ರೈನ್ ಬೋ ಕಲರ್ಸ್ ಕಿಡ್ಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

ರೈನ್ ಬೋ ಕಲರ್ಸ್ ಕಿಡ್ಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

ರೈನ್ ಬೋ ಕಲರ್ಸ್ ಕಿಡ್ಸ್ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ

ಮಾಲೂರು: ಮಕ್ಕಳು ಚಿಕ್ಕಂದಿನಿಂದಲೇ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗ ವಹಿಸುವುದರಿಂದ ಬುದ್ಧಿಶಕ್ತಿ ಧೈರ್ಯ ಹೆಚ್ಚಿ ಭಯ ಹೋಗಲಾಡಿಸಬಹುದು. ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಮನರಂಜನೆಗಳಲ್ಲಿ ಭಾಗವಹಿಸುವುದು ಸಹ ಪಾಠದ ಒಂದು ಭಾಗ ಎಂದು ಶಿವಾರಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುನೇಗೌಡರು ತಿಳಿಸಿದ್ದಾರೆ. ತಾಲ್ಲೂಕಿನ ಮಿಂಡಹಳ್ಳಿ ಗ್ರಾಮದ ರೈನ್ ಬೋ ಕಲರ್ಸ್ ಕಿಡ್ಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ದೀಪ  ಬೆಳಗುವುದರ ಮೂಲಕ  ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳಂತೂ ಹಲವು ಪ್ರತಿಭೆಗಳ ಆಕರವೇ ಆಗಿರುತ್ತಾರೆ. ಅಂತಹ ಮಕ್ಕಳ ಪ್ರತಿಭೆಗಳನ್ನು ಶಿಕ್ಷಕರು ಗುರುತಿಸಿ ಅವುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವಂತೆ ಮಾಡುವುದು ಸಹ ಈ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಿಂದ ಎಂದು ಮುನಿರಾಜು.ಎಂ.ಎನ್. ಸಿ ಆರ್ ಪಿ, ಹುರಳಗೆರೆ ರವರು ತಿಳಿಸಿದ್ದಾರೆ. ಹಾಗೆಯೇ ಶಾಲಾ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶಾಲಾ ಮುಖ್ಯಶಿಕ್ಷಕಿಯಾದ ಶಂಕರಮ್ಮ ಅವರ ಪ್ರಾಮಾಣಿಕ ಪ್ರಯತ್ನ ತುಂಬಾ ಚೆನ್ನಾಗಿ ಇದೆ. ಅವರ ಶಾಲೆ ಇನ್ನೂ ಉನ್ನತ ಮಟ್ಟಕ್ಕೆ ಹೋಗಲಿ ಎಂದು ಅತಿಥಿಗಳು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಮಕೃಷ್ಣಪ್ಪ.ಎಂ.ವಿ, ದೇವರಾಜ್.ಜಿ.ಕಾರ್ಯದರ್ಶಿ, ಸಿ ಆರ್ ಪಿಗಳಾದ ಎಂ.ಎನ್. ಮುನಿರಾಜು ಹುರುಲಗೆರೆ, ಗ್ರಾ.ಪಂ ಅಧ್ಯಕ್ಷ ಮುನೇಗೌಡ, ಶಿಕ್ಷಕರಾದ ವೆಂಕಟಾಚಲ ಮೂರ್ತಿ ಯಲಗೊಂಡಹಳ್ಳಿ, ಎನ್.ಎಂ.ಮುನಿರಾಜು ಮುಖ್ಯ ಶಿಕ್ಷಕರು ಸ.ಹಿ.ಪ್ರಾ.ಪಾ.ಶಾಲೆ ಬೈರಾಂಡಹಳ್ಳಿ, ರಾಜೇಶ್.ಎಸ್. ಶಿಕ್ಷಕರು ನೆರ್ಣಹಳ್ಳಿ, ಅರುಣ ಕುಮಾರಿ ಟ್ರೂ ಸನ್ ಶೈನ್ ಶಾಲೆ, ಶಂಕರಮ್ಮ.ಎಂ. ಮುಖ್ಯ ಶಿಕ್ಷಕಿ ರೈನ್ ಬೋ ಕಲರ್ ಕಿಡ್ಸ್ ಶಾಲೆ, ಪ್ರೇಮ, ಮಧು ಭರತನಾಟ್ಯ ಶಿಕ್ಷಕರು, ರೈನ್ ಬೋ ಕಲರ್ ಕಿಡ್ಸ್ ಶಾಲೆಯ ಶಿಕ್ಷಕ ವೃಂದ, ಪೋಷಕ ವೃಂದ, ಮಕ್ಕಳು ಹಾಗೂ ಸಾರ್ವಜನಿಕರು ಇದ್ದರು.