ಶ್ರೀ ಯಲ್ಲಮ್ಮ ದೇವಾಲಯದ ಕಟ್ಟಡ ಕಾಮಗಾರಿಗೆ 1.5 ಲಕ್ಷ ಮೊತ್ತದ ಚಕ್ ವಿತರಣೆ

ಶ್ರೀ ಯಲ್ಲಮ್ಮ ದೇವಾಲಯದ ಕಟ್ಟಡ ಕಾಮಗಾರಿಗೆ 1.5 ಲಕ್ಷ ಮೊತ್ತದ ಚಕ್ ವಿತರಣೆ

ಶ್ರೀ ಯಲ್ಲಮ್ಮ ದೇವಾಲಯದ ಕಟ್ಟಡ ಕಾಮಗಾರಿಗೆ 1.5 ಲಕ್ಷ ಮೊತ್ತದ ಚಕ್ ವಿತರಣೆ

ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಸಿದ್ದಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರು ಶ್ರೀ ಯಲ್ಲಮ್ಮ ದೇವಾಲಯದ ಕಟ್ಟಡ ಕಾಮಗಾರಿಗೆ 1.5 ಲಕ್ಷ ಮೊತ್ತದ ಚಕ್ ವಿತರಣೆ ಮಾಡಲಾಯಿತು. ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಸಿದ್ದಾಪುರ ಗ್ರಾಮದ ಗ್ರಾಮದ ದೇವತೆ ಯಲ್ಲಮ್ಮ ದೇವಿಯ ಕಟ್ಟಡ ಕಾಮಗಾರಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸಹಕಾರದೊಂದಿಗೆ  ಶ್ರೀ ಕ್ಷೇತ್ರ ಧರ್ಮಸ್ಥಳದ ದರ್ಮಾಧಿಕಾರಿಯಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಪ್ರಸಾಧ ರೂಪದಲ್ಲಿ ನೀಡಿದ  1.5 ಲಕ್ಷದ ಚಕ್ ಅನ್ನು ಜಿಲ್ಲಾ  ನಿರ್ದೇಶಕ ಕೇಶವ್ ದೇವಾಂಗ ರವರು ನೀಡಿದ್ರು. ನಂತರ ಮಾತನಾಡಿ ನಮ್ಮ‌ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು  ಕೇವಲ ಸಾಲ ಮಾತ್ರ ನೀಡುವುದಿಲ್ಲ  ದೇವಾಲಯಗಳು, ಶಾಲೆಗಳು, ಕೆರೆ ಕಟ್ಟೆಗಳ ಅಭಿವೃದ್ಧಿಯ ಜೊತೆಗೆ ವಾತ್ಸಲ್ಯ ಯೂಜನೆಯಡಿ  ಕಡು ಬಡವರನ್ನು ಗುರುತಿಸಿ 1 ಲಕ್ಷ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಿಸಿಕೊಟ್ಟಿದ್ದೇವೆ. ನಮ್ಮ ಪೂಜ್ಯ ವೀರೇಂದ್ರ ಹೆಗ್ಗಡೆಯವ ಸಲಹೆಯಂತೆ ಇಂದು ನಿಮ್ಮ ದೇವಾಲಯಕ್ಕೆ ಸಹಕಾರ ನೀಡಿದ್ದೇವೆ ದೇವಾಲಯದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ತಿಳಿದಿದ್ರು. ಇದೇ ಸಂದರ್ಭದಲ್ಲಿ  ತಾಲ್ಲೂಕು ಯೋಜನಾಧಿಕಾರಿಯಾದ ವೀರೇಶಪ್ಪ,  ಮೇಲ್ವಿಚಾರಕಿಯಾದ ರೇಣುಕಾ, ಸಂಘದ ನೌಕರರಾದ ಮಂಜುಳಾ, ಜಯಲಕ್ಷ್ಮಿ, ಸೇರಿದಂತೆ ಮತ್ತಿತ್ತರರು ಇದ್ದರು.