಿ ಏರು ಧ್ವನಿಯಲ್ಲಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಫೆ.8ರಂದು ಸಂಜೆ 6ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದು ಬೆಂಕಿ ಹಚ್ಚಿರುತ್ತಾರೆ ಎಂದು ಇಲ್ಲಿನ ವಾಸಿ ಸರಸ್ವತಿ ಅವರು ಆರೋಪಿಸಿದರು.

ಪೋಲಿಸ್ ಹಾಗೂ ಅಗ್ನಿಶಾಮಕದಳದ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ, ಇಓ ರವಿಕುಮಾರ್ ವಿರುದ್ದ ಆಕ್ರೋಶ: ಘಟನೆ ತಿಳಿದ ಹುಣಸನಹಳ್ಳಿ ವೆಂಕಟೇಶ್ ಅವರು ಪೊಲೀಸ್ ನಿರೀಕ್ಷಕ ನಂಜಪ್ಪ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದಾಗ ನಂಜಪ್ಪ ಹಾಗೂ ಅಗ್ನಿಶಾಮಕ ಸಿಬ್ಬಂದಿಯವರು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ನಡೆಯಬಹುದಾದ ಭಾರಿ ಅನಾಹುತ ತಪ್ಪಿತು. ಈ ಘಟನೆಗೆ ಸಂಬAಧಿಸಿದAತೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದರೆ ಸ್ವೀಕರಿಸದೇ ನಿರ್ಲಕ್ಷತನ ತೋರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸ್ಥಳೀಯ ಗ್ರಾಮಸ್ಥರು ಅಧಿಕಾರಿಯ ವಿರುದ್ದ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮುನಿರಾಜು, ಹುಳದೇನಹಳ್ಳಿ ವೆಂಕಟೇಶ್, ಹುಣಸನಹಳ್ಳಿ ಸತೀಶ್, ಭಟ್ರಕುಪ್ಪ ಅರುಣ್, ವೆಂಕಟೇಶ್, ರಾಜ್‌ಕುಮಾರ್, ರಾಜೇಶ್, ಹಂಚಾಳ ವೆಂಕಟೇಶ್, ಮಲರ್, ಗಜವೇಣಿ, ಜಯ,