ಅಡ್ಡಿ ಆತಂಕ ಇಲ್ಲದೆ ಅದ್ದೂರಿಯಾಗಿ ನೆರೆವೇರಿದ ಪವಾಡ ಬಸವೇಶ್ವರರ ಮಹಾರಥೋತ್ಸವ.

ಅಡ್ಡಿ ಆತಂಕ ಇಲ್ಲದೆ ಅದ್ದೂರಿಯಾಗಿ ನೆರೆವೇರಿದ ಪವಾಡ ಬಸವೇಶ್ವರರ ಮಹಾರಥೋತ್ಸವ.

ಪೋಟೋ ಇದೆ:-ಬಸರಕೋಡ ದಲ್ಲಿ ಬುಧವಾರ ಸಂಜೆ ಪವಾಡ ಬಸವೇಶ್ವರ ರಥೋತ್ಸವ ಸಾವಿರಾರು ಭಕ್ತರ ಜಯಘೋಷದಿಂದ ನೆರವೇರಿತು.

ಮುದ್ದೇಬಿಹಾಳ:-ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರರ ಜಾತ್ರಾ ನಿಮಿತ್ತ ಬುಧವಾರದಂದು ಅದ್ದೂರಿಯಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.ನಿಡಗುಂದಿ ಗ್ರಾಮದಿಂದ ತೇರಿನ ಕಳಸ ಮತ್ತು ಬೆಳ್ಳಿಯ ಛತ್ರಿ ಆಗಮನ,ಕಾಶಿನಕುಂಟಿ ಗ್ರಾಮದಿಂದ ಪಲ್ಲಕ್ಕಿ ಆಗಮನ ಮತ್ತು ರೂಡಗಿ ಗ್ರಾಮದಿಂದ ತೇರಿನ ಮಣಿಯನ್ನು  ಮೆರವಣಿಗೆಯ ಮುಖಾಂತರ  ಸ್ವಾಗತಿಸಿಕೊಳ್ಳಲಾಯಿತು.ಮೂರು ಲಿಂಗದ ದೇವಸ್ಥಾನದಿಂದ ಪವಾಡ ಬಸವೇಶ್ವರರ ದೇವಸ್ಥಾನದ ವರಗೆ ಕಲಶದ ಮೆರವಣಿಗೆ ನಡೆಯಿತು.ಸಂಜೆ ರಥದ ಶಿಖರಕ್ಕೆ ಕಲಶ ಎರಿಸಿದ ನಂತರ ಬಳಿಕ ಮಹಾ ರಥೋತ್ಸವ ನೆರವೇರಿತು. ಮುದ್ದೇಬಿಹಾಳ ಮತಕ್ಷೇತ್ರದ ಶಾಸಕರಾದ ಸಿ.ಎಸ್.ನಾಡಗೌಡ ಮತ್ತು ದೇವಸ್ಥಾನದ ಕಮೀಟಿ ಅಧ್ಯಕ್ಷರಾದ ಕೆ ವಾಯ್ ಬಿರಾದಾರ, ಮತ್ತು ಜಾತ್ರಾ ಕಮೀಟಿ ಅಧ್ಯಕ್ಷರಾದ ಶ್ರೀಶೈಲ ಸೂಳಿಭಾವಿ ಹಾಗೂ ರೂಡಗಿ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರು ಬುಧವಾರ ಸಂಜೆ 5-50 ನಿಮಿಷಕ್ಕೆ ರಥೋತ್ಸವಕ್ಕೆ ಚಾಲನೆ ನೀಡಿದರು.ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಮಹಾರಥೋತ್ಸವವು ಯಾವುದೇ ಅಡ್ಡಿ ಆತಂಕಗಳು ಇಲ್ಲದೆ ಪಾದಗಟ್ಟಿಯವರೆಗೆ ಹೋಗಿಬಂದಿತು.