ಬೇಲೂರಿನಲ್ಲಿ ಸಿದ್ದರಾಮಯ್ಯ ಭಾಷಣ

ಬೇಲೂರಿನಲ್ಲಿ ಸಿದ್ದರಾಮಯ್ಯ ಭಾಷಣ

ಕರ್ನಾಟಕದ ತೆರಿಗೆ ಆದಾಯದಲ್ಲಿ ಹೆಚ್ಚಳವಾಗಿದೆ.
ಕರ್ನಾಟಕಕ್ಕೆ ಕೊಡಬೇಕಾದ ಹಣವನ್ನು ಕೊಟ್ಟಿಲ್ಲ.
ಜೆಡಿಎಸ್ ನವರು ರೈತರ, ನೀರಾವರಿ ಬಗ್ಗೆ ಮಾತನಾಡುತ್ತಾರೆ.
5300 ಕೋಟಿ ಕೋಟಿಯನ್ನು ಕರ್ನಾಟಕಕ್ಕೆ ಕೊಡುವುದಾಗಿ ಹೇಳಿದ್ರು.
25 ಮಂದಿ ಲೋಕಸಭಾ ಸದಸ್ಯರು ಕರ್ನಾಟಕದ ತೆರೆಗೆ ಬಗ್ಗೆ ಮಾತನಾಡಿಲ್ಲ.
ಹಾಸನದ ಪ್ರಜ್ವಲ್ ರೇವಣ್ಣ ಕೂಡಾ ಅನ್ಯಾಯದ ಬಗ್ಗೆ ಮಾತನಾಡಿಲ್ಲ.
ಕರ್ನಾಟಕದಲ್ಲಿ ಬರಗಾಲ ತಾಂಡವಾಡಿದೆ. 212 ತಾಲ್ಲೂಕುನ್ನು ಬರಗಾಲ ಎಂದು ಘೋಷಣೆ ಮಾಡಿದ್ದೇವೆ.
ಕರ್ನಾಟಕಕ್ಕೆ ಅನ್ಯಾಯವಾದ್ರೂ ರಾಜ್ಯಸಭಾ ಸದಸ್ಯ ದೇವೇಗೌಡ್ರು ಕೂಡಾ ಮಾತನಾಡಲಿಲ್ಲ.
ಹೀಗಾಗಿ ಇಂತಹ ವ್ಯಕ್ತಿಗಳನ್ನು ಮತ್ತೆ ಲೋಕಸಭೆಗೆ ಕಳುಹಿಸಬೇಕಾ.?
ದೇವೇಗೌಡ್ರು ಮಾತನಾಡಿದ್ರೆ ನನಗೂ ಮೋದಿಗೂ ಅವಿನಾಭಾವ ಸಂಬಂಧವಿದೆ ಎನ್ನುತ್ತಾರೆ.
ಹಾಗಿದ್ರೆ ಮೇಕೆದಾಡು ಯೋಜನೆಗೆ ಅನುಮತಿ ಕೊಡಸಲಿಲ್ಲವಲ್ಲ ಯಾಕೆ ದೇವೇಗೌಡ್ರೆ
ಇವತ್ತು ಬೆಂಗಳೂರು ಮತ್ತು ಸುತ್ತಮತ್ತಲಿನ ಜನರಿಗೆ ನೀರಿನ ಅವಶ್ಯಕತೆಯಿದೆ.
ಎನ್.ಡಿ.ಎ.ಅಧಿಕಾರಕ್ಕೆ ಬಂದ್ರೆ ಮೇಕೆದಾಟು ಅನುಷ್ಠಾನಗೊಳಿಸುತ್ತೇವೆ ಎನ್ನುತ್ತಾರೆ
ಮಿ.ದೇವೇಗೌಡ್ರೆ, ಚುನಾವಣೆಯಲ್ಲಿ ಯಾಕೆ ಮಾತನಾಡುತ್ತಾರೆ. ಈಗಲೇ ಅನುಮತಿ ಕೊಡ್ಸಿ ಎಂದೆ
ಮಾಜಿ ಪ್ರಧಾನಿ ಹೇಳ್ತಾರೆ ಸಿದ್ದರಾಮಯ್ಯನಿಗೆ ಗರ್ವಭಂಗ ಮಾಡಿ ಅಂತ
ಆದ್ರೆ ನನಗೆ ಗರ್ವವೇ ಇಲ್ಲ ಅಂದಮೇಲೆ ಇನ್ನು ನನ್ನ ಭಂಗ ಹೇಗೆ ಮಾಡ್ತಿರಾ..?
ಇನ್ನು ಇಷ್ಟೆಲ್ಲಾ ಅನ್ಯಯವಾದ್ರೂ ರಾಜ್ಯಕ್ಕೆ ಏನನ್ನು ಮಾಡದ ಸಂಸದರನ್ನು ದಯಮಾಡಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ ಎಂದು ಕೇಳುತ್ತೇನೆ.  ಜೆಡಿಎಸ್ ನ ಸುಪ್ರಿಮೊ…ಎಂದು ಎರಡು ಬಾರಿ ಮೂದಲಿಸಿದ ಸಿಎಂ ಸಿದ್ದರಾಮಯ್ಯ
ವಿಜಯೇಂದ್ರಗೂ ಟೀಟಿಸಿದ ಸಿದ್ದರಾಮಯ್ಯ:
ರೀ ವಿಜಯೇಂದ್ರ ನಿಮ್ಮ ಸರ್ಕಾರ ಯಾವ ವಚನಗಳನ್ನು ಈಡೇರಿಸಿದ್ದಾರೆ?
ಬಿಜೆಪಿಯ ಗ್ಯಾರಂಟಿಗಳು ಶಾಶ್ವತ, ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ ಎನ್ನುತ್ತೀರಲ್ಲ.
ಮೋದಿ ಮೊದಲ ಬಾರಿಗೆ ಬಂದಾಗ ವಿದೇಶದ ಕಪ್ಪು ಹಣ ತರುತ್ತೀರಿ ಎಂದಿರಲ್ಲ, ತರಲಿಲ್ಲ.
10 ವರ್ಷದಲ್ಲಿ 20 ಲಕ್ಷ ಉದ್ಯೋಗ ಸೃಷ್ಠಿ ಮಾಡಲಿಲ್ಲ. ಕೆಲಸ ಕೇಳಿ ಬಂದವರಿಗೆ ಪಕೋಡಾ ಮಾರಿ ಎನ್ನುತ್ತೀರಿ.
ರೈತರ ಆದಾಯ ಹೆಚ್ಚು ಮಾಡುತ್ತೀನಿ ಎಂದಿರಿ. ಆದ್ರೆ ಅದನ್ನು ದುಪ್ಪಟ್ಟು ಮಾಡಲಿಲ್ಲ.
ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೀನಿ ಎಂದು ಅದನ್ನು ಜಾರಿ ಮಾಡಿ ಅದಕ್ಕೆ ಕಾನೂನು ಚೌಕಟ್ಟಿನಲ್ಲಿ ಮನ್ನ ಮಾಡಿ ಅಂತಾರೆ
ಆದ್ರೆ ಮೋದಿ ಸಾಲ ಮಾಡಿದ್ದು, ಸಾಹುಕಾರರ, ಕೈಗಾರಿಕೋದ್ಯಮಿಗಳ 16ಲಕ್ಷ ಕೋಟಿ ಸಾಲ ಮಾಡಿದ್ರು
72ಸಾವಿರ ಕೋಟಿ ಸಾಲ ಮನ್ನ ಮಾಡಿದ್ದು ಮನ್ ಮೋಹನ್ ಸಿಂಗ್
ಹೀಗಾಗಿ ಪ್ರಜ್ವಲ್ ರೇವಣ್ಣ ರೈತರ ಸಾಲ ಮನ್ನಾ ಮಾಡಿ ಎಂದು ಲೋಕಸಭೆಯಲ್ಲಿ ಹೇಳಲಿಲ್ಲ.  
ಹೀಗಾಗಿ ನಿವೇಲ್ಲಾ ಯೋಚಿಸಿ ಮತಹಾಕಬೇಕಿದೆ.
ದೇಶದಲ್ಲಿ ಪೆಟ್ರೋಲ್, ಡಿಸೆಲ್ ಗ್ಯಾಸ್ ಬೆಲೆ ಕಡಿಮೆಯಾಗಲಿಲ್ಲ. ಬದಲಿಗೆ ಜಾಸ್ತಿಯಾಗಿದೆ.
ಹೀಗಾಗಿ ಸಂವಿದಾನ ಉಳಿಸುವ ಕೆಲಸವಾಗಬೇಕಿದೆ. ಅದ್ದರಿಂದ ದೇಶದಲ್ಲಿ ಕಾಂಗ್ರೆಸ್ ಮಾಡ್ತಿದೆ.
ಇವತ್ತು ಜೆಡಿಎಸ್ ಬಿಜೆಪಿಯ ಜೊತೆ ಸೇರಿಬಿಟ್ಟಿದೆ. ದೇವೇಗೌಡ್ರು ಹೇಳ್ತಿದ್ರು ಬಿಜೆಪಿ ಕೋಮುವಾದ ಪಕ್ಷ ಅಂತ
ಇವತ್ತು ಬಿಜೆಪಿ ಜೊತೆ ಸೇರಿ ಭಾಯಿ, ಭಾಯಿ ಅನ್ನುತ್ತಿದ್ದಾರೆ.
2019ರಲ್ಲಿ ದೇವೇಗೌಡ್ರು ಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದರು.
ಮತ್ತೆ ಪ್ರಧಾನಿಯಾದ್ರೆ ಈ ದೇಶವನ್ನೆ ಬಿಡುತ್ತೇನೆ ಎಂದರು. ದೇವೇಗೌಡ್ರು ಮಾತು ನಂಬುತ್ತೀರಾ..
ದಯಮಾಡಿ ಕೈಮುಗಿದು ಕೇಳುತ್ತೇನೆ. ಎಂದು ಕೈಮುಗಿದು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿ
ಪ್ರಜ್ವಲ್ ರೇವಣ್ಣನನ್ನು ಸೋಲಿಸಿ, ಶ್ರೇಯಸ್ ಪಟೇಲ್ ಗಲ್ಲಿಸಿ ಎಂದು ಮನವಿ ಮಾಡಿದ್ರು.