ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ-ಇಂಡಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ-ಇಂಡಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ-ಇಂಡಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ

ಇಂಡಿ:ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಇಂಡಿ ತಾಲೂಕಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಯೋಧ್ಯದಲ್ಲಿ ಬಲರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ತಾಲೂಕಿನ ಬಸವೇಶ್ವರ ವೃತ್ತ ಸಂಪೂರ್ಣ ಕೆಸರಿಮಯವಾಗಿ ಅಲಂಕಾರಗೊಂಡಿದ್ದು, ವೃತ್ತದ ಕೊನೆಯ ಅಂಚಿನಲ್ಲಿ ಬಿಲ್ಲು ಬಾಣ ಹಿಡಿದು ನಿಂತಿರುವ ರಾಮನ ಚಿತ್ರವನ್ನು ಕಾಣಿಸುತ್ತಿವೆ. ಹಾಗೂ ವೃತ್ತದಲ್ಲಿ ವೇದಿಕೆ ಸೃಷ್ಟಿಸಿ ರಾಮ ಭಾವಚಿತ್ರಕ್ಕೆ ಪೂಜೆ ಪುನಸ್ಕಾರ ಅತೀ ಉತ್ಸಾಹದಿಂದ ಭಜನೆಯಲ್ಲಿ ರಾಮನ ಭಕ್ತರು ಮುಳಗಿದ್ದರು. ಬರುವಂತಹ ಜನರಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು. ಅನ್ನ ಪ್ರಸಾದವನ್ನು ಅಭಿನವ ರಾಚೋಟೇಶ್ವರ ಶಿವಾಚಾರ್ಯರು,  ಎಸ್ ಜಿ ಕುಲಕರ್ಣಿ ಅನಿಲಗೌಡ ಬಿರಾದಾರ, ಸಚಿನ ಬೊಳೆಗಾಂವ, ಹುಚ್ಚಪ್ಪ ತಳವಾರ,ಇನ್ನೂ ಅನೇಕ ಮುಖಂಡರು ಸೇರಿ ಭಕ್ತಾಧಿಗಳಿಗೆ ಪ್ರಸಾದ ಉಣಬಡಿಸುತ್ತಿದರು. ಪ್ರತಿ ಮನೆ ಮನೆಗಳಲ್ಲೂ ವಿಶೇಷವಾಗಿ ರಾಮನ ಪೂಜೆ, ಪುರಸ್ಕಾರ ನೆರವೇರಿಸಲಾಯಿತು. ಎಲ್ಲರ ಮನೆಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.