ಡಾಬ

ಡಾಬ

ಡಾಬ

"ಕರ್ರನೆಯ" ರಕ್ಕಸ ಡಾಂಬರು ರಸ್ತೆ ಹೈವೇ ರಸ್ತೆಯ ಅಗಲೀಕರಣಕ್ಕೆಂದು ರಸ್ತೆಯ ಬದಿಯಲ್ಲಿದ್ದ ಆಲದ ಮರಗಳನ್ನು
ಕಡಿದು ಆ ಮರದ ಬೊಡ್ಡೆಯಿಂದ ಕಣ್ಣೀರು ಹರಿಯುವಂತೆ ಜಿನುಗುತ್ತಿದ್ದ ಆಲದ ಮರದ ಬೊಡ್ಡೆಯು ಯಾವುದೋ ಬೀಕರ
ರಸ್ತೆಯ ಅಪಘಾತದಲ್ಲಿ ಅಂಗಾಗಳನ್ನು ಕಳೆದುಕೊಂಡ ರಕ್ತಸಿಕ್ತ ಗಾಯಾಳು ನರಳುವಂತೆ ಕಾಣುತ್ತಿತ್ತು ಬಾಕಿ ಉಳಿದ ಮರಗಳು
ನಮ್ಮ ಸಾವು ಕೂಡ ಇನ್ನೇನು ಕೆಲವೇ ದಿನಗಳೆಂದು ಬಾವಿಸಿ ಗೋಳಿಡುತ್ತಿದ್ದಂತೆ ಸುತ್ತಲಿನ ವಾತಾವರಣ ಗಮನಿಸಿದರೆ
ಭಾಸವಾಗುತ್ತಿತ್ತು ಕಡಿದಾದದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮುದ್ರದಲೆಗಳಂತೆ ಅಬ್ಬರಿಸುವ ವಾಹನಗಳು
ಗುರ್ರ್,,,,,,ಬರ್ರ್,,,,,,,,,ಪಾಂವ್,,,, ಎಂದು ಅರಚಿಕೊಳ್ಳುವ ವಾಹನಗಳ ಸ್ಪೀಡು ನೋಡಿದರೆ ಇದೇನು ವ್ಯವಹಾರದ ವೇಗವೋ
ಇಲ್ಲ ಜವರಾಯನ ತಲುಪುವ ಶರವೇಗವೋ ಕಾಣೆ! ಸುರ್ರೆಂದು ವಾಹನಗಳು ಮುನ್ನಗ್ಗುತ್ತಿದ್ದರೆ ಇಡೀ ವಾತಾವರಣವೇ
ಕಂಪನವಾದ ಅನುಭವ ಈ ಹೈವೇ ರಸ್ತೆಗಳಲ್ಲಾಗುತ್ತದೆ ವರ್ಷ ಕಳೆದು ವರ್ಷ ಬಂದರು ಮುಗಿಯದ ರಸ್ತೆ ತೇಪೆ ಮೆತ್ತುವ ಕೆಲಸ
ಕಂಟ್ರಾಕ್ಟರುಗಳಿಗೆ ರಸ್ತೆ ರಿಪೇರಿಯದ್ದೇ ಕೆಲಸವೆಂದೆನಿಸುತ್ತದೆ ತರಾವರಿ ವಾಹನಗಳು ಈ ಹೆದ್ದಾರಿಗಳ ನೆಂಟರುಗಳಿದ್ದಂತೆ
ಹೆದ್ದಾರಿಯ ಬದಿಯಲ್ಲಿರುವ ಎಲ್ಲದಕ್ಕೂ ಬಾರಿ ಡಿಮ್ಯಾಂಡ್ ಎನ್ನಬಹುದು ಅದರಲ್ಲೂ ಟೀ-ಸಿಗರೇಟು ಅಂಗಡಿಗಳಿಗೆ,
ಹೋಟೆಲ್ಗಳಿಗೆ ವಿಶೇಷವಾಗಿ ಹೈವೇ ರಸ್ತೆಯ ಬದಿಯ ಡಾಬಗಳಿಗೆ ವಿಪರೀತ ಬೇಡಿಕೆ ಲಾರಿ ಡ್ರೈವರುಗಳ ಬದುಕು ಬಹುತೇಕ ಡಾಬದ
ನಂಟಿನೊಂದಿಗೆ ಸಾಗುತ್ತದೆನ್ನಬಹುದು ಊರಿಗೆ ದೊಡ್ಡವರೆನಿಸಿಕೊಂಡವರು, ಊರ ಪೋಲಿ ಪುಂಡರೆನಿಸಿಕೊಂಡವರು ಬಂದು
ಸೇರುವ ಜಾಗ ಅವರವರ ಜಾಗದಲ್ಲಿ ಅವರು ಏನೇ ಆಗಿರಬಹುದು ಡಾಬಕ್ಕೆ ಬರುವವರೆಲ್ಲರೂ ಗ್ರಾಹಕರು ಮಾತ್ರ ಇಲ್ಲಿ
ಬರುವವರೆಲ್ಲರಿಗೂ ಒಂದೊಂದು ಕಾರಣವಿರುತ್ತದೆ ಸಂತೋಷಕ್ಕೋ ದುಃಖಕ್ಕೋ ಹತಾಶೆಗೋ ಅಥವಾ ನಶೆ ಇದ್ದಷ್ಟು ಜಗದ
ಜಂಜಡಗಳ ಮರೆಯಬಹುದೆನ್ನುವ ಕುಂಟು ನೆಪಕ್ಕೋ ಒಟ್ಟಿನಲ್ಲಿ ಡಾಬದ ಲೋಕವೇ ವಿಚಿತ್ರ.

ಡಾಬಗಳನ್ನು ನೋಡಿದಾಗಲೆಲ್ಲ ಈ ಡಾಬದ ಪರಿಕಲ್ಪನೆಯ ಆಲೋಚನೆಯೇ ನನ್ನನ್ನು ಯೋಚನೆಗೆ ತಳ್ಳುತ್ತದೆ ಎಲ್ಲಾ
ಬಗೆಯ ಕುಡುಕರ ಸಾರಿ,,,,,,,ಸಾರಿ ಮಧ್ಯಪ್ರಿಯರ ಅಭಿರುಚಿಗೆ ತಕ್ಕನಾಗೆ ಅಲ್ಲಿನ ವಾತಾವರಣವನ್ನು ಕ್ರಿಯೇಟ್ ಮಾಡಿರುತ್ತಾರೆ
ಸುತ್ತಲೂ ಅಲೋಬ್ರಿಕ್ಸ್ ಇಟ್ಟಿಗೆಯೋ ಅಥವಾ ಇಟ್ಟಿಗೆಯಿಂದಲೂ ಸುತ್ತುಗೋಡೆ ನಿರ್ಮಿಸಿ ಮೇಲೆ ತೆಂಗಿನ ಗರಿಯೋ ಅಥವಾ ಒಣ
ಹುಲ್ಲಿನ ಹೊದಿಕೆಯನ್ನೋ ಹೊದಿಸಿರುತ್ತಾರೆ ಮೂರ್ನಾಲ್ಕು ಚೇರು, ಕಡಪದ ಕಲ್ಲಿನ ಡೈನಿಂಗ್ ಟೇಬಲ್, ಹಳೆಯ ನ್ಯೂಸ್
ಪೇಪರ್ಗಳನ್ನು ಟಿಶ್ಯೂ ಮಾಡಿ, ಪೆಪ್ಪರ್ ಪೌಡರ್,ಉಪ್ಪಿನ ಪೌಡರ್, ಎರಡು ಜಗ್ಗು ನೀರು ಅಲ್ಲಲ್ಲಿ ಬಿದ್ದ ಸಿಗರೇಟಿನ
ತುಂಡುಗಳು, ಮಕಾಡೆ ಮಲಗಿದ ಬೀಯರ್ ಬಾಟೆಲ್ಲುಗಳು ಮತ್ತು ಕಡ್ಡಿಪೆಟ್ಟಿಗೆ ಮಾಮುಲಿ ಒಂದತ್ತು ಪುಟ್ಟ ಪುಟ್ಟ
ರೂಮುಗಳು,ಬಿದಿರು ಬೊಂಬುಗಳಿಂದ ತಯಾರಿಸಿದ ಗೇಟ್,ಖಾಲಿ ಬಾಟೆಲ್ಲುಗಳಿಂದಲೇ ಒಂದೊಂದು ಕಡೆ ತುಂಬಾ ಕ್ರಿಯೇಟಿವ್
ಆಗಿ ಅಲಂಕಾರಗೊಳಿಸಿರುತ್ತಾರೆ ಒಂದು ಬದಿಯಲ್ಲಿ ಅಡುಗೆ ಮನೆ ಆ ಅಡುಗೆ ಮನೆಯ ಹೊಗೆಯಲ್ಲಿಯೇ ಕುಳಿತ ಮ್ಯಾನೇಜರು
ಅಥವಾ ಮಾಲೀಕರು ಎದೆಯ ಮೇಲೆ ಕೆಜಿ ಚಿನ್ನ ಐದು ಬೆರಳಲ್ಲಿ ಮೂರು ಉಂಗುರ, ಬಿಯರ್ಡ್ ದಾಡಿ, ಅಲ್ಲಿನ ವರ್ಕರ್ಗಳಿಗೆ
ಗಡಸು ಧ್ವನಿಯಲ್ಲಿ ಗ್ರಾಹಕರಿಗೆ ಆಕರ್ಷಣೀಯ ಮೆಲು ಧ್ವನಿಯಲ್ಲಿ ಮಾತನಾಡುವ ಮಾಲೀಕರು ದ್ವಿಪಾತ್ರದಾರಿಯಂತೆ ಹಾಗೂ
ಅಲ್ಲಿನ ತರಾವರಿ ಕ್ವಾಟ್ಲೆಗಳನ್ನು ಅವಡುಗಚ್ಚಿ ಸಹಿಸಿಕೊಂಡಿರುತ್ತಾರೆ ಕಾರಣ ಗ್ರಾಹಕರೆ ಡಾಬದ ದೇವರು. ಇಲ್ಲಿ ಮುಖ್ಯ
ಭೂಮಿಕೆಯಲ್ಲಿ ಬರುವವನೇ ಸರ್ವರ್ ಡಾಬದ ಬಹುಮುಖ್ಯ ಪಾತ್ರವೇ ಈತನದ್ದು ಈತನಿಗೆ ಮಾತೊಂದೆ ಬಂಡವಾಳ
ಗ್ರಾಹಕರನ್ನು ವಿಸಿಟ್ ಅಗೈನ್ ಎಂದು ಮುಂಗಡ ಮತ್ತು ಪ್ರತಿ ಸಲ ಆಹ್ವಾನ ನೀಡುವುದೆ ಇವನು ಗ್ರಾಹಕರಿಗೆ ನೀಡಿದ ಸೇವೆಯಿಂದ
ಕ್ವಾಟ್ಲೆ ಗ್ರಾಹಕರಿದ್ದರೆ ಒಮ್ಮೊಮ್ಮೆ ಸರ್ವರಣ್ಣನಿಗೆ ವಿಪರೀತ ಕಿರಿ-ಕಿರಿಯೂ ಆಗುತ್ತದೆ. ನಂಜನಗೂಡು ಮುಖ್ಯ ರಸ್ತೆಯ
ಮಧುಲೋಕವೆಂಬ ಡಾಬ ಹೈವೇ ಪಕ್ಕದಲ್ಲಿರುವ ಇದು ಹೆಸರಿಗೆ ತಕ್ಕುನಾಗೆ ಮಧುಲೋಕವೇ ಸರಿ ಡಾಬಳಿಗೆ ಸಂಜೆಯಾದರೆ
ಬೆಳಗಾದಂತೆ ಮಧ್ಯಾಹ್ನ ಮಸಾಲೆ ತಯಾರದರೆ ಸಂಜೆಗೆ ಮೂಳೆ ರುಚಿಸುತ್ತದೆ ಹಸಿವನ್ನಾದರೂ ಹೇಗೋ ತಡೆಯಬಹುದು ಆದರೆ
ತುಂಬಿದ ಬಾಟೆಲ್ ಮುಂದಿಟ್ಟುಕೊಂಡು ಸುಮ್ಮನೆ ಕೂಡಲಾಗದು.

ಸಂಜೆ ಬಟ್ಟೆ ಅಂಗಡಿಯ ಬಟವಾಡೆಗಳನ್ನು ಮುಗಿಸಿಕೊಂಡು ಸೀದಾ ನಂಜನ್ಗೂಡು ಮಾರ್ಗ ಮಧ್ಯದಲ್ಲಿ ಸಿಗುವ
ಮಧುಲೋಕಕ್ಕೆ ಮಧ್ಯಪಾನ ಸ್ನೇಹಿತರೊಂದಿಗೆ ಬಂದು ದಡಕ್,,,,,ಬಡಕ್ ಎಂದು ಚೇರ್ಗಳನ್ನು ಸರಿಪಡಿಸಿಕೊಂಡು ಮೇಜಿನ ಮೇಲೆ
ಟಣ್,ಟಣಾಲ್ ಎಂಬ ಸದ್ದಿನೊಂದಿಗೆ ಪುಲ್ ಬಾಟೆಲ್ಲುಗಳನ್ನಿರಿಸಿದ ನಂಜಪ್ಪ " ಉಡೋ ಸಿಸ್ಯಾ ಮಾದ ವಸಿ ಬ್ಯಾಗ್ನೆ ಬಾರುಡಾ
ಬರ್ತಾ ನಂಜ್ಕಳ್ಳಾಕ ಯಾನರ ತಗೊಂಡು ಮಡುಗಡಾ ಕೂಸು ಈ ಯವಾರ ಸಾಲ ಸಂಬಂದ್ಗಳ್ ನೆನಸ್ಗಂಡ್ರ ತಲ್ ಸಿಡ್ದೋಯ್ತದಾ
ನಂಗ" ಎಂದೇಳುತ್ತಲೇ ತುಂಬಿದ ಓಲ್ಡ್ ಮಂಕ್ ಬಾಟೆಲ್ ಮುಚ್ಚಳ ತೆಗೆದವನೇ ಸರ್ರೆಂದು ಖಾಲಿ ಗ್ಲಾಸಿಗೆ ಸಮವಾಗಿ ಸುರಿದು

ಜೇಬಿನಲ್ಲಿದ್ದ ಬರ್ಕ್ಲಿ ಸಿಗರೇಟನ್ನು ತೆಗೆದು ಸುರ್ರೆಂದು ಕಡ್ಡಿ ಗೀರಿ ಹಚ್ಚಿಕೊಂಡ ನಂಜಪ್ಪನ ಎಣ್ಣೆ ಚಪಲದ ಚಡಪಡಿಕೆಯನ್ನು
ಗಮನಿಸಿದ ಮಾದ ಅಲ್ಲಿನ್ಯಾವುದೋ ರೂಮಿನ ಬಳಿ ನಿಂತು "ಚಿಲ್ಲಿ ಚಿಕನ್ ಇದೆ ಸಾರ್, ಮಂದಾಕಿನಿ,ಜಿಂಜಾರ್, ಸೋಲೆ
ಕಬಾಬ್,ಚಿಕನ್ ಹೈದ್ರಾಬಾದಿ ಕೊಡ್ಲಾ ಸರ್, ಹೇ ನಂಜಪ್ಪಣ್ಣಂಗೆ ಒಂದ್ ಪ್ಲೇಟ್ ಸೋತೆಕಾಯ್ ಸಾಲಿಡು, ಒಂದ್ ಪ್ಲೇಟ್
ಎಗ್ಬರ್ಜಿ ಬಿರ್ರನೆ ರೆಡಿ ಮಾಡ್ಲಾ ಡಿಂಪಲ್ಲು ಈಗ್ಲೆ ತಂದೆ ಅಣ್ಣಾಜಿ,,,,,," ಎಂದು ನಂಜಪ್ಪನಿದ್ದ ರೂಮ್ ಕಡೆ ಲಟಕ್,,,ಪಟಕ್
ಎಂದು ಹವಾಯಿ ಚಪ್ಪಲಿಯ ಸದ್ದು ಮಾಡುತ್ತಾ ಕಿವಿಯಲ್ಲೊಂದು ಸಿಗರೇಟು ಮಡಗಿಕೊಂಡು ಹೆಗಲ ಮೇಲೆ ಕರವಸ್ತ್ರ ಹಾಕಿ
ಕೈಯಲ್ಲಿ ಸೌತೆಕಾಯಿ, ಎಗ್ಬುರ್ಜಿ ತಂದು ಮೇಜಿಗಿಟ್ಟು " ಅಣ್ಣಾ ನಿಂಗೋಸ್ಕರ ಪೆಸಲ್ಲಾಗಿ ಮಾಡಿಸ್ಸಿವ್ನೀ ಟೇಸ್ಟ್ ಮಾಡಣ್ಣ"
ಎನ್ನುತ್ತಿರುವಾಗಲೇ ಯಾವುದು ರೂಮಿನಿಂದ ಪಳ್ಳೆಂದು ಬೀಯರ್ ಬಾಟೆಲ್ಲನ್ನು ಹೊಡೆದು " ಯಾವಂಡಾ ಅವಾ ಈ
ಬಾಡೋಗಿರೋ ಸೋತೆಕಾಯಿ ಮಡ್ಗಿರಮಾ ನಾವೇನ್ ದುಡ್ ಕೊಡಲ್ವಾ ಕಣಿ!" ಚೀರಾಡಿದ್ದೇ ತಡ ಮಾದ ಮಾದೇಸ್ವುರ
ಪಾಪಡಪ್ಪಾ! ಎಂದು ಮೊರೆಯಿಡುತ್ತಾ " ಇದ್ಯಾಕಣ್ಣಾ ಕ್ವಾಪ್ಸಂಗಂಡ್ ಬಾಟ್ಲ್ ಹೊಡದಾಕ್ತಿದೆ ಬ್ಯಾರೆ ಪೆಸಲ್ ಕಾಯಿ ಕೂದು
ಉಪ್ಪು ಕಾರ ಸವರಿ ಟೇಸ್ಟಾಗಿ ಮಾಡಿಸಿಕೊಡ್ತೀನಿ ತಳಾರವಾಗಿರಣ್ಣ, ಡೇ ಯಂಕ್ಟ ಗ್ಯಾನಗೆಟ್ಟವ್ನೆ ಅಣ್ಣಾಚಿಗೆ ಪೆಸಲ್ ಸೋತೆ
ಸಾಲಿಡ್ ಸರ್ವ್ ಮಾಡ್ಡ ಬ್ಯಾಗನ ಗೂಸ್ಲು ಮೂದೇವಿ" ಎಂದು ಅದೇ ಸೌತೆಕಾಯಿಗೆ ಉಪ್ಪು ಕಾರ ಸ್ಪ್ರೇ ಮಾಡಿ "ತಕ್ಕಳೀ ಅಣ್ಣಾಚಿ
ಪ್ರಶ್ಆಗಾದ ಸಾಲಿಡು ತಿನ್ಕಂಡು ಹಂಗ ಯಣ್ಣ ಹಾಕುದ್ರ ರಪ್ಪ ಮಿಟುಕೋಸುದ್ರ ಒಳಣ ಯಣ್ಣ ಬಾಟ್ಲು ಖಾಲಿಯಾಗಿರ್ತದೆ"
ಎಂದು ಮಾದ ಮಾತಿನಲ್ಲಿಯೇ ಬಿಳಿಮಾದನಿಗೆ ಮತ್ತೇರಿಸಿದ ಮಾದ ಮಾತಿನಲ್ಲಿ ಮುಖಸ್ತುತಿ ಮಾಡಿದ್ದೇ ತಡ ಹಿಗ್ಗಿ
ಹೀರೇಕಾಯಿಯಾದ ಬಿಳಿಮಾದ ಕುಡಿದು ಚಿತ್ತಾಗಿ ಬಿಲ್ಲು ಸಾವಿರದ ಐವತ್ತೆರಡು ಎಂದೇಳಿದರೂ ಎರಡೂ ಸಾವಿರದ ಐವತ್ತೆರಡು
ರೂಪಾಯಿ ನೀಡಿದ್ದಲ್ಲದೆ ನೂರು ರೂಪಾಯಿ ಭಕ್ಷೀಸ್ಸನ್ನು ಸಹ ಮಾದನಿಗೆ ನೀಡಿ "ನಮ್ ಗಂಡು ನೀನು ಇಟ್ಗಂಡು ಸೋಕಿ
ಮಾಡೋಗ್ಲಾ ಸಿಸ್ಯಾ" ಎಂದು ಬಿದ್ದು ಎದ್ದೇಳುತ್ತಾ ಡಾಬದ ಮಗ್ಗುಲಲ್ಲಿದ್ದ ಪೆಟ್ಟಿ ಅಂಗಡಿಯ ಕಟ್ಟೆಯ ಮೇಲೆ ಮಲಗಿದ ಇತ್ತ
ಸೈಡ್ಸ್ ಖಾಲಿಯಾಗಿ ಲೈಟಾಗಿ ಕಿಕ್ ಏರುತ್ತಿದ್ದಂತೆ ನಂಜಪ್ಪಣ್ಣ " ಡೇ ಕೂಸು ಮಾದ ಬೊಪ್ಪ ಇಲ್ಲಿ ಯಾನ್ ಬಂದಿದ್ದು ನಿಂಗ
ಒಂದು ಸೋಲೆ ಕಬಾಬ್ ತತ್ತಾ ಇಲ್ಲಿ" ಎಂದು ಸಿಗರೇಟು ಸೇದಿ ಉಫ್,,,,,,ಉಸ್ಸೆಂದು ಹೊಗೆ ಬಿಡುತ್ತಾ ಜೋರಾಗಿ
ಮಾತನಾಡುತ್ತಾ ಸ್ನೇಹಿತರನ್ನು ತನ್ನ ಅರೆ ಬರೆ ಓಬಿರಾಯನ ಕಾಲದ ಜೋಕುಗಳನ್ನು ಹೇಳುತ್ತಾ ಗೊಳ್ಳೆಂದು ನಗುತ್ತಾ ಜೋಕು
ಹೇಳಿ ನಗಿಸುವ ಭರದಲ್ಲಿ ಪಕ್ಕದಲ್ಲಿದ್ದವನ ತೊಡೆಗೆ ಪಟ್ಟೆಂದು ಹೊಡೆದು "ಡೋ ಸಿಸ್ಯಾ ಶಂಕರ ಉಡೋದು ಹುಟ್ಬುಟ್ಟೀವಿ
ಕಯ್ಯಾ ಹೃದಯಕ್ಕ ಮೋಸ ಮಾಡಬಾರದು ಚಟುವಿಲ್ಲದಿರಮಾ ಚಟ್ಟುಕ್ಕ ಸಮಾನ ಕಯ್ಯಾ ಇರೋಗಂಟ ಬುಂಡೇನೆತ್ತಿ ಕುಡಿತಾ
ಇರಬೇಕು ಕಣಾ ಬೆಳಗಾದ್ರ ಸಾಕು ಇದ್ದಿದ್ದೇಯಾ ಕತ್ಗಳು"! ಎಂದು ಮದವೇರಿ ಬಂದವರು ಹೆಂಡ ಕುಡಿದ ಕೋತಿಯಂತೆ
ವಾಲಾಡುತ್ತಾ ಮನೆಗೆ ತಲುಪಿ ಅರ್ಧರಾತ್ರಿಯಲ್ಲಿ ಮನೆಬಾಗಿಲು ತಟ್ಟಿ ಪರಿವೇ ಇಲ್ಲದಂತೆ ಮಲಗಿ ಇಲ್ಲವೇ
ದಕ್ಕಿಸಿಕೊಳ್ಳಲಾರದೆ ವಾಂತಿ ಮಾಡಿಕೊಂಡು ಬೆಳಗೆದ್ದು ಯಾಕಾದರೂ ಕುಡುದ್ನಪ್ಪೋ ಎಂದು ಮಲಗಿಕೊಳ್ಳುವುದು
ಮಧ್ಯಪ್ರಿಯರ ಮಾಮುಲಿ ದಿನನಿತ್ಯದ ರಗಳೆಗಳು.

ಸರ್ಕಾರ ನಡೆಯೋದೆ ಕುಡುಕ್ರಿಂದ, ಕುಡುದ್ರೆ ನೋವೆಲ್ಲಾ ಮರಿಬೋದು ಎಂಬ ನೆಪಗಳೇ ನಮ್ಮನ್ನು ದೊಡ್ಡ ಕುಡುರನ್ನಾಗಿ
ಮುಂಬಡ್ತಿ ನೀಡುವ ಮೆಟ್ಟಿಲುಗಳು ನಾವು ದುಡಿಯುವ ಮುಕ್ಕಾಲು ಹಣವನ್ನು ಬಹುತೇಕವಾಗಿ ಈ ಮಧ್ಯಪಾನಕ್ಕೆ
ಮೀಸಲಿಡುತ್ತೇವೆ ಇದರಿಂದ ದೇಹಕ್ಕೂ ಉಪಯೋಗವಿಲ್ಲ ಜೇಬಿಗೂ ಕತ್ತರಿ ಬೀಳುವುದು ತಪ್ಪುವುದಿಲ್ಲ ಹಾಗಂತ ಕುಡಿಯುವುದೇ
ತಪ್ಪು ಎನ್ನುವುದು ನನ್ನ ವಾದವಲ್ಲ ಈ ರೀತಿ ಹೇಳಿದರೆ ಇತ್ತೀಚೆಗೆ ಸುವರ್ಣಸೌಧದ ಮುಂದೆ ಚಳಿಗಾಲದ ಅಧಿವೇಶನದ
ಸಮಯದಲ್ಲಿ ಕುಡುಕರ ಸಂಘವು ಪ್ರತಿಭಟಿಸಿದ ಬಗೆ ನನ್ನ ಕಣ್ಮುಂದೆ ಬಂದು ಭಯಪಡಿಸುತ್ತದೆ ನಶೆ ಎಂಬುದು ತಾತ್ಕಲಿಕ ಸುಖ
ವಾಸ್ತವವೆಂಬುದು ಶಾಶ್ವತ ಬದುಕಿಗೆ ಜಾಗೃತ ಹೆಜ್ಜೆಯನ್ನು ಇಡಲು ಹೇಳಿ ಕೊಡುವ ಗುರು ನಾವು ನಶೆಯಲ್ಲಿದ್ದಷ್ಟು
ಜವಾಬ್ದಾರಿಯಿಂದ ವಿಮುಖರಾಗುತ್ತೇವೆ ಎಂಬುದು ಕಟು ಸತ್ಯವೂ ಹೌದು! ಈ ಡಾಬದಲ್ಲಿ ನಡೆಯುವ ಚರ್ಚೆಗಳು, ವಾದ
ವಿವಾದಗಳು, ಆಣೆ ಪ್ರಮಾಣಗಳು, ಅಳುಗಳು, ಸೇದಿ ಸೇದಿ ಬಿಟ್ಟ ಸುಟ್ಟ ಸಿಗರೇಟಿನ ತುಂಡುಗಳು ಕೂಡ ಹೇಳುತ್ತವೆ ನನ್ನನ್ನು
ಜನರು ಸಾಕಷ್ಟು ಬಳಸಬೇಕೆನ್ನುವುದು ನನ್ನ ಆಸೆಯಾದರೂ ಬೆಂಕಿ ಕಡ್ಡಿ ಗೀರಿದ ಮೇಲೆ ಹೊಡೆಯಾಡಿದ ಮೇಲೆ ನನ್ನಲ್ಲಿರುವ ನಶೆ
ತೀರಿದ ಮೇಲೆ ತುಟಿ ಕಚ್ಚಿ ಹೊಟ್ಟೆಯೊಳಗೆ ಹೊಗೆ ಎಳೆದು ಮೂಗಿನಲ್ಲಿ ಹೊಗೆ ಬಿಟ್ಟು ಖಾಲಿಯಾದ ನಂತರ ತುಂಡು
ಬೀಡಿಯೆಂದು ಎಡಗಾಲಿಂದ ಹೊಸಕಿ ಹಾಕಿ ಬಿಡುತ್ತಾರೆ, ಬಾಟೆಲ್ಲಿನಲ್ಲಿ ಎಣ್ಣೆ ಮುಗಿದ ಮೇಲೆ ಕಲ್ಲ ಮೇಲೆ ಹೊಡೆದು ಪುಡಿ
ಮಾಡುತ್ತಾರೆಂದು ಡಾಬದೊಳಗಿನ ಒಂದೊಂದು ಪದಾರ್ಥಗಳು ಒಂದೊಂದು ಸಂದೇಶಗಳನ್ನು ನೀಡುತ್ತವೆ. ಈ ಹೆಂಡದ ಕುರಿತಾಗಿ
ಡಾ.ಜಿ.ಪಿ ರಾಜರತ್ನಂರವರ ರತ್ನನ್ ಪದಗಳ ಸಾಲು ನೆನಪಾದವು.
ಕೆ.ಶ್ರೀಧರ್ (ಕೆ.ಸಿರಿ)