ವಿದ್ಯಾ ಬೋದಿನಿ ಇಂಟೆಗ್ರಟೆಡ್ ಪಬ್ಲಿಕ್ ಶಾಲೆಯಲ್ಲಿ 2024ನೇ ಸಾಲಿನ ಕಲಾ ಮಹೋತ್ಸವ ನಡೆಯಿತು

ವಿದ್ಯಾ ಬೋದಿನಿ ಇಂಟೆಗ್ರಟೆಡ್ ಪಬ್ಲಿಕ್ ಶಾಲೆಯಲ್ಲಿ 2024ನೇ ಸಾಲಿನ ಕಲಾ ಮಹೋತ್ಸವ ನಡೆಯಿತು

ವಿದ್ಯಾ ಬೋದಿನಿ ಇಂಟೆಗ್ರಟೆಡ್ ಪಬ್ಲಿಕ್ ಶಾಲೆಯಲ್ಲಿ 2024ನೇ ಸಾಲಿನ ಕಲಾ ಮಹೋತ್ಸವ ನಡೆಯಿತು

ಕೋಲಾರ: ವಿದ್ಯಾರ್ಥಿಗಳು ಅತ್ಯಂತ ಚಿಕ್ಕವಯಸ್ಸಿನಲ್ಲಿ  ವ್ಯಕ್ತಿತ್ವವನ್ನು ರೂಪಿಸಿಕೊಂಡು  ಶಿಕ್ಷಣ ಮತ್ತು ಕ್ರೀಡೆಯ  ನಾಯಕರಾಗಬೇಕು ಎಂದು ಶ್ರೀನಿವಾಸಪುರ ತಾಲೂಕು ತಹಶೀಲ್ದಾರ್ ಜಿ.ಎನ್ ಸುಧೀಂದ್ರರವರು ತಿಳಿಸಿದರು. ತಾಲೂಕು ನರಸಾಪುರ ಹೋಬಳಿಗೆ ಸೇರಿದ ಚೌಡದೇನಹಳ್ಳಿ ಗ್ರಾಮದ ಬಳಿ ಇರುವ ವಿದ್ಯಾ ಬೋದಿನಿ ಇಂಟೆಗ್ರಟೆಡ್ ಪಬ್ಲಿಕ್ ಶಾಲೆಯಲ್ಲಿ 2024ನೇ ಸಾಲಿನ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಸೌಕರ್ಯಗಳಿಂದ ವಂಚಿತರಾಗಿದ್ದು ಅವರುಗಳು ತಮಗೆ ಸಿಗುವಂತಹ ಸೌಲಭ್ಯಗಳನ್ನು ಬಳಸಿಕೊಂಡು  ಪ್ರತಿಭಾವಂತರಾಗಬೇಕು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ನಿಮ್ಮದಾಗಿದ್ದು ಶಿಕ್ಷಣ ಮತ್ತು ಕ್ರೀಡೆಯ ಕಡೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ವಿದ್ಯಾರ್ಥಿಗಳು ನಿಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು  ಸಮಾಜದಲ್ಲಿ ಒಳ್ಳೆಯ  ಪ್ರತಿಯಾಗಿ ಬಾಳಬೇಕು, ನಮ್ಮ ದೇಶದ ನೆಲದ ಸಂಸ್ಕೃತಿ ಏನಂದರೆ ವಸುದೈವ ಕುಟುಂಬಂ, ನಮ್ಮ ದೇಶದಲ್ಲಿ ಯಾವುದೇ ಜಾತಿ, ಧರ್ಮ ಎಂಬ ಭೇದಭಾವವಿಲ್ಲದೆ  ಎಲ್ಲರೂ ಒಗ್ಗಟ್ಟಿನಿಂದ  ಬದುಕುವುದು ವಿಶೇಷವಾಗಿದೆ, ಬಹಳ ದೊಡ್ಡ ಸಂಸ್ಕೃತಿಯನ್ನು ನಾವು ಹೊಂದಿದ್ದು ಅದನ್ನು ಪಾಲಿಸಿಕೊಂಡು ಹೋಗಬೇಕು, ವಿದ್ಯಾರ್ಥಿಗಳು ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು  ಪೋಷಕರಿಗೆ ಮತ್ತು ಶಿಕ್ಷಕರಿಗೆ  ಗೌರವವನ್ನು ನೀಡಬೇಕು, ಅವರ ಆಶೀರ್ವಾದವೇ ವಿದ್ಯಾರ್ಥಿಗಳಿಗೆ ಶ್ರೀ ರಕ್ಷೆಯಾಗುತ್ತದೆ, ಮೊಬೈಲ್ ಮತ್ತು ಟಿವಿಯಿಂದ ಅಂತರವನ್ನು ಕಾಪಾಡಿಕೊಂಡು ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಇದರಿಂದ ನಿಮ್ಮ ಜ್ಞಾನಾರ್ಜನೆ ಪಡೆದು ನಿಮ್ಮ ಗುರಿಯನ್ನು ನೀವು ಸಾಧಿಸಬಹುದು ಎಂದರು. ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ  ನಂದಕುಮಾರ್ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.