ನಾವೆಲ್ಲರೂ ಒಂದೇ ಎಂದು ಎತ್ತಿ ಹಿಡಿದ ಸೌಹಾರ್ದತೆ ಮಾನವ ಸರಪಳಿ-ತಾಲ್ಲೂಕು ಸಂಚಾಲಕ ಎ.ಜಿ.ಸುಧಾಕರ್

ನಾವೆಲ್ಲರೂ ಒಂದೇ ಎಂದು ಎತ್ತಿ ಹಿಡಿದ ಸೌಹಾರ್ದತೆ ಮಾನವ ಸರಪಳಿ-ತಾಲ್ಲೂಕು ಸಂಚಾಲಕ ಎ.ಜಿ.ಸುಧಾಕರ್

ನಾವೆಲ್ಲರೂ ಒಂದೇ ಎಂದು ಎತ್ತಿ ಹಿಡಿದ ಸೌಹಾರ್ದತೆ ಮಾನವ ಸರಪಳಿ-ತಾಲ್ಲೂಕು ಸಂಚಾಲಕ ಎ.ಜಿ.ಸುಧಾಕರ್

ಬಾಗೇಪಲ್ಲಿ: ದೇಶದಲ್ಲಿ ದ್ವೇಷ ಬಿತ್ತುತ್ತಿರುವ ಕೋಮುವಾದಿಶಕ್ತಿ, ಫ್ಯಾಸಿಸ್ಟ್ ಶಕ್ತಿಗಳನ್ನು ತೊಲಗಿಸಬೇಕು. ಪ್ರೀತಿ, ಶಾಂತಿ, ಸಹಬಾಳ್ವೆ, ಸೌಹಾರ್ದದ ಕೊಂಡಿ ಬೆಸೆಯಲು ಎಲ್ಲರೂ ಕೈಜೋಡಿಸಬೇಕು ಎಂದು ಸೌಹಾರ್ದತೆ ಕರ್ನಾಟಕ ತಾಲ್ಲೂಕು ಸಂಚಾಲಕ ಎ.ಜಿ. ಸುಧಾಕರ್ ತಿಳಿಸಿದ್ದಾರೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆದ ‘ಸೌಹಾರ್ದಕ್ಕಾಗಿ ಕರ್ನಾಟಕ’ ಮಂಗಳವಾರ ಆಯೋಜಿಸಿದ್ದ ‘ಸೌಹಾರ್ದಕ್ಕಾಗಿ ಮಾನವ ಸರಪಳಿ’ಯಲ್ಲಿ ಮಾತನಾಡಿ ರಾಜಕಾರಣಕ್ಕಾಗಿ ಜಾತಿ, ಧರ್ಮ, ಕೋಮುಗಳ ನಡುವೆ ಸಾಮರಸ್ಯ ಕದಡುವ ಪ್ರಯತ್ನ ನಡೆಯುತ್ತಿದೆ. ಇಂದು ದೇಶ ಒಡೆದ ಗಾಜಿನ ಮನೆಯಾಗಿದೆ. ಒಡೆದ ಚೂರಿನಲ್ಲಿ ರಾಜಕಾರಣಿಗಳು ತಮ್ಮ ಮುಖ ತೋರಿಸುತ್ತಿದ್ದಾರೆ. ಇದು ನಮ್ಮ ಪರಂಪರೆಯಲ್ಲ. ದೇಶವು ಸೌಹಾರ್ದ, ಸಾಮರಸ್ಯದ ಪರಂಪರೆಯನ್ನು ಪ್ರತಿಪಾದಿಸಿದೆ. ಸೌಹಾರ್ದ ಎಂದರೆ ಪಕ್ಷಪಾತವಲ್ಲ  ಪೂರ್ವಾಗ್ರಹವಲ್ಲ ಇದು ಎಲ್ಲಾ ವಲಯದ ಅವಿವೇಕಗಳನ್ನು ಮೀರಿದ ವಿವೇಕದ ಹಾದಿ;ಶಾಂತಿ, ಸಮಾಧಾನ ಮತ್ತು ಸಮಾನ ಮನಸ್ಥಿತಿಯ ಸಾಮಾಜಿಕ ಮೌಲ್ಯಪರ ಮತ್ತು ವಿರೋಧಿ ನೆಲೆಗಳಲ್ಲಿರುವ ವೈರುಧ್ಯಗಳನ್ನು ಒಂದಾಗಿಸುವ ಪ್ರಕ್ರಿಯೆಯ ಪ್ರತೀಕವೇ ಸೌಹಾರ್ದ ಇದರಿಂದದಾಗಿ ನಮ್ಮ ಭಾಗದಲ್ಲಿ ಆದಿ ಅನಾದಿ ಕಾಲದಿಂದಲೂ ಯಾವುದೇ ಗಲಭೆ-ಗಲಾಟೆಗಳಿಗೆ ಆಸ್ಪದ ನೀಡದೇ ನಾವೆಲ್ಲ ಒಂದೇ ಎಂಬುವ ಮನೋಭಾವದಿಂದ ನಾವೆಲ್ಲಾ ಒಂದಾಗಿದ್ದೇವೆ ಎಂದರು. ಸಿ.ಪಿ.ಐ ಮುಖಂಡ ಡಾ! ಅನೀಲ್ ಕುಮಾರ್ ಅವುಳಪ್ಪ ಮಾತನಾಡಿ ನಮ್ಮ ಸಂವಿಧಾನದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ಅಂಶಗಳನ್ನು ಸೌಹಾರ್ದದ ಸಕಾರಾತ್ಮಕ ಸಾಧನವಾಗಿ ಜನರಿಗೆ ಮನವರಿಕೆ ಮಾಡಿಕೊಡುವುದು ಇಂದು ಎಂದಿಗಿಂತ ಹೆಚ್ಚು ಅಗತ್ಯವಾಗಿದೆ,ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವುದು ಹೇಗೆ ಸಂವಿಧಾನ ವಿರೋಧಿಯೆಂದು ಸಾರ್ವಜನಿಕರಿಗೆ ಮತ್ತಷ್ಟು ಮನದಟ್ಟು ಮಾಡಬೇಕಾಗಿರುವ ಅವಶ್ಯಕತೆ ಇದೇ ಎಂದರು. ಈ ಸಂಧರ್ಭದಲ್ಲಿ ಜಿ. ಜಿ. ಹಳ್ಳಿ ನಾರಾಯಣ ಸ್ವಾಮಿ, ರಾಮ ಕೃಷ್ಣಾ ರೆಡ್ಡಿ, ರಘು ರಾಮರೆಡ್ಡಿ,ಚನ್ನರಾಯಪ್ಪ, ದೇವಿ ಕುಂಟ ಶ್ರೀನಿವಾಸ್, ನೂರುಲ್ಲ, ಒಬುಲರಾಜು, ಇಂತೀಯಾಜ್ ಅಹ್ಮದ್, ಮೋಟುಕುಪಲ್ಲಿ ನರಸಿಂಹಪ್ಪ, ಸೇರಿದಂತೆ ವಿವಿಧ ಸಂಘ ಸಮಸ್ಥೆಗಳ ಮುಖಂಡರು ಇದ್ದರು.