ದೇವಾಲಯಗಳ ಸ್ವಚ್ಛತಾ ಕಾರ್ಯಕಕ್ಕೆ-ಮಾಜಿ ಸಚಿವ ಡಾ.ಕೆ.ಸುಧಾಕರ್ ಚಾಲನೆ

ದೇವಾಲಯಗಳ ಸ್ವಚ್ಛತಾ ಕಾರ್ಯಕಕ್ಕೆ-ಮಾಜಿ ಸಚಿವ ಡಾ.ಕೆ.ಸುಧಾಕರ್ ಚಾಲನೆ

ದೇವಾಲಯಗಳ ಸ್ವಚ್ಛತಾ ಕಾರ್ಯಕಕ್ಕೆ-ಮಾಜಿ ಸಚಿವ ಡಾ.ಕೆ.ಸುಧಾಕರ್ ಚಾಲನೆ

ಬಾಗೇಪಲ್ಲಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ದೇವಾಲಯಗಳ ಸ್ವಚ್ಛತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಅದರಂತೆ ಇಂದು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ನಾಯಕರು ದೇವಾಲಯಗಳ ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೈ ಜೋಡಿಸಿದರು. ಪಟ್ಟಣ ಹೊರವಲಯದ ಗಡಿದಂ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಕೆ.ಸುಧಾಕರ್  ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ದೇವಸ್ಥಾನದ ಸುತ್ತಮುತ್ತಲಿನಲ್ಲಿ ಕಸ ಗುಡಿಸಿ,ದೇವಸ್ಥಾನ ಮೆಟ್ಟುಲುಗಳಿಗೆ ನೀರು ಸಿಂಪಡಿಸಿ ತೊಳೆಯುವ ಮೂಲಕ ಸ್ವಚ್ಛತಾ ಕಾರ್ಯ ಮಾಡಿ ಮಾತನಾಡಿ ಭವ್ಯ ಭಾರತ ಇತಿಹಾಸದ 560 ವರ್ಷಗಳ ಹೋರಾಟದ ಫಲಶ್ರುತಿಯಿಂದ ಶ್ರೀರಾಮ ದೇವಸ್ಥಾನ ಸ್ಥಾಪನೆ ಆಗುತ್ತಿದೆ. ಇನ್ನಾದರೂ ದೇಶದ ಪ್ರತಿಪ್ರಜೆಗಳ ಹೃದಯದಲ್ಲಿ ಶ್ರೀರಾಮ ನೆಲಸಿದ್ದಾನೆ.ಭಾರತದಲ್ಲಿ ಶ್ರೀರಾಮ ಪಟ್ಟಾಭಿಷೇಕದಿಂದ ದೇಶದೆಲ್ಲೆಡೆ ಸುಭಿಕ್ಷಯಿಂದಾಗಿ ರಾಮ ರಾಜ್ಯ ಆಗಲಿದೆ. ದೇವಸ್ಥಾನದ ಸ್ವಚ್ಛತೆಗೆ ಪ್ರಧಾನಿ‌ ನರೇಂದ್ರ ಮೋದಿ ಕರೆ ನೀಡಿದ್ದರು. ಅದರಂತೆ ಗಡಿದಂ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಇಂದು ಸ್ವಚ್ಛತೆ ಮಾಡಿದ್ದೇವೆ. ದೇಶದ ಮೂಲೆಮೂಲೆಯಲ್ಲೂ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಜನವರಿ 22ರೊಳಗೆ ಎಲ್ಲಾ ದೇವಾಲಯಗಳ ಶುದ್ಧೀಕರಣ ಕಾರ್ಯ ನಡೆಯಲಿದೆ" ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು, ವಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪರೆಡ್ಡಿ, ಬಾಗೇಪಲ್ಲಿ ಮಂಡಲ್ ಅಧ್ಯಕ್ಷ ಪ್ರತಾಪ್, ಗಂಗಿರೆಡ್ಡಿ, ಆರ್. ವೆಂಕಟೇಶ್, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಜಿ.ಎಸ್. ಸುಧಾಕರ್ ರೆಡ್ಡಿ, ಎಸ್.ವೈ. ವೆಂಕಟರಮಣರೆಡ್ಡಿ, ಮುಖಂಡರಾದ ಬ್ಲಾಕ್ ಕಾಂಗ್ರೆಸ್ ಶ್ರೀನಿವಾಸರೆಡ್ಡಿ, ಚಂದ್ರಶೇಖರ್ ರೆಡ್ಡಿ, ವೆಂಕಟರೆಡ್ಡಿ, ಅಶ್ವತ್ತರೆಡ್ಡಿ, ಚಂದ್ರಮೋಹನ್ ಬಾಬು, ಸೋಮಶೇಖರ್ ರೆಡ್ಡಿ, ಗೋಪಾಲ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.