ಅವನು ಅವಳಾದಾಗ ತೋರದಿರಿ ಬೇದ- ಭಾವವ

ಅವನು ಅವಳಾದಾಗ ತೋರದಿರಿ ಬೇದ- ಭಾವವ

ಅವನು ಅವಳಾದಾಗ ತೋರದಿರಿ ಬೇದ- ಭಾವವ

ಸಾಗುತಿರೆ ಜೀವನವು ಸಂತಸದಿ ಒಳಿತಿಹುದು
ಬಾಗುವುದು ಮನುಜಗುಣ ಕೇಳುತಿರಲು
ಜಾಗುರಕ ನೀನಾಗಿ ಜೀವಿಸಲು ಬದುಕಿಹುದು
ತಾಗುತಿದೆ  ಮನಕದುವೆ ಲಕ್ಷ್ಮಿ ದೇವಿ.........

ಮನುಷ್ಯ ಎಂದು ಹೇಳುವಾಗ 2 ಲಿಂಗವನ್ನು ಹೇಳುವುದು ಸಹಜ. ಸಮಾಜದಲ್ಲಿ ಬಾಳಬೇಕಾದಾಗ ಸ್ತ್ರೀಲಿಂಗ ಮತ್ತೆ ಪುರುಷ  ಎಂಬ ರೀತಿ ಲಿಂಗ ನೋಡುತ್ತೇವೆ.ಆದರೆ  ಅದರಲ್ಲಿ ಮತ್ತೊಂದು ಲಿಂಗವೆಂದರೆ  ತೃತೀಯಲಿಂಗವನ್ನು ಪೂರ್ಣವಾಗಿ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಎಲ್ಲೆಡೆಯೂ ಸಮಾನತೆ ಇದೆ ಎಂದು ಹೇಳುವ ಜನರೇ ತೃತೀಯ ಲಿಂಗದವರನ ದೂರ ಇಡುವುದನ್ನು ಸರ್ವೇಸಾಮಾನ್ಯವಾಗಿ ನೋಡುತ್ತಲೇ ಇರುತ್ತೇವೆ. ಹುಟ್ಟಿದಾಗ  ತಾಯ್ತನದ ಸಂತೋಷವನ್ನು ಪಡುವಂತಹ, ಅಮ್ಮ ಎಂದು ಕರೆಸಿಕೊಳ್ಳಲು ಹಪಹಪಿಸುವ ತಾಯಿತನದಲ್ಲಿ ಇಂತಹ ಮಗು ಜನಿಸಿದರೆ  ಏಕೆ ದೂರ ಮಾಡಬೇಕು. ಹುಟ್ಟಿದಾಗ ಗಂಡು ಮಗುವಾಗಿ ಹುಟ್ಟಿ  ಹಾರ್ಮೋನ್ ಗಳ ವ್ಯತ್ಯಾಸದಿಂದ ಹೆಣ್ಣಾದರೆ ಆ ಮಗುವಿನ ತಪ್ಪೇನು? ಒಮ್ಮೆ ಯೋಚಿಸಿ ನೋಡಿ  ಬ್ರಹ್ಮನ ಲಿಖಿತದ ಮುಂದೆ ಯಾರ ಲಿಖಿತವೂ ನಡೆಯದು. ಅವನ ಆಜ್ಞೆ   ಇಲ್ಲದೆ ಒಂದು ಹುಲ್ಲು ಕಡ್ಡಿಯೂ ಅಲುಗದು. ಅಂತಹದರಲ್ಲಿ  ಹುಟ್ಟಿಸಿದಂತ  ತಂದೆ ಆಗಿರಬಹುದು. ಜನನ ನೀಡಿದ ತಾಯಿಯೂ ಸಹ  ಕುಟುಂಬದಲ್ಲಿ ಏನೋ ದೊಡ್ಡ ಅನಾಹುತ ಆದ ರೀತಿಯಲ್ಲಿ  ಆ ಮಗುವನ್ನು  ದೂರ ಮಾಡುವುದು ಎಷ್ಟರ ಮಟ್ಟಿಗೆ ಸರಿ?  ಬದುಕಿನ ಅಲೆಗಳು ಬರುತ್ತಿರಬೇಕು, ಹೋಗುತ್ತಿರಬೇಕು, ಅಂತಹ ಅಲೆಗಳು ವೇಗವಾಯಿತೆಂದು  ಹೆದರ ಬೇಕೆ? ಎಂತಹ ಅಬ್ಬರದ ಅಲೆಗಳು ಬಂದರೂ ಸಹ ಅದನ್ನು ಸಹಿಸಿಕೊಂಡು ಬಾಳಬೇಕು. ಅದೇ ಜೀವನ.  ಜೀವನದಲ್ಲಿ ಒಂದು ಸಮರದಂತೆ ಅಂತಹ ಮಕ್ಕಳಿಗೆ ಆಸರೆ ನೀಡಿದ ಕುಟುಂಬಗಳೇ ಮುಂದಿನ ಪೀಳಿಗೆಗೆ ಪಾಠವಾಗುವಿದೆ. ಅವರ ತಪ್ಪಿಲ್ಲದೆ ಹುಟ್ಟಿದ್ದಾರೆ  ಎಂದಾಗ ಅವರನ್ನು ನಮ್ಮ ಕುಟುಂಬದಲ್ಲಿಯೇ  ಇಟ್ಟುಕೊಂಡು ಸಮಾಜದಲ್ಲಿ ಬೆಲೆ ನೀಡುವಂತೆ ಮಾಡಬೇಕು. ಆಧುನಿಕತೆಯಲ್ಲಿ ವೇಗವಾಗಿ ನಡೆಯುತ್ತಿರುವ  ಸಮಾಜದಲ್ಲಿ ಬೇದ ಭಾವಗಳನ್ನು ಅವರ ಮೇಲೆ ತೋರಿಸಿದರೆ ಏನು ಪ್ರಯೋಜನ?
" ಬೇಕೆಂದು ಹುಟ್ಟಿದವೇನು ನಾವು ಹೀಗೆ
 ಮಾಡದಿರಿ ನಮ್ಮ ಮೇಲೆ ಶೋಷಣೆ ಹಾಗೆ
 ನಮಗೂ ಸಮಾಜದಲ್ಲಿ ಹಕ್ಕಿದೆ
 ಅದನ್ನು ನೀವೇ ಕೊಡಬೇಕಿದೆ
 ಎಲ್ಲಾ ರಂಗದಲ್ಲೂ ಅವಕಾಶ ನಮಗೂ ಕೊಡಿ 
 ಉತ್ತಮ ಕಾರ್ಯ ಮಾಡಿ ತೋರಿಸುವೆ ನೋಡಿ."
 ಹೀಗೆ ಅವರ ಮನಸ್ಸು  ಬಹಳಷ್ಟು  ರೀತಿಯಲ್ಲಿ ಯೋಚನೆ ಮಾಡುತ್ತದೆ. ಹೌದು ಅವರು ಕೇಳುವುದರಲ್ಲಿ ತಪ್ಪೇನಿದೆ? ಪ್ರಕೃತಿಯಲ್ಲಿರುವಂತಹ ಹೂವುಗಳು,ಪ್ರಾಣಿಗಳು, ಕೀಟಗಳು, ಮೃಗಗಳಿಗೂ ಅವುಗಳದೇ ಆದಂತಹ  ಸಂರಕ್ಷಣೆ ಇರುವಾಗ ಏತಕೆ ಇವರಿಗೆ ಹೀಗೆ ಮಾಡುತ್ತಿರುವೆ. 
ಬಹಳ  ಪ್ರಸಿದ್ಧವಾದಂತಹ ಜನರಾಗಿರುವ  ಪ್ರಬುದ್ಧ,ಪ್ರಸಿದ್ಧ, ಪ್ರಜ್ಞಾವಂತ ವ್ಯಕ್ತಿಗಳಲ್ಲೇ  ತೃತಿಯ ಲಿಂಗದವರ  ವಿರುದ್ಧವಾಗಿ ನಡೆಯುವುದನ್ನು ನೋಡುತ್ತಿದ್ದೇವೆ. ಹುಟ್ಟಿದ ಕುಟುಂಬವು ಅವನು ಅವಳಾದಾಗ  ಒಪ್ಪಿಕೊಂಡರೆ ಈ ಪ್ರಪಂಚದಲ್ಲಿ ಎಲ್ಲರಿಗೂ ಸಮಾನತೆ ಸಿಕ್ಕಂತೆ.
" ಬದುಕಿನಲಿ  ಬಲುನೊಂದು ಮರುಗುತ್ತ ಕುಳಿತಿರಲು ಕದಳಿ ವನದಲ್ಲಿ ಮಂಗಳಮುಖಿಯರು.
 ಸುದತಿಯರ ಬಂಧುಗಳು ಸೋದರರ ಸಂಕುಲವು
 ಮಧುರತೆಯ ಮಾತಾಡಿ ಲಕ್ಷ್ಮಿ ದೇವಿ......
ಈ ಮೇಲಿನ ಮುಕ್ತ ಕದಂತೆ ಬದುಕಿನಲ್ಲಿ ಬಹಳಷ್ಟು ನೋವನ್ನು ಅನುಭವಿಸುತ್ತ ಬಹಳಷ್ಟು ನೋವಿನಿಂದ ಖಿನ್ನತೆಗೆ ಒಳಗಾಗುತ್ತಾರೆ ಮಂಗಳಮುಖಿಯರು. ಕದ್ದಳಿವನವೆಂದರೆ ಅವರದೇ ಆದಂತಹ ಒಂದು ಗುಂಪಿನ ಸಮುದಾಯನ್ನು  ಮಾಡಿಕೊಂಡು ಕಾಡಿನಲ್ಲಿ ವಾಸ ಮಾಡಿರುವ ಬಾಸದಂತೆ ಇರುತ್ತಾರೆ. ಮಂಗಳಮುಖಿಯರು ಬಹಳ  ಸುಂದರವಾಗಿರುತ್ತಾರೆ. ಸುದತಿ ಎಂದರೆ ಸುಂದರವಾದ ಅವರೊಂದಿಗೆ ಎಲ್ಲಾ ಸಂಬಂಧಿಕರಾಗಿರಬಹುದು ನಮ್ಮ ಸಮಾಜದಲ್ಲಿ ಅವರೊಂದಿಗೆ ಎಲ್ಲರು ಒಳನೋಟದಲ್ಲಿ ಹೊಂದಿಕೊಂಡು ಬಾಳಲೆಂದು ಆಶಿಸುತ್ತದೆ. ಅವರೊಂದಿಗೆ ಒಳ್ಳೆಯ ವರ್ತನೆಯನ್ನು ಮಾಡಬೇಕು ಎಂದು ಎಷ್ಟು ತಿಳಿಸಿದರು ಸಹ ಕೆಲವರು ಬೇಕು ಎಂದು ಅವರನ್ನು ಅಣಕಿಸುವುದು ಹೊಂದಾಣಿಕೆ ಮಾಡಿಕೊಳ್ಳದೆ ಕೆಟ್ಟ ಹೆಸರುಗಳನ್ನು ಇಡುವುದು ರೂಢಿಯಗಿದೆ. ಸಮಾಜದಲ್ಲಿ ಅವರಿಗೆ ಆ ಪರಿಸ್ಥಿತಿ ಬಂದಿದ್ದರೆ ಹೇಗೆ ವರ್ತಿಸುತ್ತಿದ್ದರು ಎಂಬುದನ್ನು ಯೋಚಿಸುವುದಿಲ್ಲ . ಮಂಗಳಮುಖಿ ಎಂದರೆ ಹೆಣ್ಣು ಅಲ್ಲ, ಗಂಡು ಅಲ್ಲ,ಅವರು ತೃತೀಯ ಲಿಂಗದವರು ಇವರನ್ನು ಅಧಿಕೃತವಾಗಿ ಎಲ್ಲೆಡೆಯೂ ಸಹಜ ಪ್ರವೃತ್ತಿಗೆ ಬರಲು ಸಾಧ್ಯವಾಗುತ್ತಿಲ್ಲ ಇವರನ್ನು ಹಲವಾರು ನಾಮಗಳಿಂದ ಕರೆಯುತ್ತಾರೆ. ಚಕ್ಕ, ನಪುಂಸಕ, ಕೊಜಾ, ಹಿಜ್ರಾ, ದ್ವಿ ಲಿಂಗ, ಶಿಖಂಡಿ, ಹೀಗೆ ಮನಬಂದಂತೆ ಹಲವಾರು ನಾಮಗಳಿಂದ ಕರೆಯುತ್ತಾರೆ. ಅದು ಅವರ ಮನಸ್ಸಿಗೆ ಬೇಸರವನ್ನು ಮಾಡುತ್ತದೆ. ಎಂಬುದನ್ನು ಯೋಚಿಸುವುದೇ ಇಲ್ಲ. ಹಿಜರಾ - ಎನ್ನುವುದಕ್ಕೆ ಪರ್ಷಿಯಲ್ ಭಾಷೆಯಲ್ಲಿ ವಲಸೆ ಹೋಗುವವರು ಎನ್ನುವ ಅರ್ಥವಿದೆ. ಮಂಗಳಮುಖಿಯಗಲು ಕಾರಣವೇನು ಎಂದು ಯೋಚಿಸುತ್ತಾ ಹೋದರೆ. ಹಲವಾರು ಬೇಸರದ ಸಂಗತಿಗಳು ಹೊರಬರುತ್ತದೆ. ವೈಜ್ಞಾನಿಕವಾಗಿ ಯೋಚಿಸುತ್ತಾ ಹೋದರೆ ಅರ್ಮಾನ್ ಗಳ ಏರುಪೇರುಗಳಿಂದ ಆಗುವ ಬದಲಾವಣೆ ಜೀವನದ ಹಂತವನ್ನು ಬದಲಿಸುತ್ತದೆ. ಹುಟ್ಟಿದ ತಕ್ಷಣ ನಂತರದಲ್ಲಿ ಅವನಾಗಿದ್ದ ಮಗು ಆತನಿಗೆ ತಿಳಿಯದಂತೆ 12,ರ 13 ರ ವರ್ಷದಲ್ಲಿ ಬದಲಾಗುತ್ತಾನೆ. ಅವರ ವರ್ತನೆಗಳಲ್ಲಿ ಪೂರ್ಣ ಬದಲಾವಣೆಗಳಾಗುತ್ತದೆ. ಹಾವ -ಭಾವ ಗಳಲ್ಲೂ ಬದಲಾವಣೆಗಳನ್ನು ಕಾಣುವ ಜನರು  ಅವರನ್ನು ಬಾಯಿಗೆ ಬಂದಂತೆ ಹೀಯಾಳಿಸುತ್ತಾ ಅವರ ಕುಟುಂಬಗಳಿಗೆ ಬಾಯಿಗೆ ಬಂದಂತೆ ಹೇಳುತ್ತಾ ದೂರ ಮಾಡಿಬಿಡುತ್ತಾರೆ. ಅವರ ಮನಸ್ಸಿನಲ್ಲಿ ಆಗುವಂತಹ ವೇದನೆಗಳನ್ನು ಯಾರು ಅರ್ಥೈಸಿಕೊಳ್ಳಲು ಸಿದ್ದರಾಗುವುದಿಲ್ಲ. ಜೊತೆಯಲ್ಲಿ ಹುಟ್ಟಿದಂತಹ ಅಕ್ಕ ತಂಗಿಯರು ಅರ್ಥ ಮಾಡಿಕೊಳ್ಳುವುದಿಲ್ಲ, ಅಣ್ಣ ತಮ್ಮಂದಿರು ಸ್ಪಂದಿಸುವುದಿಲ್ಲ, ಜೊತೆಯಲ್ಲಿರುವ ಸ್ನೇಹಿತರು ಸಹ ಏನು ಎಂದು ವಿಚಾರಿಸಲು ಸಿದ್ಧರಿರುವುದಿಲ್ಲ, ಒಟ್ಟಾರೆ ಅಣಕಿಸಲು ಮುಂದಿರುತ್ತಾರೆ. ಬದಲಾಗುವ ಜೀವನದಲ್ಲಿ  ಎಲ್ಲವನ್ನು ಹೊಂದಿಕೊಳ್ಳುವ ಮನುಜ. ದೇಹದಲ್ಲಿ  ಆಗುವ ಬದಲಾವಣೆಯನ್ನು ಏಕೆ ಒಪ್ಪಿಕೊಳ್ಳುವುದಿಲ್ಲ. ಮನುಜನಾಗಿ ಹುಟ್ಟಿದ ಮೇಲೆ  ಎಲ್ಲವನ್ನು ತಿಳಿದು ಬಾಳಬೇಕೆ ಹೊರತು. ಮರೆತು ಬಾಳಬಾರದು. ಅರಿವು ಎಂಬುದು ಇರಲೇಬೇಕು.
 ಪ್ರತಿಯೊಬ್ಬರು ಅಂಥವರನ್ನು ಅರ್ಥ ಮಾಡಿಕೊಂಡು ಜೀವನ ಮಾಡಬೇಕು. ಒಟ್ಟಾರೆ ಅವನು ಅವಳದಾಗ ಅವರಿಗೂ ಸಮಾಜದಲ್ಲಿ ಬೆಲೆ ಎಂದು ಜೀವಿಸಲು  ಅವಕಾಶವನ್ನು ನೀಡಿ, ಅವರಿಗೂ ಬದುಕಲು ಬಿಡಿ ಎಂದು ಹೇಳುತ್ತಾ. ನಾವೆಲ್ಲ ಒಂದೇ ಎಂಬುದನ್ನು ತಿಳಿದುಕೊಳ್ಳಿ ಎಂದು ಹೇಳುತ್ತೇನೆ. ಜೈ ಹಿಂದ್ ಜೈ ಭಾರತ  ಮಾತೆ.


ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
 ಸಾಮಾಜಿಕ ಚಿಂತಕಿ .ಶಿಕ್ಷಕಿ. ಸಾಹಿತಿ.ಹಾಸನ