"ಜನವರಿ 22, ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೀಪೋತ್ಸವ, ಪುಷ್ಪವೃಷ್ಟಿ, ಪ್ರವಚನ ಕಾರ್ಯಕ್ರಮ"

"ಜನವರಿ 22, ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೀಪೋತ್ಸವ, ಪುಷ್ಪವೃಷ್ಟಿ, ಪ್ರವಚನ ಕಾರ್ಯಕ್ರಮ"

"ಜನವರಿ 22, ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೀಪೋತ್ಸವ, ಪುಷ್ಪವೃಷ್ಟಿ, ಪ್ರವಚನ ಕಾರ್ಯಕ್ರಮ"

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ  ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜನವರಿ 22, ಸೋಮವಾರದಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ "ಶ್ರೀರಾಮಚಂದ್ರ ಪ್ರಭುವಿನ ಪ್ರತಿಮೆ"ಪ್ರತಿಷ್ಠಾಪನೆಯ ಮುಹೂರ್ತದ ಸಂದರ್ಭದಲ್ಲಿ ಶ್ರೀ ಮಠದಲ್ಲಿಯೂ ಸಹ ಶ್ರೀ ರಾಮಚಂದ್ರದೇವರಿಗೆ "ಪುಷ್ಪವೃಷ್ಟಿ"ಯನ್ನು ಶ್ರೀ ಮಠದ ವ್ಯವಸ್ಥಾಪಕರಾದ ಆರ್ , ಕೆ ವಾದಿಂದ್ರಾಚಾರ್ಯರು ಹಾಗೂ ಜಿ, ಕೆ ಆಚಾರ್ಯರಿಂದ ನೆರವೇರಲಿದ್ದು ನಂತರ ನೂರಾರು ಭಕ್ತಾದಿಗಳಿಂದ ಸಾಮೂಹಿಕವಾಗಿ ಸಹಸ್ರಾರು ದೀಪಗಳನ್ನು ಬೆಳಗಿಸುವ  ಮೂಲಕ ಭಕ್ತಾದಿಗಳು ಶ್ರೀರಾಮದೇವರ ಅನುಗ್ರಹಕ್ಕೆ ಪಾತ್ರರಾಗುವುದು, ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರುವುದು, ಶ್ರೀ ವಾರಿಧಿ ಭಜನಾ ಮಂಡಳಿ, ಅಕ್ಷಯ ವಿಪ್ರಭಜನಾ ಮಂಡಳಿ,  ಶ್ರೀಹರಿ ವಾಯು ಭಜನಾ ಮಂಡಳಿ, ಶ್ರೀ ಶ್ರೀಪಾದರಾಜ ಭಜನಾಮಂಡಳಿ ಇನ್ನು ಹಲವಾರು ಭಜನಾ ಮಂಡಳಿ ಸದಸ್ಯರಿಂದ ಶ್ರೀ ಹರಿ ಭಜನೆ ಕಾರ್ಯಕ್ರಮವೂ ನೆರವೇರಲಿದ್ದು, ಪಂಡಿತರಾದ ವಿದ್ವಾನ್ ರಾಯಚೂರು ಶ್ರೀ ಜಗನ್ನಾಥಾಚಾರ್ಯರಿಂದ "ಶ್ರೀ ರಾಮಾಯಣ ಸಂದೇಶ"ದ ಪ್ರವಚನ, ಮಾಲಿಕೆ, ಮತ್ತು ಉತ್ಸವಗಳೊಂದಿಗೆ ಮಹಾ ಮಂಗಳಾರತಿ ನಡೆಯಲಿದೆ, ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು, ಶ್ರೀ ರಾಮೋತ್ಸವದ ಅಂಗವಾಗಿ ಭಕ್ತರು ಎಲ್ಲಾ ಕಾರ್ಯಕ್ರಮ ಗಳಲ್ಲಿ "ಲೋಕ-ಕಲ್ಯಾಣಕ್ಕಾಗಿ" ಭಾಗವಹಿಸಿ, ನಮ್ಮ ನಿಮ್ಮ ಎಲ್ಲರ ಆರಾಧ್ಯ ದೈವ ಶ್ರೀ ರಾಮಚಂದ್ರ ದೇವರ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.